ಕೊಪ್ಪ: ತಾಲ್ಲೂಕಿನ ಕುದುರೆಗುಂಡಿಯ ಹಜ್ರತ್ ಸಯ್ಯದ್ ಸಾದತ್ ಷರೀಫುಲ್ ಔಲಿಯಾರ ದರ್ಗಾ ಷರೀಫ್ ವಾರ್ಷಿಕ ಉರುಸ್ ಮೇ 15ರಿಂದ ಮೂರು ದಿನ ನಡೆಯಲಿದೆ ಎಂದು ಸ್ವಲಾತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಷರೀಫ್ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶುಕ್ರವಾರ ಸ್ವಲಾತ್ ವಾರ್ಷಿಕೋತ್ಸವ, ಶನಿವಾರ ಕುತುಬಿಯ್ಯತ್ ಪ್ರಾರ್ಥನೆ, ಭಾನುವಾರ ರಾತ್ರಿ 8ಕ್ಕೆ ಸರ್ವ ಧರ್ಮ ಸಮ್ಮೇಳನ ಮತ್ತು ಧಾರ್ಮಿಕ ಪ್ರವಚನ ನಡೆಯಲಿದೆ. ಬೆಜ್ಜವಳ್ಳಿಯ ಧರ್ಮಗುರು ಡಿ.ಎ. ಹಸನ್ ಸಖಾಫಿ ಅಲ್- ಹಿಕಮಿ, ನರಸಿಂಹರಾಜಪುರದ ಕ್ರಿಶ್ಚಿಯನ್ ಧರ್ಮಗುರು ಫಾ.ಎ.ಜೆ. ಜಾರ್ಜ್ ಕೋರ್ ಎಪಿಸ್ಸೋಪ್ಪ ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಭಾಗವಹಿಸಲಿದ್ದಾರೆ’ ಎಂದರು.

ಮಸೀದಿ ಸಮಿತಿ ಅಧ್ಯಕ್ಷ ಯು. ನವಾಝ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಟಿ.ಡಿ. ರಾಜೇಗೌಡ, ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಗದ್ದೆಮನೆ, ಚಿಕ್ಕಮಗಳೂರಿನ ಕೆಎಂಜೆ ಜಿಲ್ಲಾ ಘಟಕದ ಧ್ಯಕ್ಷ ಜಮೀರ್ ಮೂಸಬ್ಬ ಭಾಗವಹಿಸುವರು. ಕಾರ್ಯಕ್ರಮದಲ್ಲಿ ದಫ್ ಮತ್ತು ಸಂದಲ್ ಮೆರವಣಿಗೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಮಿತಿಯ ಮಹಮ್ಮದ್, ಸದಸ್ಯರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-126-292898339

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.