ಚಿಕ್ಕಮಗಳೂರು: ಕೆಲ ಕಾರ್ಮಿಕ ಸಂಘಟನೆಗಳು ಕಂಪನಿ ಆಡಳಿತದೊಂದಿಗೆ ಶಾಮೀಲಾಗುತ್ತಿದ್ದಾರೆ. ಇದರಿಂದ ಕಾರ್ಮಿಕರ ಶೋಷಣೆ ತಪ್ಪಿಲ್ಲ ಎಂದು ಐಎನ್ಟಿಯುಸಿ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಿವೆಂಕಟೇಶ್ವರ ಹೇಳಿದರು.

ಕಾರ್ಮಿಕರ ಹಕ್ಕು ರಕ್ಷಣೆಗೆ ಹುಟ್ಟಿಕೊಂಡಿರುವ ಅನೇಕ ಕಾರ್ಮಿಕ ಸಂಘಟನೆಗಳು ಹೋರಾಟ ಮರೆತಿವೆ. ಕಾರ್ಮಿಕರಿಗೆ ಅನ್ಯಾಯವಾದರೆ ಕೆಂಬಾವುಟಗಳು ಬೀದಿಯಲ್ಲಿ ಹಾರಾಡುತ್ತಿದ್ದವು. ಈಗ ಅವು ಕಾಣೆಯಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಬೇಸರ ವ್ಯಕ್ತಪಡಿಸಿದರು.

ಅಂದು ಕಾರ್ಮಿಕರ ಪರವಾಗಿ ಘಟಾನುಘಟಿ ನಾಯಕರಿದ್ದರು. ಆ ಹೋರಾಟಕ್ಕೆ ಮಣಿದ ಕಂಪನಿಗಳು, ಸರ್ಕಾರಗಳು ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುತ್ತಿದ್ದವು. ಈಗ ಆಡಳಿತ ಮಂಡಳಿಗಳ ಜತೆ ಶಾಮೀಲಾಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಕಾರ್ಮಿಕರೇ ಹೋರಾಟಗಳನ್ನು ಕಟ್ಟಲಿದ್ದಾರೆ ಎಂದರು.

ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಶಿವಾನಂದಸ್ವಾಮಿ ಮಾತನಾಡಿ, ‘1889ರಲ್ಲಿ ಅಮೆರಿಕಾದಲ್ಲಿ ಕೆಲಸದ ಅವಧಿಯನ್ನು 8 ಗಂಟೆ ಗಂಟೆಗೆ ನಿಗದಿ ಮಾಡಬೇಕು ಎಂದು ಕಾರ್ಮಿಕರು ನಡೆಸಿದ ಹೋರಾಟಕ್ಕೆ ಮಣಿದ ಕಾನೂನಿನ ಮಾನ್ಯತೆ ದೊರೆಯಿತು. ಆ ದಿನದ ನೆನಪಿನಲ್ಲಿ ಮೇ 1ರಂದು ಕಾರ್ಮಿಕ ದಿನ ಆಚರಿಸಲಾಗುತ್ತಿದೆ’ ಎಂದರು.

ಕಾರ್ಮಿಕ ಮುಖಂಡರಾದ ಸೆಲ್ವಂ, ರಾಮಚಂದ್ರ ಒಡೆಯರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.