ಕಳಸ: ಐದು ತಿಂಗಳ ಚಾರಣದ ಸ್ಥಗಿತದ ನಂತರ ಇದೀಗ ಜೂನ್ 1ರಿಂದ ಕುದುರೆಮುಖ ಗಿರಿಶ್ರೇಣಿ ವ್ಯಾಪ್ತಿಯ ಕುದುರೆಮುಖ, ನೇತ್ರಾವತಿ, ಬಂಡಾಜೆ, ಗಂಗಡಿಕಲ್ಲು, ಮತ್ತಿತರ ಪ್ರದೇಶಗಳಿಗೆ ಚಾರಣಕ್ಕೆ ಅನುಮತಿ ನೀಡಲಾಗಿದೆ.

ಅರಣ್ಯದಲ್ಲಿ ಜನಜಂಗುಳಿ ತಡೆಯಲು ಈ ತಾಣಗಳಿಗೆ ಪ್ರತಿ ದಿನ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಚಾರಣಕ್ಕೆ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕವೇ ಬುಕಿಂಗ್ ಮಾಡಲಾಗುತ್ತದೆ. ಆದರೆ ಆನ್ಲೈನ್ ಬುಕಿಂಗ್ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಎಲ್ಲ 300 ಟೆಕೆಟ್ಗಳು ಖಾಲಿ ಆಗುತ್ತಿವೆ. ಇದು ಚಾರಣಿಗರಲ್ಲಿ ಅಚ್ಚರಿ ಮತ್ತು ನಿರಾಶೆ ತರುತ್ತಿದೆ.

ಹೀಗೆ ಕೆಲವೇ ನಿಮಿಷಗಳಲ್ಲಿ ಎಲ್ಲ ಟಿಕೆಟ್ ಬುಕ್ಕಿಂಗ್ ಆಗುತ್ತಿರುವುದರ ಹಿಂದೆ ಬೆಂಗಳೂರಿನ ಟ್ರಾವೆಲ್ಸ್ ಸಂಸ್ಥೆಗಳ ಕೈವಾಡ ಇದೆ ಎಂದು ಸ್ಥಳೀಯರು ದೂರುತ್ತಾರೆ. ಜೂನ್ 6ರ ಚಾರಣಕ್ಕೆ ಮೇ 22ರಂದು ವೆಬ್ಸೈಟ್ ಬುಕಿಂಗ್ ಅವಕಾಶ ಕಲ್ಪಿಸಿದಾಗ ನಿಮಿಷದ ಒಳಗೇ ಕುದುರೆಮುಖ ಮತ್ತು ನೇತ್ರಾವತಿಯ 300 ಟಿಕೆಟ್ ಬುಕ್ಕಿಂಗ್ ಆಗಿದ್ದು ಹೇಗೆ ಎಂಬುದು ಅಚ್ಚರಿ. ಜೂನ್ 13ರ ಚಾರಣದ ಟಿಕೆಟ್ಗಳು ಕೂಡ ಕೆಲವೇ ನಿಮಿಷಗಳಲ್ಲಿ ಬುಕ್ಕಿಂಗ್ ಆಗಿವೆ.

‘ಬೆಂಗಳೂರಿನ ಖಾಸಗಿ ಟ್ರಾವೆಲ್ ಸಂಸ್ಥೆಗಳು ತಮ್ಮ ಸಂಸ್ಥೆಯ 20-25 ಸಿಬ್ಬಂದಿಯನ್ನು ಏಕಕಾಲಕ್ಕೆ ಬಳಸಿಕೊಂಡು ಒಬ್ಬೊಬ್ಬರ ಮೂಲಕ ತಲಾ 3 ಟಿಕೆಟ್ ಖರೀದಿಸುತ್ತಾರೆ. ಹೀಗೆ ಅಕ್ರಮವಾಗಿ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದಾರೆ’ ಎಂಬ ಆರೋಪ ಕಳಸ ತಾಲ್ಲೂಕಿನ ಹೋಂ ಸ್ಟೇ ಮಾಲೀಕರದ್ದಾಗಿದೆ.

