ನರಸಿಂಹರಾಜಪುರ: ತಾಲ್ಲೂಕಿನ ಮಡಬೂರು ಗ್ರಾಮದ ಗರನಕೊಪ್ಪದಲ್ಲಿ ಮಹಿಳೆಗೆ ನಾಗರಹಾವು ಕಚ್ಚಿ ಮೃತಪಟ್ಟ ಘಟನೆ ಶನಿವಾರ (ಮೇ 23) ನಡೆದಿದೆ.

ಮಡಬೂರು ಗ್ರಾಮದ ಗರನ ಕೊಪ್ಪದ ಪ್ರೇಮ (69) ಹಾವು ಕಚ್ಚಿ ಮೃತಪಟ್ಟವರು. ಪ್ರೇಮ ಅವರು ಶನಿವಾರ ಬೆಳಿಗ್ಗೆ ತಮ್ಮ ಮನೆ ಹತ್ತಿರ ಇರುವ ತೋಟದಿಂದ ದನದ ಕೊಟ್ಟಿಗೆಗೆ ದರಗು ತರಲು ಹೋಗಿದ್ದು, ದರಗು ತೆಗೆಯುತ್ತಿದ್ದಾಗ ನಾಗರಹಾವು ಪ್ರೇಮ ಅವರ ಬಲ ಕೈಗೆ ಕಚ್ಚಿದೆ. ತಕ್ಷಣ ಮನೆಗೆ ಓಡಿ ಬಂದು ವಿಷಯ ತಿಳಿಸಿದ್ದಾರೆ. ಪ್ರೇಮ ಅವರ ಪುತ್ರ ಹಾಗೂ ಇತರ ಕುಟುಂಬದವರು ಸೇರಿ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಪ್ರೇಮ ಮೃತಪಟ್ಟರು. ಮೃತರ ಪುತ್ರ ಮಹೇಶ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-126-1675535515

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.