ಮೂಡಿಗೆರೆ: ಕಾಡುಪ್ರಾಣಿಗಳ ಕಳ್ಳಬೇಟೆಯಾಡಿ ವಾಹನವೊಂದರಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಕಳ್ಳಬೇಟೆಗೆ ಬಳಿಸಿದ ವಸ್ತುಗಳು ಹಾಗೂ ವಾಹನವನ್ನು ತಾಲ್ಲೂಕಿನ ಜೋಗಣ್ಣನಕೆರೆ ಬಸ್ ನಿಲ್ದಾಣದ ಸಮೀಪ ಬುಧವಾರ ವಶಪಡಿಸಿಕೊಂಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಮೂಡಿಗೆರೆ ವಲಯದ ಹಾಲೂರು, ಜೋಗಣ್ಣನಕೆರೆ ಬಸ್ ತಂಗುದಾಣದ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ, ಪಿಕಪ್ ವಾಹನವೊಂದು ಸ್ಥಳದಲ್ಲಿ ನಿಲ್ಲದೆ ವೇಗವಾಗಿ ಮುಂದೆ ಸಾಗಿದೆ. ವಾಹನವನ್ನು ಹಿಂಬಾಲಿಸಿ ತಡೆಗಟ್ಟಿ ಪರಿಶೀಲಿಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಮೃತಪಟ್ಟ 3 ಪುನುಗು ಬೆಕ್ಕುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ.

ವಾಹನದಲ್ಲಿದ್ದ ನಾಲ್ವರ ಪೈಕಿ ಇಬ್ಬರು ಆರೋಪಿಗಳಾದ ತಾಲ್ಲೂಕಿನ ಅಬಚೂರು ಗ್ರಾಮದ ಎ.ಜೆ. ನಂದನ್, ಹಾಲೂರು ಗ್ರಾಮದ ಎಚ್.ಜಿ.ಆದರ್ಶನನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಾದ ಹಳೆಮೂಡಿಗೆರೆ ಗ್ರಾಮದ ಪ್ರೀತಮ್, ಹಾಲೂರು ಗ್ರಾಮದ ಚಿದಾನಂದ ತಲೆಮರೆಸಿಕೊಂಡಿದ್ದಾರೆ. ಈ ಕೃತ್ಯಕ್ಕೆ ಎಚ್.ಜಿ.ಕರುಣಾಕರಮೂರ್ತಿ, ಚಿಕ್ಕಮಗಳೂರು ತಾಲ್ಲೂಕಿನ ಮರ್ಲೆ ಗ್ರಾಮದ ಕೃಷ್ಣಪ್ಪ ಸಹಕರಿಸಿದ್ದಾರೆಂದು ತಿಳಿದು ಬಂದಿದ್ದು, ಇನ್ನುಳಿದ ನಾಲ್ವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ವಾಹನದಲ್ಲಿದ್ದ 3 ಪುನುಗುಬೆಕ್ಕುಗಳ ಮೃತದೇಹ, ಕೃತ್ಯಕ್ಕೆ ಬಳಸಿರುವ 2 ಒಂಟಿ ನಳಿಕೆ ಬಂದೂಕು, 4 ತೋಟ, 1 ಟಾರ್ಚ್, ಆರೋಪಿಗಳ 2 ಮೊಬೈಲ್ ಫೋನ್ ಹಾಗೂ ಕಳ್ಳಸಾಗಾಣಿಕೆಗೆ ಬಳಸಿರುವ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಡಿಸಿಎಫ್ ರಮೇಶ್ ಬಾಬು, ಎಸಿಎಫ್ ಟಿ.ಎಂ. ಆಕರ್ಷ್ ಮಾರ್ಗದರ್ಶನ ದಲ್ಲಿ ಆರ್ಎಫ್ಒ ಮಂಜುನಾಥ ನೇತೃತ್ವ ದಲ್ಲಿ ಗೋಣಿಬೀಡು ಉಪ ವಲಯ ಅರಣ್ಯಾಧಿಕಾರಿ ರವಿರಾಜ್, ಗಸ್ತು ಅರಣ್ಯ ಪಾಲಕ ರಾದ ಪರಮೇಶ್, ಎ.ವಿ.ಶಿವರಾಜ್, ವಿ.ಎಸ್.ಆದರ್ಶ್, ವಾಚರ್ ಬಿ.ಕೆ. ಉದಯ್ ಬಿ.ಕೆ, ವಾಹನ ಚಾಲಕ ನವ ರಾಜ್ ಕಾರ್ಯಾಚರಣೆಯಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-126-1903209511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.