ಚಿಕ್ಕಮಗಳೂರು: ಎಲ್ಲದನ್ನೂ ಸರ್ಕಾರವೇ ಮಾಡಲಿ ಎಂಬ ಮನೋಭಾವನೆ ಜನರಲ್ಲಿದ್ದು, ಇದು ಬದಲಾಗಬೇಕು. ಎಲ್ಲಾ ಕೆಲಸಗಳಲ್ಲೂ ಸಾರ್ವಜನಿಕ ಸಹಭಾಗಿತ್ವ ಇರಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ನಗರದ ಡಿಎಸಿಜಿ ಪಾಲಿಟೆಕ್ನಿಕ್ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ರೋಟರಿ ಕಾಫಿಲ್ಯಾಂಡ್ ಸುಮಾರು ₹11 ಲಕ್ಷ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿರುವ ