ಮೊಳಕಾಲ್ಮುರು: ತಾಲ್ಲೂಕಿನಾದ್ಯಂತ ಭಾನುವಾರ ಹಲವು ಗಂಟೆಗಳ ಕಾಲ ಸೋನೆ ಮಳೆ ಆಗಿದೆ.

ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಮತ್ತು ಗಾಳಿ ಹೆಚ್ಚು ಇತ್ತು. ಮಧ್ಯಾಹ್ನದ ನಂತರ ಆರಂಭವಾದ ಮಳೆ ಸಂಜೆ ತನಕವೂ ಜಿಟಿ ಜಿಟಿಯಾಗಿ ಬಿದ್ದಿತು. ಜನರು ಮನೆಯಿಂದ ಹೊರಬಂದು ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಕಷ್ಟ ಅನುಭವಿಸಿದರು. ಅರಣ್ಯ ಪ್ರದೇಶಕ್ಕೆ ಜಾನುವಾರು, ಕುರಿಗಳನ್ನು ಮೇಯಿಸಲು ಹೋಗಿದ್ದವರು ನೆನೆಯುತ್ತಾ ಮರಳಿದರು.

ಮಳೆಯು ಅರಣ್ಯ ಪ್ರದೇಶ ಮತ್ತು ಹೊಲಗಳ ಬದುವುಗಳಲ್ಲಿ ಮೇವು ಬೆಳೆಯಲು ಅನುಕೂಲವಾಗಿದೆ. ಇನ್ನೂ ಹೆಚ್ಚು ಮಳೆಯಾದಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ, ರಾಗಿ, ಸಜ್ಜೆ ಬಿತ್ತನೆಗೆ ಸಹಾಯಕವಾಗಲಿದೆ. ಈ ತಿಂಗಳ ಕೊನೆಗೆ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಬಿತ್ತನೆಗೆ ಸಿದ್ಧತೆ ನಡೆಯುತ್ತಿದೆ ಎಂದು ರೈತರು ಮಾಹಿತಿ ನೀಡಿದರು.

ಬಿ.ಜಿ.ಕೆರೆ, ಮೊಗಲಹಳ್ಳಿ, ಮಾರಮ್ಮನಹಳ್ಳಿ, ಹನುಮಂತನಹಳ್ಳಿ, ಹಿರೇಹಳ್ಳಿ, ಗೌರಸಮುದ್ರ, ಕೋನಸಾಗರ, ನೇರ್ಲಹಳ್ಳಿ, ಮೊಳಕಾಲ್ಮುರು, ನೇರ್ಲಹಳ್ಳಿ, ಹಾನಗಲ್, ರಾಯಾಪುರ ಸುತ್ತಮುತ್ತ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.