ಕಳಸ: 2025ರ ಜೂನ್ನಲ್ಲಿ ಕಳಸ– ಕುದುರೆಮುಖ– ಎಸ್.ಕೆ. ಬಾರ್ಡರ್ ರಸ್ತೆ ಮರು ಡಾಂಬರೀಕರಣಕ್ಕೆ ₹13 ಕೋಟಿ ಬಿಡುಗಡೆ ಆಗಿತ್ತು. ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೆ ಸೊರಗಿದ್ದ ಈ ರಸ್ತೆ ಅಭಿವೃದ್ಧಿಯ ಗಜಪ್ರಸವ ಆಯಿತೆಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈವರೆಗೂ ಈ ರಸ್ತೆಯ ಕಾಮಗಾರಿಯ ಅರ್ಧದಷ್ಟೂ ನಡೆಯದೆ ಜನರಲ್ಲಿ ಮತ್ತಷ್ಟು ಅತೃಪ್ತಿ, ಅಸಮಾಧಾನ ಮನೆ ಮಾಡಿದೆ.

ಲೋಕೋಪಯೋಗಿ ಇಲಾಖೆ ವತಿಯಿಂದ ಮೊದಲ 7 ಕಿ.ಮೀ ಕಾಮಗಾರಿಗೆ ₹7 ಕೋಟಿ ಬಿಡುಗಡೆ ಮಾಡಲಾಗಿತ್ತು. ಮತ್ತೆ 6 ಕಿ.ಮೀ ರಸ್ತೆ ದುರಸ್ತಿಗೆ ಶಾಸಕಿ ನಯನಾ ಮೋಟಮ್ಮ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ₹6 ಕೋಟಿ ಹಣ ಒದಗಿಸಿದ್ದರು. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುದಾನ ಸಿಕ್ಕ ಅಪರೂಪದ ಪ್ರಕರಣ ಇದಾಗಿತ್ತು.

ಆದರೆ ಈವರೆಗೂ ಲೋಕೋಪಯೋಗಿ ಇಲಾಖೆಯ 7 ಕಿ.ಮೀ ಪೈಕಿ 4 ಕಿ.ಮೀ ಡಾಂಬರೀಕರಣ ಮಾತ್ರ ಕುಂಟುತ್ತಾ ನಡೆದಿದ್ದು, 3 ಕಿ.ಮೀ. ಕಾಮಗಾರಿ ಬಾಕಿ ಉಳಿದಿದೆ. ಕುದುರೆಮುಖ ಘಾಟಿಯಲ್ಲಿ ಪ್ರತಿದಿನ ಮಳೆ ಸುರಿಯುತ್ತಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಸಿದರೂ ಗುಣಮಟ್ಟದ ನಿರೀಕ್ಷೆ ಇಲ್ಲವಾಗಿದೆ. ಕಳೆದ ಜೂನ್ನಲ್ಲೇ ಈ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ಕಾರ್ಯಾದೇಶ ನೀಡಿದ್ದು, ಈ ವರ್ಷದ ಮಾರ್ಚ್ 24ರೊಳಗೆ ಕಾಮಗಾರಿ ಮುಗಿಯಬೇಕಿತ್ತು.

ಆಮೆ ಗತಿಯ ಕಾಮಗಾರಿ ಮತ್ತು ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಚೆನ್ನಯ್ಯ ಅವರನ್ನು ಪ್ರಶ್ನಿಸಿದಾಗ ಅವರು, ‘ಡಾಂಬರು ಬೆಲೆ ಏರಿದ್ದರಿಂದ ಗುತ್ತಿಗೆದಾರರು ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ. ಅವರಿಗೆ ದಂಡ ವಿಧಿಸುತ್ತೇವೆ’ ಎಂದರು.

ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಇಷ್ಟರಲ್ಲೇ ಮುಗಿಯಬೇಕಿದ್ದ 6 ಕಿ.ಮೀ. ರಸ್ತೆಯ ಡಾಂಬರೀಕರಣ ಈವರೆಗೂ ಆರಂಭವಾಗಿಯೇ ಇಲ್ಲ. ರಸ್ತೆ ಪಕ್ಕ ಅಷ್ಟಿಷ್ಟು ಮಣ್ಣು ಕೊರೆದಿದ್ದು, ಬಿಟ್ಟರೆ ಯಾವ ಕೆಲಸವೂ ಆಗಿಲ್ಲ ಎಂಬುದು ಜನರ ದೂರು.

‘ರಾಜ್ಯದಲ್ಲೇ ಮಾದರಿ ಆಗಿದ್ದ ಕುದುರೆಮುಖ– ಎಸ್.ಕೆ. ಬಾರ್ಡರ್ ರಾಜ್ಯ ಹೆದ್ದಾರಿ ಈಗ ರಾಜ್ಯದಲ್ಲೇ ಅತ್ಯಂತ ಹದಗೆಟ್ಟ ಹೆದ್ದಾರಿಯಾಗಿದೆ. ಅನುದಾನ ಒದಗಿಸಿದರೂ ಅಧಿಕಾರಿಗಳು ಕಾಮಗಾರಿ ಮಾಡಿಸಲು ಆಗದೆ ಕೈಚೆಲ್ಲಿದ್ದಾರೆ’ ಎನ್ನುತ್ತಾರೆ ಎರಡು ವರ್ಷಗಳಿಂದ ಹೋರಾಟ ಸಂಘಟಿಸುತ್ತಿರುವ ನೆಲ್ಲಿಬೀಡು ತೇಜಸ್.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ವಿಘ್ನೇಶ್ ಪ್ರತಿಕ್ರಿಯಿಸಿ, ‘ಮಧ್ಯ ಏಷ್ಯಾ ಯುದ್ಧದ ಕಾರಣಕ್ಕೆ ಬಿಟ್ಯುಮಿನ್ (ಡಾಂಬರು) ಸಿಗದೆ ಕಾಮಗಾರಿ ಮುಗಿಸಲು ಆಗುತ್ತಿಲ್ಲ’ ಎಂದರು. ಕಳೆದ ವರ್ಷದಿಂದಲೂ ಈವರೆಗೆ ಕಾಮಗಾರಿ ಆರಂಭಿಸದೆ ಗುತ್ತಿಗೆದಾರ ವಿಳಂಬ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಅವರು ಉತ್ತರ ನೀಡಲಿಲ್ಲ.

‘ಸಕಾಲಕ್ಕೆ ಗುತ್ತಿಗೆದಾರರಿಂದ ಕೆಲಸ ಮಾಡಿಸಲು ವಿಫಲವಾದ ಎರಡೂ ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಮಲೆನಾಡು ಮತ್ತು ಕರಾವಳಿ ಬೆಸೆಯುವ ಪ್ರಮುಖ ರಸ್ತೆಯ ಸ್ಥಿತಿ ಅಧೋಗತಿ ಆಗಿದೆ. ಚಿಕಿತ್ಸೆ ಪಡೆಯಲು ಈ ಹೆದ್ದಾರಿ ಮೂಲಕ ಮಂಗಳೂರು, ಮಣಿಪಾಲದ ಆಸ್ಪತ್ರೆಗಳಿಗೆ ತೆರಳುವ ರೋಗಿಗಳು ಅರೆಜೀವ ಆಗುವುದು ತಪ್ಪಿಲ್ಲ’ ಎಂದು ಕಳಸ ತಾಲ್ಲೂಕಿನ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.