ಚಿಕ್ಕಮಗಳೂರು: ನಗರದಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು, ಸಿಡಿಲಿನ ಅಬ್ಬರದ ನಡುವೆ ಭರ್ಜರಿ ಮಳೆ ಸುರಿಯಿತು.

ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮೊದಲು ಆರಂಭವಾದ ಮಳೆ ಕೆಲ ಹೊತ್ತಿನಲ್ಲೇ ಹಲವೆಡೆ ವಿಸ್ತರಿಸಿತು. ಬಿರುಗಾಳಿ ಮತ್ತು ಸಿಡಿಲಿನ ಅಬ್ಬರಕ್ಕೆ ಜನ ಆತಂಕಗೊಂಡರು. ಎರಡು ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು ಒಂದು ಗಂಟೆ ಕಾಲ ಆರ್ಭಟಿಸಿತು.

ಭರ್ಜರಿಯಾಗಿ ಸುರಿದ ಮಳೆಗೆ ನಗರದ ಎಲ್ಲೆಡೆ ರಸ್ತೆಗಳಲ್ಲಿ ನೀರು ಹರಿಯಿತು. ನಗರದ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲೂ ಮಳೆ ಆರ್ಭಟಿಸಿತು. ಕೈಮರ, ಮಲ್ಲೇನಹಳ್ಳಿ, ಅರಿಶಿನಗುಪ್ಪೆ, ರಾಮನಹಳ್ಳಿ, ಕೆಂಪನಹಳ್ಳಿ, ಅಲ್ಲಂಪುರ, ತೇಗೂರು, ನಲ್ಲೂರು, ಇಂದಾವರ ಸುತ್ತಮುತ್ತ ಮಳೆಗೆ ಹೊಲ ಗದ್ದೆಗಳು ಜಲಾವೃತವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.