ಕಡೂರು: ಮದುವೆ ಮಾಡಲು ಕುಟುಂಬದ ಹಿರಿಯರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಮನನೊಂದು ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಬೋರಗಾನಹಳ್ಳಿಯಲ್ಲಿ ಗುರುವಾರ ನಡೆದಿದೆ.

ಶಿರಾ ತಾಲ್ಲೂಕು ಬ್ರಹ್ಮಸಂದ್ರ ಗ್ರಾಮದ ಯುವಕ ಕುಮಾರ (26) ಮೃತಪಟ್ಟವರು. ಕುರಿಗಾಹಿಯಾಗಿದ್ದ ಕುಮಾರ್ ಇತ್ತೀಚೆಗೆ ಸ್ವಗ್ರಾಮಕ್ಕೆ ತೆರಳಿ ಮನೆಯಲ್ಲಿ ಪೋಷಕರೊಂದಿಗೆ ಮದುವೆ ಮಾಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಇದಕ್ಕೆ ಪೋಷಕರು ಇನ್ನೂ ನಿನ್ನ ಹಿರಿಯ ಸಹೋದರರಿಗೆ ಮದುವೆ ಆಗಿಲ್ಲ, ಅವರಿಗೆ ವಿವಾಹ ಮಾಡಿದ ನಂತರ ನಿನಗೆ ವಿವಾಹ ಮಾಡುವುದಾಗಿ ಹೇಳಿದ್ದರು. ಮದ್ಯವ್ಯಸನಿಯೂ ಆಗಿದ್ದ ಯುವಕ ಮತ್ತೆ ಬೋರಗಾನಹಳ್ಳಿ ಗ್ರಾಮಕ್ಕೆ ಬಂದವನು ಮನ ನೊಂದು ಕುರಿಮಂದೆ ನಿಲ್ಲಿಸಿದ್ದ ತೋಟದ ತೆಂಗಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ತಂದೆ ನೀಡಿದ ದೂರಿನ ಅನ್ವಯ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-126-1782787280

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.