ಚಿಕ್ಕಮಗಳೂರು: ನಗರದ ಗ್ರಾಮದೇವತೆ ಶ್ರೀಪೇಟೆ ಕೊಲ್ಲಾಪುರದಮ್ಮನವರ ಜಾತ್ರೆ ಹಾಗೂ ಸಿಟಿ ಮಹೋತ್ಸವ ಮೇ 15ರಿಂದ 26ರವರೆಗೆ ನಗರದ ಕೊಲ್ಲಾಪುರದ ಬೀದಿಯಲ್ಲಿ ನಡೆಯಲಿದೆ ಎಂದು ಪೇಟೆ ಕೊಲ್ಲಾಪುರದಮ್ಮನವರ ಸೇವಾ ಸಮಿತಿ ಉಪಾಧ್ಯಕ್ಷ ಸಿ.ಜಿ.ಅಜಯ್ ಕುಮಾರ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 15ರಂದು ಬೆಳಿಗ್ಗೆ 10ಕ್ಕೆ ದುರ್ಗಾ ಹೋಮ ಹಾಗೂ ಧ್ವಜಾರೋಹಣ ನೆರವೇರಲಿದೆ. ಮೇ 21ರಂದು ಸಂಜೆ 6ಕ್ಕೆ ಗಂಗಾಪೂಜೆ ನಡೆಯಲಿದ್ದು, ವಿದ್ಯುತ್ ದೀಪಾಲಂಕಾರದೊಂದಿಗೆ ದೇವಿಯ ಮೆರವಣಿಗೆಯು ಬೋಳರಾಮೇಶ್ವರ ದೇವಸ್ಥಾನದಿಂದ ಬಿ.ಎಂ.ಶ್ರೀ ರಸ್ತೆ, ಹನುಮಂತಪ್ಪ ವೃತ್ತ ಹಾಗೂ ಐಜಿ ರಸ್ತೆ ಮೂಲಕ ದೇವಾಲಯ ತಲುಪಲಿದೆ ಎಂದು ಹೇಳಿದರು.

ಮೇ 22ರಂದು ಸಂಜೆ 5.30ಕ್ಕೆ ಸಿಟಿ ಮಹೋತ್ಸವ ನಡೆಯಲಿದ್ದು, 23ರಂದು ಸಂಜೆ 5.30ಕ್ಕೆ ಭೂತಪ್ಪನ ಭೇಟೆಮಣೆ ಕಾರ್ಯಕ್ರಮ ನೆರವೇರಲಿದೆ. 24ರಂದು ಸಂಜೆ 5.30ಕ್ಕೆ ಓಕುಳಿ ಮತ್ತು ಮರುಸಿಡಿ ನಡೆಯಲಿದ್ದು, 25ರಂದು ಬೆಳಿಗ್ಗೆ 7ಕ್ಕೆ ಕೆಂಡೋತ್ಸವ ಹಾಗೂ 26ರಂದು ಬೆಳಿಗ್ಗೆ 11ಕ್ಕೆ ಭೂತಪ್ಪನ ಸೇವೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಸೇವಾ ಸಮಿತಿ ಖಜಾಂಚಿ ರಾಜಣ್ಣ ಶೆಟ್ಟಿ, ಕಾರ್ಯದರ್ಶಿ ಕೇಶವಮೂರ್ತಿ ಹಾಗೂ ಅರ್ಚಕ ಮೋಹನ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-126-422630467

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.