ನರಸಿಂಹರಾಜಪುರ: ತಾಲ್ಲೂಕಿನ ಬಿ.ಎಚ್.ಕೈಮರದಿಂದ ಬಾಳೆಹೊನ್ನೂರು ಕಡೆಗೆ ಹೋಗುವ ಶಾಂತಿ ಭವನ, ಮತ್ತಿಮರ ಬಸ್ ನಿಲ್ದಾಣದ ಸಮೀಪ ಮುಖ್ಯ ರಸ್ತೆಯಲ್ಲಿ ಸೋಮವಾರ ಒಣ ಹುಲ್ಲು ತುಂಬಿದ್ದ ಟ್ರಾಕ್ಟರ್ಗೆ ವಿದ್ಯುತ್ ತಂತಿ ತಗುಲಿ ಹುಲ್ಲು ಸಂಪೂರ್ಣ ಸುಟ್ಟು ಹೋಗಿದೆ

ಹುಲ್ಲು ತುಂಬಿದ್ದ ಟ್ರಾಕ್ಟರ್ಗೆ ಶಾಂತಿ ಭವನ ಹತ್ತಿರ ವಿದ್ಯುತ್ ತಂತಿ ತಾಗಿ ಬೆಂಕಿ ಹೊತ್ತಿಕೊಂಡಿದೆ. ಸ್ವಲ್ಪ ದೂರ ಹೋದ ಟ್ರಾಕ್ಟರ್ನ ಚಾಲಕ ಅಪಾಯ ಅರಿತು ತಕ್ಷಣ ಟ್ರಾಕ್ಟರ್ ಟ್ರ್ಯಾಲಿಯನ್ನು ಹುಲ್ಲಿನೊಂದಿಗೆ ಲಿಪ್ಟ್ ಮಾಡಿದ್ದಾನೆ. ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದ ಹುಲ್ಲು ತಕ್ಷಣ ಕೆಳಗೆ ಬಿದ್ದಿದೆ. ಇದರಿಂದ ಟ್ರಾಕ್ಟರ್ಗೆ ಅಪಾಯವಾಗಿಲ್ಲ. ರಸ್ತೆಯ ಮಧ್ಯೆ ಬೆಂಕಿ ಹೊತ್ತಿ ಉರಿದಿದ್ದರಿಂದ ಕೆಲವು ಸಮಯ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಠಾಣಾಧಿಕಾರಿ ದೇವೇಂದ್ರ ನಾಯಕ್ ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ತೆಂಗಿನಮರಕ್ಕೆ ಬೆಂಕಿ: ನರಸಿಂಹರಾಜಪುರ ತಾಲ್ಲೂಕು ಕಚೇರಿ ಸಮೀಪ ರಸ್ತೆಯ ಪಕ್ಕದಲ್ಲಿದ್ದ ತೆಂಗಿನಮರಕ್ಕೆ ವಿದ್ಯುತ್ ತಂತಿ ತಾಗಿ ತೆಂಗಿನಮರಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಸೋಮವಾರ ನಡೆದಿದೆ. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-126-2129746184

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.