ಕಳಸ: ತಾಲ್ಲೂಕು ಕೇಂದ್ರವಾಗಿ ನಾಲ್ಕು ವರ್ಷ ಕಳೆದ ಬಳಿಕ ಕಳಸ ಪಟ್ಟಣ ಪಂಚಾಯಿತಿಗೆ ನಕಾಶೆ ರಚನೆಯಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಜ್ಜಾಗಿದೆ.

ಇದುವರೆಗೂ ಗ್ರಾಮ ಪಂಚಾಯಿತಿ ಕೇಂದ್ರವಾಗಿಯೇ ಉಳಿದಿರುವ ಕಳಸದಲ್ಲಿ ಅಭಿವೃದ್ಧಿಗೆ ಅಗತ್ಯ ಅನುದಾನ ಕೊರತೆ ತೀವ್ರವಾಗಿದ್ದು, ಪಟ್ಟಣ ಪಂಚಾಯಿತಿ ರಚನೆಗೆ ಕಳೆದ ಮೂರು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿತ್ತು.

ಜಿಲ್ಲೆಯ ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿ ಆಗಿರುವ ಕಳಸದಿಂದ ಪಟ್ಟಣ ಪಂಚಾಯಿತಿಗೆ ಬೇಕಾದಷ್ಟು ಪ್ರದೇಶ ಬೇರ್ಪಡಿಸಿ ನಕಾಶೆ ರಚಿಸಲಾಗಿದೆ. ಕಳಸ ಪಟ್ಟಣ ಪಂಚಾಯಿತಿ ಘೋಷಣೆ ಆದಲ್ಲಿ ಪಟ್ಟಣ ಪಂಚಾಯಿತಿಯ ನಕಾಶೆ ಹೊರತುಪಡಿಸಿ, ಉಳಿದ ಪ್ರದೇಶಕ್ಕೆ ಕಳಸ ಗ್ರಾಮಾಂತರ ಪಂಚಾಯಿತಿ ರಚನೆ ಆಗಲಿದೆ. ಪ್ರಸ್ತಾವಿತ ಕಳಸ ಪಟ್ಟಣ ಪಂಚಾಯಿತಿ ನಕಾಶೆಯು ಭಾಗಶಃ ಮಾವಿನಕೆರೆ ಗ್ರಾಮದ 512 ಹೆಕ್ಟೇರ್ (1280 ಎಕರೆ) ಒಳಗೊಂಡಿದೆ.

ಪಟ್ಟಣ ಪಂಚಾಯಿತಿ ನಕಾಶೆಯು ಕಳಸ ಕೆ.ಎಂ. ರಸ್ತೆಯ ಬೇಡಕ್ಕಿ ಹಳ್ಳದ ಬಲಭಾಗದಿಂದ ಆರಂಭಿಸಿ ಎಡದಾಳು, ಕಳಸೇಶ್ವರ ನಗರ, ರುದ್ರಪಾದ, ಇಡೀ ಕಳಸ ಪೇಟೆ, ಕೆಳಂಗಡಿ, ಮೇಲಂಗಡಿ, ಗಣಪತಿಕಟ್ಟೆ, ಅಂಬಾತೀರ್ಥದವರೆಗೆ ಸಾಗಿ ಭದ್ರಾ ನದಿಯ ಬಲಭಾಗದ ಹೆಬ್ಬೊಳೆ ಪ್ರದೇಶ ಒಳಗೊಂಡಿದೆ. ವಶಿಷ್ಟಾಶ್ರಮದಿಂದ ಬಲಕ್ಕೆ ತಿರುಗಿ ಕಳಸೇಶ್ವರ ದೇವಸ್ಥಾನದವರೆಗೆ ಸಾಗುವ ಗಡಿ ಗುರುತು ಆನಂತರ ಕೈಮರದವರೆಗೂ ವ್ಯಾಪಿಸಿದೆ. ಕಲ್ಮಕ್ಕಿ ಪ್ರವೇಶಿಸುವ ಸ್ಥಳದಲ್ಲಿ ಬಲಕ್ಕೆ ತಿರುಗಿದ ಗಡಿ ಕಲ್ಮಕ್ಕಿ ಪ್ರದೇಶವನ್ನು ನಕಾಶೆಯಿಂದ ಹೊರಗೆ ಉಳಿಸಿದೆ. ಆನಂತರ ಗಡಿಯು ಮತ್ತೆ ಬೇಡಕ್ಕಿ ಹಳ್ಳದ ಬಲಭಾಗದವರೆಗೂ ವ್ಯಾಪಿಸಿದೆ.

