ಬಾಳೆಹೊನ್ನೂರು: ‘ಶಾಸಕನಾಗಿ ಮುಂದುವರಿಯಲು ಸುಪ್ರೀಂಕೋರ್ಟ್ ನನಗೆ ಅವಕಾಶ ನೀಡಿದ ಕಾರಣ ಬುಧವಾರದಿಂದಲೇ ಶಾಸಕ ಸ್ಥಾನದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಯಾರಾದರೂ ಅಧಿಕಾರಿ ರಾಜೇಗೌಡ ಅಥವಾ ಜೀವರಾಜ್ ಪರ ಕೃತ್ಯ ಮಾಡಿರಬೇಕು. ಅಸಿಂಧು ಮತಗಳು ಬದಲಾಗಲು ಯಾರು ಕಾರಣ ಎಂಬುದರ ತನಿಖೆ ಮಾಡಲಿ. ಹೀನ ಕೃತ್ಯ ಮಾಡಿದವರು ಅನುಭವಿಸಲಿ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ಜೇಸಿ ವೃತ್ತದಲ್ಲಿರುವ ಗಣಪತಿ ದೇವಸ್ಥಾನ ಹಾಗೂ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ನನ್ನ ಮೇಲೇ ಆರೋಪ ಮಾಡುವವರು ದೂರು ನೀಡಲಿ. 21ರಂದು ನ್ಯಾಯಾಲಯ ನೀಡುವ ತೀರ್ಪಿಗೆ ತಲೆ ಬಾಗುತ್ತೇನೆ. ನಾನು ಶಾಸಕನಾಗೇ ಇರಬೇಕೆಂಬುದು ಮುಖ್ಯ ಅಲ್ಲ. ಚುನಾವಣೆ ವ್ಯವಸ್ಥೆಯಲ್ಲಿ ಇಂಥ ಕೃತ್ಯ ನಡೆದಿರುವುದು ದೇಶದಲ್ಲಷ್ಟೇ ಅಲ್ಲ ಪ್ರಪಂಚದಲ್ಲೇ ಇದು ಪ್ರಥಮ. ಇನ್ನೊಬ್ಬರ ಮತವನ್ನು ತಿದ್ದಿ ಗೆಲ್ಲಲು ಹೊರಟಿರುವುದು ಹೇಯ ಕೃತ್ಯ. ಘಟನೆಯ ತನಿಖೆ ಆಗಿ ಸತ್ಯಾಸತ್ಯತೆ ಹೊರಬರಬೇಕು ಎಂಬುದು ನನ್ನ ಆಗ್ರಹ. ಚುನಾವಣೆಯಲ್ಲಿ ಅಕ್ರಮ ಎಸಗಿದವರು ಆರು ವರ್ಷಗಳ ಕಾಲ ಸ್ಪರ್ಧಿಸುವಂತಿಲ್ಲ ಎಂಬ ಕಾನೂನಿದೆ. ಅದನ್ನು ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಜಾರಿ ಮಾಡಲಿ ಎಂದರು.

ಬಿಜೆಪಿ ಎಜೆಂಟರೇ ಮತ ಎಣಿಕೆ ಸಮರ್ಪಕವಾಗಿ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಏಜೆಂಟ್ ಸುಧೀರ್ ಕುಮಾರ್ ಮುರೊಳ್ಳಿ ಚಿಕ್ಕಮಗಳೂರಿನಲ್ಲಿ ನೀಡಿದ ದೂರಿನ ತನಿಖೆ ನಡೆಯದಂತೆ ಜೀವರಾಜ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಅವರು ನಮ್ಮ ವಿರುದ್ಧ ದೂರು ನೀಡಿದರೆ ನಾವು ತಡೆಯಾಜ್ಞೆ ತರುವುದಿಲ್ಲ. ನ್ಯಾಯಾಲಯದಲ್ಲಿ ನನ್ನ ವಿರುದ್ದ 19 ಆರೋಪ ಮಾಡಿದ್ದಾರೆ. ಹಲಸೂರು ಎಸ್ಟೇಟ್ ಖರೀದಿ ಪ್ರಕರಣವನ್ನು ಹೈಕೋರ್ಟ್ ವಜಾ ಮಾಡಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ತಿರಸ್ಕೃತ ಮತ ಬಂದಿರುವುದು ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ. ಇದು ಹೇಗಾಯ್ತು ಎಂದು ಪ್ರಶ್ನಿಸಿದರು.

ಕಾಡುಕೋಣ ದಾಳಿಯಿಂದ ಇಬ್ಬರು ಅಸುನೀಗಿದ ಹಿನ್ನಲೆಯಲ್ಲಿ ಕಾಡು ಕೋಣ ಹಿಡಿಯಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಕಾರಣ ಕಾರ್ಯಾಚರಣೆ ಆರಂಭಗೊಂಡಿದೆ. ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡು ಕೋಣಗಳನ್ನು ಹಿಡಿದು ಬೇರೆ ಕಡೆ ಬಿಡಲಾಗುವುದು ಎಂದರು.

ಶಾಸಕರ ಪತ್ನಿ ಪುಷ್ಪಾ ರಾಜೇಗೌಡ ಮಾತನಾಡಿದರು. ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಬಿ.ಕೆ.ಮಧುಸೂದನ್, ಎಂ.ಎಸ್.ಅರುಣೇಶ್, ಅಶ್ವಥ್, ಚಂದ್ರಮ್ಮ ಎಂ.ಎಸ್.ಜಯಪ್ರಕಾಶ್, ಕೆ.ಟಿ.ಸುದೇಶ್, ಹಿರಿಯಣ್ಣ, ಅಭಿಷೇಕ್ ಮಾಗುಂಡಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-126-1962618705

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.