ಚಿಕ್ಕಮಳೂರು: ಗಾಳಿಗೆ ಹರಡಿಕೊಂಡ ಪ್ಲಾಸ್ಟಿಕ್, ಪೇಪರ್, ಕಸಕಡ್ಡಿ. ದುರ್ವಾಸನೆ ಬೀರುವ ಕಸದ ರಾಶಿಯಿಂದ ಉಂಟಾದ ಅನೈರ್ಮಲ್ಯದ ದರ್ಶನ ನಗರದ ಹೊಸಮನೆ ಬಡಾವಣೆಯ ಹಳೇ ಆರ್ಟಿಓ ಕಚೇರಿ ರಸ್ತೆಯಲ್ಲಿ ಸಿಗಲಿದೆ.

ಜಿಲ್ಲಾ ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ಕಚೇರಿ ಹಾಗೂ ಜಿಲ್ಲಾಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇಲ್ಲಿ ನಿತ್ಯ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಅನಿವಾರ್ಯತೆ ಈ ಬಡಾವಣೆಯ ಜನರದ್ದಾಗಿದೆ.

ಹೊಸಮನೆ ಬಡಾವಣೆಯಲ್ಲಿ ಹೆಚ್ಚು ಜನವಸತಿ ಇದ್ದು, ಈ ಮಾರ್ಗದಲ್ಲಿ ಹಳೆಯ ಕಟ್ಟಡ ಇದೆ. ಇಲ್ಲಿ ಯಾರು ವಾಸವಿಲ್ಲದ ಕಾರಣ ಈ ಬಡಾವಣೆಯ ಜನರು ಇಲ್ಲಿಗೆ ಕಸ ತಂದು ಸುರಿಯುತ್ತಾರೆ ಎಂದು ಇಲ್ಲಿನ ಸ್ಥಳೀಯರ ಆರೋಪವಾಗಿದೆ.

ಮನೆ ಬಾಗಿಲಿಗೆ ಸಮಯಕ್ಕೆ ಸರಿಯಾಗಿ ಕಸದ ವಾಹನ ಬಂದರೂ ಇಲ್ಲಿನ ನಿವಾಸಿಗಳು ಈ ಪ್ರದೇಶಕ್ಕೆ ಕಸ ತಂದು ಸುರಿಯುತ್ತಿದ್ದಾರೆ. ಪ್ಲಾಸ್ಟಿಕ್, ಪೇಪರ್, ಮನೆ ತ್ಯಾಜ್ಯ, ಹೂವು ತೋಟದ ಕಸ, ಹಳೆಯ ಬಟ್ಟೆ, ಅನುಪಯುಕ್ತ ವಸ್ತುಗಳನ್ನು ಇಲ್ಲಿ ತಂದು ರಾಶಿ ಹಾಕುತ್ತಿದ್ದಾರೆ. ನಿತ್ಯ ರಾತ್ರಿ ವೇಳೆ ಇಲ್ಲಿ ಮನೆಯ ತ್ಯಾಜ್ಯವನ್ನು ಬಿಸಾಡಲಾಗುತ್ತದೆ. ಆಹಾರ ಹರಸಿ ಬರುವ ಬೀದಿ ನಾಯಿಗಳು ಇಲ್ಲಿ ಬೀಡುಬಿಟ್ಟು ವಾಸದ ಸ್ಥಾನವಾಗಿ ಮಾಡಿಕೊಂಡಿವೆ. ಅನೇಕ ಬಾರಿ ಈ ಮಾರ್ಗದಲ್ಲಿ ಪದಾಚಾರಿಗಳನ್ನು ಹಾಗೂ ಬೈಕ್ ಸವಾರರನ್ನು ಬೀದಿನಾಯಿಗಳು ಬೆನ್ನಟ್ಟಿದ ಪರಿಣಾಮ ಆಯತಪ್ಪಿ ಬಿದ್ದ ಉದಾಹರಣೆಗಳು ಇವೆ.

ನಿತ್ಯ ಇದೇ ಮಾರ್ಗವಾಗಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ನಗರಕ್ಕೆ ತೆರಳುತ್ತಾರೆ. ಆದರೆ ಕಸದ ರಾಶಿಯ ದುರ್ವಾಸನೆ ಈ ಮಾರ್ಗದಲ್ಲಿ ಸಂಚಾರ ಮಾಡುವವರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಕಸ ಮಳೆಯಲ್ಲಿ ಒದ್ದೆಯಾಗಿ ಮತ್ತಷ್ಟು ದುರ್ವಾಸನೆ ಹೆಚ್ಚಾಗಿದೆ. ಪ್ಲಾಸ್ಟಿಕ್, ಪೇಪರ್, ಬಟ್ಟೆಗಳು ಗಾಳಿಯಲ್ಲಿ ಸೇರಿ ರಸ್ತೆಯ ತುಂಬೆಲ್ಲ ಹರಡಿಕೊಂಡಿದೆ. ಇದರಿಂದ ಬಡಾವಾಣೆಯ ಸೌಂದರ್ಯ ಮತಷ್ಟು ಮಲೀನವಾಗಿದೆ. ಕೂಡಲೇ ನಗರಸಭೆ ಕಸ ವಿಲೇವಾರಿ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-126-1373335842

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.