ಇದರಲ್ಲಿ 175 ಹೆಕ್ಟೇರ್ ಪ್ರದೇಶ ಅಭಿವೃದ್ಧಿ ಹೊಂದಿದ ಪ್ರದೇಶವಾಗಿದ್ದು, 333 ಹೆಕ್ಟೇರ್ ಕೃಷಿ ಭೂಮಿ ಆಗಿದೆ. 4 ಹೆಕ್ಟೇರ್ನಷ್ಟು ಭದ್ರಾ ನದಿ ಮತ್ತು ಬೇಡಕ್ಕಿ ಹಳ್ಳ ಒಳಗೊಂಡಿದೆ. ಪಟ್ಟಣ ಪಂಚಾಯಿತಿಯು ಸುಮಾರು 3,500 ಜನಸಂಖ್ಯೆ ಹೊಂದಲಿದ್ದು, 750ಕ್ಕೂ ಹೆಚ್ಚು ಮನೆಗಳು ಸೇರಲಿವೆ. ಕಳಸ ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ ಬಂದಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಅನುದಾನ ಸಿಗಲಿದೆ. ಇದರಿಂದ ತಾಲ್ಲೂಕು ಕೇಂದ್ರದ ಸ್ಥಾನಮಾನ ಪಡೆದಿರುವ ಕಳಸದ ಸರ್ವಾಂಗೀಣ ಬೆಳವಣಿಗೆ ಆಗಲಿದೆ ಎಂಬ ನಿರೀಕ್ಷೆ ಬಲವಾಗಿದೆ. ಆದ್ದರಿಂದಲೇ ಕಳಸ ಪಟ್ಟಣ ಪಂಚಾಯಿತಿ ನಕಾಶೆಯನ್ನು ಅಳೆದು ತೂಗಿ ರಚಿಸಲಾಗಿದೆ.

ಕಳಸ ಪಟ್ಟಣ ಪಂಚಾಯಿತಿ ಪ್ರಸ್ತಾವನೆ ಬಗ್ಗೆ ಶಾಸಕಿ ನಯನಾ ಮೋಟಮ್ಮ ಅವರನ್ನು ಕೇಳಿದಾಗ, ‘ಕಳಸ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದ ನಂತರ ಯಾವುದೇ ಕೆಲಸ ಆಗಿರಲಿಲ್ಲ. ಈಗ ಒಂದೊಂದಾಗಿ ಎಲ್ಲವನ್ನೂ ಮಾಡಲಾಗುತ್ತಿದೆ. ಸಂಪನ್ಮೂಲದ ಕೊರತೆಯಿಂದ ಕಳಸ ಪಟ್ಟಣ ಪೂರ್ಣಪ್ರಮಾಣದ ತಾಲ್ಲೂಕು ಆಗಿ ಕಾರ್ಯನಿರ್ವಹಿಸಲು ಕೆಲ ವರ್ಷ ಬೇಕಾಗಬಹುದು. ಅಷ್ಟರಲ್ಲಿ ಕಳಸ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಪಟ್ಟಣ ಪಂಚಾಯಿತಿ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಸರ್ಕಾರದಿಂದ ಅನುಮೋದನೆ ಸಿಕ್ಕ ನಂತರ ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ ಬರಲಿದೆ’ ಎಂದರು.

ಕಳಸ ಪಟ್ಟಣ ಪಂಚಾಯಿತಿ ಘೋಷಣೆ ಆದ ನಂತರ ಪಟ್ಟಣವನ್ನು ಹೊರತುಪಡಿಸಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ರಚನೆಯೂ ಆಗಬೇಕಿದೆ. ಪಟ್ಟಣದ ನಿವಾಸಿಗಳಿಗೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮತದಾನದ ಹಕ್ಕು ಕೂಡ ಇಲ್ಲವಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಅನುದಾನ ಸಿಗುವ ನಿರೀಕ್ಷೆ

'ಕಳಸ ಪಟ್ಟಣ ಪಂಚಾಯಿತಿ ಪ್ರಸ್ತಾವನೆ ಸಿದ್ಧವಾಗಿದ್ದು, ರಾಜ್ಯ ಸರ್ಕಾರದ ನಗರಾಡಳಿತ ನಿರ್ದೇಶನಾಲಯಕ್ಕೆ ಸೋಮವಾರ ಸಲ್ಲಿಸಲಾಗುತ್ತದೆ' ಎಂದು ಚಿಕ್ಕಮಗಳೂರು ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಗೋಪಾಲ ಜಾಧವ್ ಮಾಹಿತಿ ನೀಡಿದ್ದಾರೆ.

ಪಟ್ಟಣ ಪಂಚಾಯಿತಿ ಸ್ಥಾನಮಾನ ಸಿಕ್ಕರೆ ಕಳಸಕ್ಕೆ ರಸ್ತೆ, ಚರಂಡಿ ಅಭಿವೃದ್ಧಿ, ಕುಡಿಯುವ ನೀರು ಮುಂತಾದ ಮೂಲಸೌಕರ್ಯಕ್ಕೆ ಹಾಗೂ ವಿದ್ಯುತ್, ಸ್ವಚ್ಛಭಾರತ್ ಕಾಮಗಾರಿಗಳಿಗೆ ಬಹಳಷ್ಟು ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ಅವರು 'ಪ್ರಜಾವಾಣಿ'ಗೆ ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.