ಚಿಕ್ಕಮಗಳೂರು: ಬೇಸಿಗೆಯಲ್ಲಿ ಖಾಲಿಯಾಗುವ ಕೆರೆಗಳಲ್ಲಿ ಅಡ್ಡಾದಿಡ್ಡಿಯಾಗಿ ಹೂಳು ತೆಗೆದು ಅದರ ಸ್ವರೂಪವನ್ನೇ ಬದಲಿಸುವ ಮಣ್ಣು ಸಾಗಣೆ ದಂದೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಕೆರೆಯ ವ್ಯಾಪ್ತಿಯ ರೈತರು ಮಾತ್ರ ಈ ಮಣ್ಣು ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂಬ ಸುತ್ತೋಲೆಯನ್ನು ಸಣ್ಣ ನೀರಾವರಿ ಇಲಾಖೆ ಹೊರಡಿಸಿದೆ.

ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರು ಬರಿದಾಗುತ್ತಿದ್ದಂತೆ ಜೆಸಿಬಿ, ಹಿಟಾಚಿಗಳನ್ನು ಇಳಿಸಿ ಎಲ್ಲೆಂದರಲ್ಲಿ ಮಿತಿ ಇಲ್ಲದೆ ಅಗೆದು ಟ್ರ್ಯಾಕ್ಟರ್ ಮತ್ತು ಟಿಪ್ಪರ್ಗಳಲ್ಲಿ ಮಣ್ಣು ಸಾಗಿಸಲಾಗುತ್ತದೆ. ಹಗಲು–ರಾತ್ರಿ ಎನ್ನದೆ ಮಣ್ಣು ಸಾಗಿಸುವುದು ದಂದೆಯಾಗಿ ಮಾರ್ಪಟ್ಟಿದೆ. ಫಲವತ್ತಾದ ಮಣ್ಣನ್ನು ಹೊರ ಜಿಲ್ಲೆಗಳಿಗೂ ಸಾಗಣೆ ಮಾಡಲಾಗುತ್ತಿದೆ. ಕೆರೆಯ ಮಣ್ಣು ಮಾರಾಟ ಮಾಡಿ ಹಣ ಗಳಿಸುವುದು ವ್ಯಾಪಾರವಾಗಿ ನಡೆಯುತ್ತಿದೆ. ಜಿಲ್ಲೆಯ ಇತಿಹಾಸ ಪ್ರಸಿದ್ಧ ಅಯ್ಯನಕೆರೆಯಲ್ಲಿ ಪ್ರತಿವರ್ಷವೂ ಒಡಲು ಬಗೆಯುವ ಕೆಲಸ ನಡೆಯುತ್ತಿದೆ. ಈ ವರ್ಷವೂ 20ರಿಂದ 30 ಅಡಿ ಆಳದವರೆಗೆ ಕೆರೆಯ ಅಂಗಳವನ್ನು ಬಗೆದು ಹಾಳು ಮಾಡಲಾಗಿದೆ.

ಕೆರೆಗಳ ನೀರಿನಲ್ಲಿ ಗುಂಡಿಗಳಿರುವುದು ಗೊತ್ತಾಗದೆ ಜನ–ಜಾನುವಾರು ಪ್ರಾಣ ಕಳೆದುಕೊಳ್ಳುವ ಅವಘಡಗಳು ಸಂಭವಿಸುತ್ತಿವೆ. ಅಲ್ಲದೇ ಕೆರೆಯ ಮೂಲ ಸ್ವರೂಪವೇ ಹಾಳಾಗುತ್ತಿದೆ. ಜತೆಗೆ ಏರಿಯಿಂದ ನೀರು ಸೋರಿಕೆಯಾಗಲು ಇದು ಕಾರಣವಾಗುತ್ತಿದೆ. ಇಂತಹ ದೂರುಗಳು ಹೆಚ್ಚಾದ ಕಾರಣ ಹೊಸ ನಿಯಮಗಳನ್ನು ರೂಪಿಸಿ ಸಣ್ಣ ನೀರಾವರಿ ಇಲಾಖೆ ಏಪ್ರಿಲ್ 7ರಂದು ಸುತ್ತೋಲೆ ಹೊರಡಿಸಿದೆ.