‘ಏಜೆನ್ಸಿಗಳು ಕುದುರೆಮುಖ ಚಾರಣದ ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ಆ ಟಿಕೆಟ್ಗಳ ಆಧಾರದ ಮೇಲೆ ತಮ್ಮದೇ ಆದ ಬಸ್ಗಳ ಮೂಲಕ ದೊಡ್ಡ ತಂಡಗಳಲ್ಲಿ ಚಾರಣಕ್ಕೆ ಕರೆ ತರುತ್ತಾರೆ. ಇದರಿಂದ ಪ್ರತಿ ಚಾರಣಿಗನ ಮೇಲೆ ಏಜೆನ್ಸಿಗಳು ₹2000ಕ್ಕೂ ಹೆಚ್ಚು ಲಾಭ ಮಾಡುತ್ತಾರೆ. ನಿಜವಾದ ಚಾರಣದಲ್ಲಿ ಆಸಕ್ತಿ ಇದ್ದವರಿಗೆ ಪ್ರತಿ ವಾರವೂ ಟಿಕೆಟ್ ಸಿಗದೆ ಕಳಸ ತಾಲ್ಲೂಕಿನಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತದೆ’ ಎಂದು ಪ್ರಿನ್ಸ್ ಆಫ್ ಕಳಸದ ಮಾಲೀಕ ಚಂದ್ರಮೋಹನ್ ದೂರುತ್ತಾರೆ.

‘ಒಬ್ಬರಿಗೆ ಒಂದು ಟಿಕೆಟ್ ಖರೀದಿಗೆ ಮಾತ್ರ ಅವಕಾಶ ನೀಡಬೇಕು. ಆ ಟಿಕೆಟ್ ರದ್ದುಪಡಿಸಿ ಹಣ ವಾಪಸ್ ಪಡೆಯುವ ಅವಕಾಶ ಇರಬಾರದು. ಇದರಿಂದ ನೈಜ ಚಾರಣಿಗರು ಮಾತ್ರ ಬುಕಿಂಗ್ ಮಾಡುತ್ತಾರೆ’ ಎಂದು ಮಾತೃಶ್ರೀ ಅಡ್ವೆಂಚರ್ ಸಂಸ್ಥೆಯ ಯುವ ಉದ್ಯಮಿ ಸೃಜನ್ ಜೈನ್ ಅಭಿಪ್ರಾಯಪಡುತ್ತಾರೆ.

ಸೋಮವಾರ ನೇತ್ರಾವತಿ ಚಾರಣದ ಪ್ರದೇಶದ ಪರಿಶೀಲನೆಗೆ ಬಂದಿದ್ದ ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಈ ಕುರಿತು ಪ್ರತಿಕ್ರಿಯಿಸಿ, ‘ಕುದುರೆಮುಖ ಮತ್ತು ನೇತ್ರಾವತಿ ಚಾರಣದ ಟಿಕೆಟ್ ಬುಕಿಂಗ್ ಜಾಲದ ಬಗ್ಗೆ ಇರುವ ದೂರುಗಳು ನಮ್ಮ ಗಮನಕ್ಕೂ ಬಂದಿವೆ. ಇಡೀ ರಾಜ್ಯದ ಚಾರಣಗಳ ಆನ್ಲೈನ್ ಬುಕಿಂಗ್ ನಿರ್ವಹಿಸುವ ಐಸಿಟಿ ಸಂಸ್ಥೆಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಟಿಕೆಟ್ ಬುಕಿಂಗ್ ಅಕ್ರಮ ನಡೆಯದಂತೆ ಎಚ್ಚರ ವಹಿಸಲು ಅಗತ್ಯ ಕ್ರಮವನ್ನು ಅವರು ವೆಬ್ಸೈಟ್ನಲ್ಲಿ ಕೈಗೊಳ್ಳಲಿದ್ದಾರೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-126-268311369

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.