ಕಡೂರು: ತಾಲ್ಲೂಕಿನ ಹಿರೇನಲ್ಲೂರು ಹೋಬಳಿ ಗೌಡನಕಟ್ಟೆ ಹಳ್ಳಿಯ ಆಂಜನೇಯ ಸ್ವಾಮಿ ರಥೋತ್ಸವವು ಸೋಮವಾರ ಗ್ರಾಮದಲ್ಲಿ ನೆರವೇರಲಿದೆ.

ರಥೋತ್ಸವದ ಅಂಗವಾಗಿ ಶನಿವಾರ ಚಿಕ್ಕಬಾಸೂರು ಆಂಜನೇಯ ಸ್ವಾಮಿ ಉಪಸ್ಥಿತಿಯಲ್ಲಿ ಹಳ್ಳಿ ಆಂಜನೇಯ ಸ್ವಾಮಿ, ಭೂತಪ್ಪ ಮತ್ತು ಕೆಂಚರಾಯಸ್ವಾಮಿ ಮೂಲಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಗಂಗಾ ಪೂಜೆ ನಡೆಯಿತು. ಶಾಂತಿ ಹೋಮ, ಲಘು ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗದ ನಂತರ ಮೀಸಲು ಅಳೆಯುವ ಕಾರ್ಯಕ್ರಮ ನಡೆಯಿತು.

ಭಾನುವಾರ ಮಹಾಗಣಪತಿ ಹೋಮ, ನಿತ್ಯ ಹೋಮ, ರುದ್ರಾಭಿಷೇಕ, ಮಹಾಮಂಗಳಾರತಿ, ಕಳಶ ಸ್ಥಾಪನೆ, ನವಗ್ರಹ ಹೋಮ, ಲಘೂ ಪೂರ್ಣಾಹಿತಿ ಬಳಿಕ ಮಹಾಮಂಗಳಾರತಿ ತೀರ್ಥ-ಪ್ರಸಾದ ವಿನಿಯೋಗ ನಡೆಯಲಿದೆ.

ದೇವರ ಒಕ್ಕಲಿನವರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರ ಸೇವಾರ್ಥದಲ್ಲಿ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ. ಸೋಮ ವಾರ ಮೂಲ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ, ಹೋಮ ನಡೆಯಲಿದೆ. ಬಳಿಕ ರಥಕ್ಕೆ ಕಲಶಾರೋಹಣ, ಬ್ರಹ್ಮರಥೋತ್ಸವ, ಪಾನಕದ ಬಂಡಿ ಸೇವೆ ನಡೆಯಲಿದೆ. ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ತಿರುಪತಿಯ ವಿನಯ್ರೆಡ್ಡಿ ಭಾಗವತರಿಂದ ಹರಿಕಥೆ, ಮಂಗಳವಾರ ರಥಾವರೋಹಣ, ಧೂಳಿಕೋತ್ಸವ, ನಿತ್ಯಹೋಮ, ಬಲಿ, ಉಯ್ಯಾಲೋತ್ಸವದ ನಂತರ ಶಯನೋತ್ಸವ ಸೇವೆಗಳೊಂದಿಗೆ ರಥೋತ್ಸವಕ್ಕೆ ತೆರೆ ಬೀಳಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-126-1405845276

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.