ಬಸರೀಕಟ್ಟೆ(ಬಾಳೆಹೊನ್ನೂರು): ರಾಜ್ಯದ ಮೂರನೇ ಅತಿ ಎತ್ತರದ ಮೇರುತಿ ಪರ್ವತಕ್ಕೆ ಚಾರಣ ನಡೆಸಲು ಅರಣ್ಯ ಇಲಾಖೆ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಮೇರುತಿ ಪರ್ವತದ ತಪ್ಪಲಿನ ಬದನೆಖಾನ್ ಎಸ್ಟೇಟ್ ಬಳಿ ಕೆಲವರು ರಸ್ತೆ ನಿರ್ಮಿಸಿರುವುದಕ್ಕೆ ಸ್ಥಳೀಯರು, ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಮೇರುತಿ ಪರ್ವತ ಚಾರಣಕ್ಕೆ ಅನುಮತಿ ನೀಡಿರುವ ಅರಣ್ಯ ಇಲಾಖೆ, ಚಾರಣಕ್ಕೆ ₹300 ಶುಲ್ಕ ನಿಗದಿಪಡಿಸಿದೆ. ರಾಜ್ಯ ಅಲ್ಲದೇ ಹೊರ ರಾಜ್ಯದಿಂದಲೂ ನಿತ್ಯ ಚಾರಣಪ್ರಿಯರು ಬಸರೀಕಟ್ಟೆ, ಕವನಹಳ್ಳ, ಬದನೆಖಾನ್ ಎಸ್ಟೇಟ್ ಮಾರ್ಗದ ಮೂಲಕ ಬೆಟ್ಟ ಏರುತ್ತಿದ್ದಾರೆ.

ಬದನೆಖಾನ್ ಎಸ್ಟೇಟ್ ಬಳಿ ನೀರಿನ ಸೆಲೆ ಹೊಂದಿರುವ ಮೇರುತಿ ಪರ್ವತದ ತಪ್ಪಲಲ್ಲಿ ಕೆಲವರು ಚಾರಣದ ನೆಪದಲ್ಲಿ ಜೆಸಿಬಿ ಬಳಸಿ ಸುಮಾರು ಅರ್ಧ ಕಿ.ಮೀನಷ್ಟು ಕಚ್ಚಾ ರಸ್ತೆ ನಿರ್ಮಿಸಿದ್ದಾರೆ. ಇನ್ನೂ ಅರ್ಧ ಕಿಮೀ ರಸ್ತೆಯನ್ನು ರಾತ್ರೋ ರಾತ್ರಿ ನಿರ್ಮಾಣ ಮಾಡಲು ಯೋಜಿಸಿರುವುದು ಪರಿಸರವಾದಿಗಳ ವಿರೋಧಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರಿನ ಹೋಗರೆಖಾನ್ ಗಿರಿ ಹಾಗೂ ಮೇರುತಿ ಪರ್ವತದ ತಪ್ಪಲನ್ನು 2002ರಲ್ಲಿ ಪರಿಸರ ಸೂಕ್ಷ್ಮ ಪ್ರದೇಶ, ಜೀವ ವೈವಿಧ್ಯತಾಣ ಎಂದು ಗುರುತಿಸಲಾಗಿದೆ. ಮೇರುತಿ ಪರ್ವತದ ಸುತ್ತಮುತ್ತ 24 ಸ್ವಾಭಾವಿಕ ಜಲಮೂಲಗಳಿವೆ. ತೋಟದೂರು, ತಲಗೋಡು, ಬದನೆಖಾನ್ ಎಸ್ಟೇಟ್, ಹೊನಗುಂಡಿ, ಬಿಳಾಲುಕೊಪ್ಪಕ್ಕೆ ನೀರಿನ ಮೂಲಗಳ ಆಶ್ರಯ ತಾಣವಾಗಿವೆ. ಸಮುದ್ರ ಮಟ್ಟದಿಂದ 5,600 ಅಡಿ ಎತ್ತರದಲ್ಲಿದ್ದು, ಅದರ ಬುಡದಲ್ಲಿ ಅಗೆತ, ರಸ್ತೆ ನಿರ್ಮಾಣ ಸೇರಿ ಯಾವುದೇ ಪರಿಸರ ವಿರೋಧಿ ಚಟುವಟಿಕೆ ಮಾಡುವುದು ಸೂಕ್ಷ್ಮ ಪ್ರದೇಶಕ್ಕೆ ಧಕ್ಕೆ ತರುತ್ತದೆ. ಹಾಗಾಗಿ ಅಲ್ಲಿ ಮಾನವ ನಿರ್ಮಿತ ಯಾವುದೇ ಕಾಮಗಾರಿ ನಡೆಸಬಾರದು. ಅರಣ್ಯ ಇಲಾಖೆ ಕಟ್ಟು ನಿಟ್ಟಾಗಿ ಪರಿಸರ ವಿರೋಧಿ ಕಾಮಗಾರಿ ನಡೆಸಲು ಅನುಮತಿಸಬಾರದು ಎಂದು ಪಶ್ಚಿಮಘಟ್ಟ ಉಳಿಸಿ ಕಾರ್ಯಪಡೆ ಸದಸ್ಯ ಗಜೇಂದ್ರ ಗೊರಸುಕೊಡಿಗೆ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-126-428799018

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.