ನರಸಿಂಹರಾಜಪುರ: ಕಡೂರಿನಲ್ಲಿ ಏ. 10ರಿಂದ ನಡೆಯುವ 21ನೇ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಾದಂಬರಿಗಾರ್ತಿ ಎಂ.ಜಯಮ್ಮ ಅವರಿಗೆ ಸೋಮವಾರ ಸಾಹಿತ್ಯ ಪರಿಷತ್ನಿಂದ ಅಧಿಕೃತ ಆಹ್ವಾನ ನೀಡಲಾಯಿತು.

ಬಳಿಕ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ‘ಜಿಲ್ಲೆಯಲ್ಲಿ ಎಲೆಮರೆಕಾಯಿಯಂತೆ ಕಾರ್ಯನಿರ್ವಹಿಸುವ ಪ್ರತಿಭೆಗಳನ್ನು ಗುರುತಿಸಿ ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು. ಕನ್ನಡ ಸಿರಿ ಪ್ರಶಸ್ತಿಗೆ ನರಸಿಂಹರಾಜಪುರದ ಪತ್ರಕರ್ತ ಯಡಗೆರೆ ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದ್ದು, ನಾಲ್ವರಿಗೆ ಕನ್ನಡ ಶ್ರೀ ಪ್ರಶಸ್ತಿ ನೀಡಲಾಗುತ್ತದೆ. ಕೃಷಿಗೋಷ್ಠಿ, ಮಹಿಳಾ ಗೋಷ್ಠಿ, ಜಾನಪದ ಗೋಷ್ಠಿ, ಧರ್ಮ ಮತ್ತು ಸಾಹಿತ್ಯದ ಸಾಮರಸ್ಯ ಗೋಷ್ಠಿ, ಯುವ ಗೋಷ್ಠಿ ಆಯೋಜಿಸಲಾಗಿದೆ’ ಎಂದರು.

ಸಾಹಿತ್ಯ ಪರಿಷತ್ನ ಎಂ.ರಾಜಪ್ಪ ಹಾಗೂ ಎಂ.ಜಯಮ್ಮ ಮಾತನಾಡಿದರು. ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸಾಹಿತ್ಯ ಪರಿಷತ್ನ ಇಬ್ರಾಹಿಂ ಅಹಮ್ಮದ್ ಬೇಗ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಮಾತನಾಡಿದರು.

ಕೊಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಹರ್ಷ, ಪಿ.ಸಿ. ಮ್ಯಾಥ್ಯೂ, ಸಾಹಿತ್ಯ ಪರಿಷತ್ನ ಸುನಿತಾ ಕಿರಣ್, ಲತಾ ರಾಜಶೇಖರ್, ಜಯಂತಿ, ಜುಬೇದಾ, ಶಶಿಕಲಾ, ಶ್ರೀನಿವಾಸ್, ಸುಷ್ಮಾಯುಂಗಾಧರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-126-1103024240

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.