ಜಲಾನಯನ ಪ್ರದೇಶಗಳಲ್ಲಿ ಉಂಟಾಗುವ ಮಣ್ಣಿನ ಸವಕಳಿಯಿಂದ ಕೆರೆಗಳಲ್ಲಿ ಸ್ವಾಭಾವಿಕವಾಗಿ ಶೇಖರಣೆಗೊಳ್ಳುವ ಹೂಳು ಮಿಶ್ರಿತ ಮಣ್ಣು ಫಲವತ್ತಾಗಿರುತ್ತದೆ. ಈ ಫಲವತ್ತಾದ ಹೂಳನ್ನು ತೆಗೆದು ರೈತರು ಕೃಷಿ ಭೂಮಿಗಳಲ್ಲಿ ಬಳಸಿಕೊಳ್ಳುವುದರಿಂದ ಬೆಳೆಗಳ ಇಳುವರಿ ಹೆಚ್ಚಾಗುತ್ತಿದೆ. ಅಲ್ಲದೆ ಕೆರೆಗಳ ಮೂಲ ನೀರಿನ ಸಂಗ್ರಹಣಾ ಸಾಮರ್ಥ್ಯ ಕೂಡ ಹಾಗೇ ಉಳಿಸಬಹುದಾಗಿದೆ. ಆದರೆ, ಅವೈಜ್ಞಾನಿಕವಾಗಿ ಕೆರೆಯ ಅಂಗಳ ವನ್ನು ಬಗೆದರೆ ಅದರ ಸ್ವರೂಪಕ್ಕೆ ಧಕ್ಕೆಯಾಗ ಲಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

ಕೆರೆಗಳ ಅಚ್ಚುಕಟ್ಟು ಪ್ರದೇಶಗಳ ರೈತರು ತಮ್ಮ ಕೃಷಿ ಜಮೀನುಗಳಿಗೆ ಬಳಸಿಕೊಳ್ಳಲು ಮಾತ್ರ ಹೂಳು ತೆಗೆಯಲು ಅನುಮತಿ ನೀಡಬಹುದು. ಆದರೆ, ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮೂಲಕ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಬೇಕು. ಪ್ರಾಧಿಕಾರ ಸಮ್ಮತಿ ನೀಡಿದರೆ ಮಾತ್ರ ಹೂಳೆತ್ತುವ ಪ್ರಸ್ತಾವಗಳಿಗೆ ಅನುಮತಿಯನ್ನು ಅಧಿಕಾರಿ ಗಳು ನೀಡಬೇಕು ಎಂದು ತಿಳಿಸಿದೆ.

ರೈತರು ತಮ್ಮ ಜಮೀನಿನ ಪಹಣಿಯ(ಅರ್ಟಿಸಿ) ಪ್ರತಿಯ ಜತೆಗೆ ಸಣ್ಣ ನೀರಾವರಿ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಸ್ಥಳೀಯ ಅಧಿಕಾರಿಗಳು ಕೆರೆಯಲ್ಲಿ ತುಂಬಿರುವ ಹೂಳಿನ ಪ್ರಮಾಣ ಅಂದಾಜು ಮಾಡಬೇಕು. ಬಳಿಕ ಕೆರೆಯ ಸ್ವರೂಪಕ್ಕೆ ಧಕ್ಕೆಯಾಗದಂತೆ ಹೂಳು ತೆಗೆಯಲು ಅನುಮತಿ ನೀಡಬೇಕು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ವೈಜ್ಞಾನಿಕವಾಗಿ ಹೂಳು ತೆಗೆಯುವಂತೆ ನೋಡಿಕೊಳ್ಳಬೇಕು ಎಂಬುದು ಇಲಾಖೆಯ ಸೂಚನೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-126-1039305500

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.