ತರೀಕೆರೆ: ಲಿಂಗದಹಳ್ಳಿಯ ಆಸ್ತಿಕ ವಿವರ್ಧಿನಿ ಸಂಕೇತಿ ಸಂಘದ ವತಿಯಿಂದ ಲಿಂಗದಹಳ್ಳಿ ರಾಮಮಂದಿರದಲ್ಲಿ ರಾಮೋತ್ಸವ ಸಪ್ತಾಹದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸೀತಾ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಹನುಮೋತ್ಸವ ಕಾರ್ಯಕ್ರಮಗಳು ನಡೆದವು.

ಮತ್ತೂರಿನ ಶಿವಾನಿ ಅನಂತ ಅವಧಾನಿ ಅವರ ಕೂಚುಪುಡಿ ನೃತ್ಯ ಹಾಗೂ ಆಂಜನೇಯನ ಅವತಾರದ ನೃತ್ಯ ಸಭಿಕರ ಮನಸೂರೆಗೊಂಡಿತು. ಶ್ರೀಲತಾ, ನಿಕ್ಷಿತ್ ಮತ್ತು ಶ್ರೀನಿಕ್ಷಿತ್ ಪುತ್ತೂರು ಅವರ ವೀಣಾ ಮೃದಂಗ ಕಾರ್ಯಕ್ರಮ ಮೆರುಗು ನೀಡಿತ್ತು.

ಶಿವಮೊಗ್ಗದ ರೇಣುಕಪ್ಪ ನಾಟಕ ತಂಡದವರಿಂದ ‘ಅದ್ರೇಶಿ ಪರದೇಶಿಯಾದ’ ಎಂಬ ಹಾಸ್ಯ ನಾಟಕ ಪ್ರದರ್ಶನಗೊಂಡಿತು. ಭಜನೆ, ಸಂಗೀತ, ವೇದಘೋಷ, ನಿತ್ಯ ಪೂಜೆ, ಪಲ್ಲಕ್ಕಿ ಉತ್ಸವಗಳೊಂದಿಗೆ ಕಾರ್ಯಕ್ರಮಗಳು ಯಶಸ್ವಿಗೊಂಡಿತು. ಸಮಿತಿಯ ಕಾರ್ಯದರ್ಶಿ ವಿಠಲ್ ಎಲ್.ಸಿ. ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-126-1590382537

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.