ಚಿಕ್ಕಮಗಳೂರು: ನಗರದ ಕತ್ರಿಮಾರಮ್ಮ ದೇವಾಲಯದ ಸಿಡಿ ಮಹೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು. ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಪುಷ್ಪಾಲಂಕೃತ ಅಡ್ಡೆಯಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ದೇಗುಲ ಆವರಣದಲ್ಲಿ ಮೆರವಣಿಗೆ ಮಾಡಿದರು. ಭಕ್ತರು ಅಡ್ಡೆ ಹೊತ್ತು ಸಾಗಿದರು.

ವಿಶೇಷ ಪೂಜೆ, ಕೈಂಕರ್ಯಗಳೂ ಜರುಗಿದವು. ಭಕ್ತರು ಹರಕೆ ತೀರಿಸಿದರು. ಸಿಡಿ ಕಂಬವನ್ನು ಬಾಳೆಗಿಡ, ಹೂವಿನ ಹಾರಗಳಿಂದ ಶೃಂಗರಿಸಲಾಗಿತ್ತು. ಬಸವನ ಹಳ್ಳಿ, ದಂಟರಮಕ್ಕಿ, ತಮಿಳು ಕಾಲೊನಿ ಸುತ್ತಲಿನ ನಿವಾಸಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-126-197264508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.