ಚಿಕ್ಕಮಗಳೂರು: ಮುಂಗಾರು ಪೂರ್ವ ಮಳೆಯ ಕೊರತೆ ನಡುವೆ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕೂಡ ಕುಸಿತ ಕಂಡಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಿರೀಕ್ಷೆಯಷ್ಟು ಮಳೆ ಬಾರದೇ ಕೊಳವೆಬಾವಿಗಳ ನೀರಿನ ಮಟ್ಟ ಇನ್ನಷ್ಟು ಇಳಿಕೆಯಾಗುವ ಆತಂಕದಲ್ಲಿ ರೈತರಿದ್ದಾರೆ.

ಕಳೆದ ವರ್ಷ ಮಾರ್ಚ್ನಿಂದಲೇ ಮುಂಗಾರು ಪೂರ್ವ ಮಳೆ ಆರಂಭವಾಗಿತ್ತು. ಇದರಿಂದಾಗಿ ಏಪ್ರಿಲ್ನಲ್ಲಿ ಕೆರೆಕಟ್ಟೆಗಳಿಗೆ ಬಹುತೇಕ ನೀರು ಹರಿದಿತ್ತು. ಇದರಿಂದಾಗಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಿಸಿಲಿನ ನಡುವೆ ಅಂತರ್ಜಲ ಮಟ್ಟ ಏರಿಕೆ ಕಂಡಿತ್ತು. ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಏಪ್ರಿಲ್ನಲ್ಲಿ ಶೇ 20ರಷ್ಟು ಮಳೆ ಕೊರತೆಯಾದರೆ, ಮೇ ತಿಂಗಳಿನಲ್ಲಿ ಈವರೆಗೆ ಶೇ 8ರಷ್ಟು ಮಳೆ ಕಡಿಮೆಯಾಗಿದೆ.

ಈ ಎಲ್ಲಾ ಕಾರಣಗಳಿಂದ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಮಲೆನಾಡು ಭಾಗದಲ್ಲಿ ಕಳೆದ ವರ್ಷ ಸಾಕಷ್ಟು ಮಳೆಯಾಗಿತ್ತು. ಅತಿವೃಷ್ಟಿಯ ವಾತಾವರಣ ಇತ್ತು. ಆದರೂ, ಮಲೆನಾಡು ಭಾಗದ ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಇಳಿಕೆ ಕಂಡಿದೆ.

ಅತಿವೃಷ್ಟಿ ಇರಲಿ, ಅನಾವೃಷ್ಟಿ ಇರಲಿ, ಅಂತರ್ಜಲ ಕುಸಿತದಲ್ಲಿ ಕೊಪ್ಪ ತಾಲ್ಲೂಕು ಮೊದಲ ಸ್ಥಾನದಲ್ಲಿಯೇ ಇದೆ. ಈ ವರ್ಷ ಮಾತ್ರವಲ್ಲ ಕಳೆದ 11 ವರ್ಷಗಳಿಂದಲೂ ಕೊಪ್ಪ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿತ ಕಾಣಿಸುತ್ತಿದೆ. ಪಕ್ಕದ ನರಸಿಂಹರಾಜಪುರ ತಾಲ್ಲೂಕಿನಲ್ಲೂ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಶೃಂಗೇರಿ ಮತ್ತು ಮೂಡಿಗೆರೆ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಸ್ವಲ್ಪ ಏರಿಕೆ ಕಂಡಿರುವುದು ಸಮಾಧಾನ ತಂದಿದೆ.

ಅಜ್ಜಂಪುರ ತಾಲೂಕಿನಲ್ಲಿ 10 ವರ್ಷಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕಡೂರು ತಾಲ್ಲೂಕಿನಲ್ಲಿ 2014ರಿಂದ 2017ರ ಅವಧಿಯಲ್ಲಿ ಅಂತರ್ಜಲ ಮಟ್ಟ ತೀರಾ ಪಾತಾಳ ಸೇರಿತ್ತು. 27.86 ಮೀಟರ್ ಆಳಕ್ಕೆ ಇಳಿಕೆಯಾಗಿತ್ತು. ಬೇಕಾಬಿಟ್ಟಿಯಾಗಿ ಕೊಳವೆ ಬಾವಿ ಕೊರೆಯಲು ಈ ತಾಲ್ಲೂಕಿನಲ್ಲಿ ಕಡಿವಾಣ ಹಾಕಲಾಗಿದೆ. ಅಲ್ಲದೇ, ಹನಿ ನೀರಾವರಿ ಮತ ತುಂತುರು ನೀರಾವರಿಗೆ ಆದ್ಯತೆ ನೀಡಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಕಳೆದ ವರ್ಷಕ್ಕೆ ಹೋಲಿಸಿದರೆ ಕಡೂರು ತಾಲ್ಲೂ ಒಂದು ಮೀಟರ್ನಷ್ಟು ಅಂತರ್ಜಲ ಮಟ್ಟ ಇಳಿಕೆ ಕಂಡಿದೆ.

ಮುಂದಿನ ಬೇಸಿಗೆ ಕಷ್ಟ ಸಾಧ್ಯತೆ

ಮುಂಗಾರು ಪೂರ್ವ ಮಳೆಗಳು ಕೈಕೊಟ್ಟಿರುವುದರಿಂದ ಕೆರೆಗಳು ಬಹುತೇಕ ಖಾಲಿಯಾಗಿಯೇ ಇವೆ. ಇದರ ಪರಿಣಾಮವನ್ನು ಮುಂದಿನ ಬೇಸಿಗೆಯಲ್ಲಿ ಎದುರಿಸಬೇಕಾದ ಹೆಚ್ಚಿದೆ ಎಂದು ರೈತರು ಹೇಳುತ್ತಾರೆ. ಮುಂಗಾರು ಪೂರ್ವ ಮಳೆಯಲ್ಲೇ ಬಯಲು ಸೀಮೆಯ ಕೆರೆಗಳು ಭರ್ತಿಯಾಗಬೇಕಿತ್ತು. ಮುಂಗಾರು ಮಳೆಯಲ್ಲಿ ಭರ್ತಿಯಾಗುವುದು ಕೆರೆಗಳು ಭರ್ತಿಯಾಗದಿದ್ದರೆ ಮುಂದಿನ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಇನ್ನಷ್ಟು ಕುಸಿದು ತೊಂದರೆ ಎದುರಿಸುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.