ಚಿಕ್ಕಮಗಳೂರು: ಪಂಚಲಿಂಗೇಶ್ವರ ದೇವಸ್ಥಾನವನ್ನು ವಿಶಿಷ್ಠ ರೀತಿಯಲ್ಲಿ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ಈ ಕಾರ್ಯಕ್ಕೆ ದಾನಿಗಳು ನೆರವು ನೀಡಿ ಸಹಕರಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಮನವಿ ಮಾಡಿದರು.

ಹಿರೇಮಗಳೂರಿನಲ್ಲಿ ಸುಮಾರು ₹1.40 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪಾತಾಳೇಶ್ವರ ನೂತನ ದೇವಾಲಯದ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದರು.

ಪಂಚಲಿಂಗಗಳು ಇರುವ ದೇವಸ್ಥಾನ ಹಿರೇಮಗಳೂರು ಹೊರತುಪಡಿಸಿ ಜಿಲ್ಲೆಯಲ್ಲಿ ಬೇರೆಲ್ಲೂ ಇಲ್ಲ. ಪಾತಾಳೇಶ್ವರ, ಮಲ್ಲಿಕಾರ್ಜುನ, ಅಮೃತೇಶ್ವರ, ಗೌರೇಶ್ವರ, ವೈದ್ಯನಾಥೇಶ್ವರ ದೇವಾಲಯಗಳಿದ್ದು, ಪಂಚಲಿಂಗೇಶ್ವರ ದರ್ಶನಕ್ಕೆ ಮೈಸೂರಿನ ತಲಕಾಡಿಗೆ ಹೋಗುತ್ತಾರೆ. ಇಲ್ಲೇ ದೇವಾಲಯ ನಿರ್ಮಾಣಕ್ಕೆ ಅವಕಾಶ ನೀಡಿರುವುದು ಸಂತಸ ತಂದಿದೆ ಎಂದರು.

ಹಿರೇಮಗಳೂರಿನಲ್ಲಿ ಪಾತಾಳೇಶ್ವರ ದೇವಸ್ಥಾನ 1990-91ರಲ್ಲಿ ಶುದ್ಧಿಕಾರ್ಯ ಕೈಗೊಳ್ಳಲಾಗಿದ್ದು, ಈಗಾಗಲೇ ಚಿಕ್ಕಮ್ಮ, ಮುತ್ತಿನಮ್ಮ, ಕೋದಂಡರಾಮ ದೇವಸ್ಥಾನ ಸೇರಿ ಬಹುತೇಕ ದೇವಾಲಯಗಳು ಅಭಿವೃದ್ಧಿಯಾಗಿವೆ. ಪಾತಾಳೇಶ್ವರ ದೇವಾಲಯ ಜೀರ್ಣೋದ್ಧಾರ ಮಾಡಿದರೆ ಸಕಲ ಜೀವರಾಶಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಬಸವತತ್ವ ಪೀಠದ ಪೀಠಾಧ್ಯಕ್ಷ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ‘ದೇವಸ್ಥಾನಗಳು ಧಾರ್ಮಿಕವಾಗಿ ಭಕ್ತರಿಗೆ ದಾರಿ ತೋರಿಸುವ ಮಾರ್ಗಗಳಾಗಿವೆ. ದೇವರು ಮನುಷ್ಯನ ಹೃದಯದಲ್ಲಿ ನೆಲೆಸಿದ್ದಾನೆ. ಆದ್ದರಿಂದ ಭಕ್ತರ ಶ್ರದ್ಧಾ ಕೇಂದ್ರಗಳು ದೇವಸ್ಥಾನಗಳಾಗಿವೆ’ ಎಂದರು.

ಅತಿ ಶೀಘ್ರದಲ್ಲಿ ಈ ದೇವಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡು ಸಾರ್ವಜನಿಕರಿಗೆ ಲೋಕಾರ್ಪಣೆ ಆಗಲಿ ಎಂದು ಆಶಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಮುಖಂಡರಾದ ಪಲ್ಲವಿ ಸಿ.ಟಿ.ರವಿ, ಸಿದ್ದಮ್ಮ, ಎಚ್.ಸಿ. ಕಲ್ಮುರುಡಪ್ಪ, ಷಡಕ್ಷರಿ, ಬಸವರಾಜಯ್ಯ, ಚಿದಾನಂದ್, ಎಚ್.ಎಂ. ಯೋಗೀಶ್, ನಂಜೇಶ್ ಬೆಣ್ಣೂರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-126-54645852

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.