ಚಿಕ್ಕಮಗಳೂರು: ಅಭಿವೃದ್ಧಿ ಕಾಮಗಾರಿ ನಡೆಯುವಾಗ ಗುತ್ತಿಗೆದಾರರು ಮುಖ್ಯವಲ್ಲ, ಕ್ಷೇತ್ರದ ಜನರು ಮುಖ್ಯ. ಸರ್ಕಾರ ನೀಡಿರುವ ಹಣ ಸದುಪಯೋಗ ಆಗಬೇಕು, ಗುಣಮಟ್ಟದ ರಸ್ತೆ ಆಗಬೇಕು ಎಂಬುದು ನನ್ನ ಒತ್ತಾಸೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ರಾಂಪುರ-ಆದಿಶಕ್ತಿನಗರ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿದ ಅವರು, ಸರ್ಕಾರ ನೀಡಿರುವ ಹಣದಿಂದ ಜನರಿಗೆ ಅನುಕೂಲವಾಗಬೇಕು, ಇದು ಜನಪ್ರತಿನಿಧಿಯ ಕೆಲಸ ಎಂದರು.

ರಾಂಪುರ ಸರ್ಕಲ್ನಿಂದ ಆದಿಶಕ್ತಿನಗರ-ಕೆ.ಆರ್.ಪೇಟೆ, ಮಾಳಲೂರು ರಸ್ತೆಯವರೆಗೆ 3 ಕಿ.ಮೀ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ₹8 ಕೋಟಿ ವೆಚ್ಚದಲ್ಲಿ ಮಾಡಲಾಗುವುದು. ಕಾಮಗಾರಿಗೆ 2024ರ ಅ.30ರಂದು ಚಾಲನೆ ನೀಡಲಾಗಿತ್ತು. ಇದಕ್ಕೆ ಕೆಲವರು ಮೊದಲು ತಾಂತ್ರಿಕ ಕಾರಣದ ತಡೆ ಒಡ್ಡಿದ್ದರು. ಆಗ ನಾವು ಸುಮ್ಮನಾಗಿದ್ದೆವು ಎಂದು ಹೇಳಿದ್ದರು.

ಈ ಭಾಗದ ಜನ ಹಾಗೂ ಆಟೊ ಚಾಲಕರು ಮೊದಲು ರಾಂಪುರದಿಂದ ಕಾಮಗಾರಿಯನ್ನು ಆರಂಭಿಸಬೇಕೆಂದು ಹೇಳಿದ್ದರು. ರಾಂಪುರ, ಆದಿಶಕ್ತಿ ನಗರ ಗಳಲ್ಲಿ ಹೆಚ್ಚು ಮನೆಗಳಿರು ಪ್ರದೇಶವಾಗಿರುವುದರಿಂದ ಮಳಲೂರು ರಸ್ತೆಯಿಂದ ಕಾಮಗಾರಿ ಆರಂಭಿಸಿದ್ದರು ಎಂದರು.

ಒಂದೂವರೆ ವರ್ಷಗಳಿಂದ ಜನರ ಒತ್ತಡ, ಯಾವುದೇ ಕಾರ್ಯಗಳಿಗೆ ಈ ಭಾಗದಲ್ಲಿ ಓಡಾಡದ ಪರಿಸ್ಥಿತಿ ಇತ್ತು. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಈ ರಸ್ತೆ ಕಾಮಗಾರಿಗೆ ಆಗ್ರಹಿಸುತ್ತಿದ್ದರು. ಪಕ್ಷಾತೀತವಾಗಿ ಜನರು ಕೇಳುತ್ತಿದ್ದರು. ಇಂದು ರಾಂಪುರದಿಂದ ಕೆಲಸ ಆರಂಭಗೊಂಡಿದೆ ಎಂದು ಹೇಳಿದರು.

ಕಾಮಗಾರಿ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದರೂ ನಂತರ ಪತ್ರ ವ್ಯವಹಾರ ಆರಂಭಿಸಿದೆ. ಕಾಮಗಾರಿ ಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ರಂಗನಾಥ್, ಉಲ್ಲಾಸ್, ಪರಮೇಶ್, ಬೇಬಿ ಜಾನ್, ವಾಜಿದ್, ಕಾರ್ಯಪಾಲಕ ಎಂಜಿನಿಯರ್ ದಿವಾಕರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-126-1932603691

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.