ಚಿಕ್ಕಮಗಳೂರು: ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಏ.27ರಂದು ಬೆಳಿಗ್ಗೆ 10.30ಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಬಿ.ಬಿ.ನಿಂಗಯ್ಯ ಹೇಳಿದರು.

ಬೂಕರ್ ಪ್ರಶಸ್ತಿ ಪುರಸ್ತೃತೆ ಬಾನು ಮುಷ್ತಾಕ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಚಿಂತಕ ಶಿವಸುಂದರ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚಿನ ಬೆಳವಣಿಗೆಗಳು ಅಂಬೇಡ್ಕರ್ ಅವರ ಚಿಂತನೆ ಮತ್ತು ಆಲೋಚನೆಗೆ ವಿರುದ್ಧವಾಗಿ ಸಂಘಟಿತ ದಾಳಿಯ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅಲುಗಾಡಿಸುವ ಪ್ರಯತ್ನ ನಡೆಸಿವೆ. ಜಾತಿ, ಉಪಜಾತಿ, ಧರ್ಮ, ಕೋಮು, ದಳ್ಳುರಿಯ ಮೀಸಲಾತಿಯ ಒಳ ಮೀಸಲಾತಿ ಸಂಘರ್ಷ ಮೀತಿ ಮೀರಿದೆ ಎಂದು ತಿಳಿಸಿದರು.

ಏಕತೆ ಬದಲು ವಿಭಜನೆ ಮೂಲಕ ದೀನದಲಿತ ಬಡವ ಶೋಷಿತರಲ್ಲಿ ಆತ್ಮವಿಶ್ವಾಸವನ್ನೇ ಹತ್ತಿಕ್ಕುವ ಸಂಚು ನಡೆದಿದೆ. ವಿಚಾರದ ಬದಲು ಪ್ರಚಾರ, ಬರವಣಿಗೆಯ ಬದಲು ಮೆರವಣಿಗೆ, ಗೊತ್ತು ಗುರಿ ಇಲ್ಲದ ಕಾರ್ಯಕ್ರಮಗಳ ಮೂಲಕ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಾ, ತನ್ನ ಸ್ವಾರ್ಥ ಸಾಧನೆಗೆ ಕೆಲವು ಶಕ್ತಿಗಳು ಮುಂದಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರು ಮೂಡಿಸಿದ ಆತ್ಮವಿಶ್ವಾಸ, ಚೈತನ್ಯ ಮತ್ತು ಸ್ಫೂರ್ತಿ ಪಡೆಯಬೇಕಾದ ಅವರ ವಿಚಾರಗಳು ಕಾರ್ಯರೂಪಕ್ಕೆ ಬರಬೇಕಾಗಿದೆ. ಈ ಕಾರಣದಿಂದ ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ವಕೀಲರು, ಬರಹಗಾರರು, ಚಿಂತಕರು, ಮಹಿಳಾ ಮತ್ತು ದಲಿತ ಪರ ಶಕ್ತಿಗಳು, ವಿದ್ಯಾರ್ಥಿ ಯುವ ಜನರು ಒಂದಾಗಿ ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮೂಡಿಗೆರೆ ತಾಲ್ಲೂಕಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಎಸ್ಎಸ್ಎಲ್ಸಿ ಮತ್ತು ಪಿಯು ವಿದ್ಯಾರ್ಥಿಗಳನ್ನು ಹಾಗೂ ಸರ್ವ ಜನಾಂಗದ ಹಿರಿಯ ನಾಗರಿಕರನ್ನು ಗೌರವಿಸಲಾಗುವುದು. ಬಾನು ಮುಷ್ತಾಕ್ ಅವರಿಗೆ ನಾಗರಿಕ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.

ಮುಖಂಡ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್, ಎಸ್ಡಿಪಿಐ ಮುಖಂಡ ಮುನೀರ್, ಬಿಎಸ್ಪಿ ಮುಖಂಡ ರಮೇಶ್, ಆಚರಣಾ ಸಮಿತಿ ಖಜಾಂಚಿ ಸಿದ್ದೇಶ್, ಕಾರ್ಯದರ್ಶಿ ಅಭಿಜಿತ್, ಸಂಚಾಲಕ ಹರೀಶ್, ಮುಖಂಡರಾದ ಗಿರೀಶ್, ಶಿವಪ್ರಸಾದ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-126-880036142

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.