ಕಳಸ: ಸಂಸೆ ಗ್ರಾಮದ ಕೊಣೆಗೋಡು ಪ್ರದೇಶದ ಸೇತುವೆ ಕಾಮಗಾರಿ ಸಕಾಲಕ್ಕೆ ಮುಗಿಯದೆ ಗ್ರಾಮಸ್ಥರಲ್ಲಿ ನಿರಾಸೆ ಮೂಡಿಸಿದೆ.

ಕೊಣೆಗೋಡು ಪ್ರದೇಶದ ನಿವಾಸಿಗಳಿಗೆ ಮಳೆಗಾಲದಲ್ಲಿ ಸಂಪರ್ಕ ಸೇತುವೆ ಇಲ್ಲದೆ ದ್ವೀಪದಂತಹ ಪ್ರದೇಶದಲ್ಲಿ ಜೀವನ ನಡೆಸುವ ಬಗ್ಗೆ ‘ಪ್ರಜಾವಾಣಿ’ ಕಳೆದ ವರ್ಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿ ಶಾಸಕಿ ನಯನಾ ಮೋಟಮ್ಮ ಅವರು ಸೇತುವೆ ಕಾಮಗಾರಿಗೆಂದು ₹50 ಲಕ್ಷ ಮಂಜೂರು ಮಾಡಿಸಿದ್ದರು. ಆರಂಭಿಕ ಹಂತದಲ್ಲಿ ಕಾಮಗಾರಿ ಕೂಡ ಚುರುಕಾಗಿ ನಡೆದಿತ್ತು. ಮಳೆಗಾಲಕ್ಕೂ ಮುನ್ನವೇ ಸೇತುವೆ ಕೆಲಸ ಮುಗಿಯುವ ನಿರೀಕ್ಷೆ ಮೂಡಿತ್ತು. ಆದರೆ ಒಂದು ತಿಂಗಳಿಂದ ಕಾಮಗಾರಿ ನಿಂತು ಹೋಗಿದೆ. ಆದ್ದರಿಂದ ಸಕಾಲಕ್ಕೆ ಕೆಲಸ ಮುಗಿಯುವ ಬಗ್ಗೆ ಅನುಮಾನ ಮೂಡಿದೆ.

‘ಸೇತುವೆಯ ಪಕ್ಕದ ತಡೆ ಗೋಡೆ ನಿರ್ಮಾಣ, ಮಣ್ಣು ತುಂಬುವ ಕೆಲಸ ಮತ್ತು ಸಂಪರ್ಕ ರಸ್ತೆ ಕಾಮಗಾರಿ ಆರಂಭಿಸಿಲ್ಲ. 10 ದಿನದೊಳಗೆ ಮಳೆಗಾಲ ಆರಂಭ ಆಗುತ್ತದೆ. ಇದರಿಂದ ಈ ವರ್ಷದ ಮಳೆಗಾಲದ ಒಳಗೆ ಸೇತುವೆ ಕೆಲಸ ಮುಗಿಯುವುದು ಅಸಾಧ್ಯವಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ವಾಪಸ್ ಹೋಗಿದ್ದಾರೆ. ಎಲ್ಲ ಸಲಕರಣೆಗಳು ಸ್ಥಳದಿಂದ ಮಾಯವಾಗಿವೆ. ಈ ವರ್ಷಕ್ಕೂ ನಮಗೆ ತಲೆ ಹೊರೆ, ಕಾಲುಸಂಕ ಅನಿವಾರ್ಯ ಆಗಿದೆ’ ಎಂದು ಗ್ರಾಮದ ಯುವಕ ಮಾಲತೀಶ್ ಬೇಸರದಿಂದ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-126-1851232997

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.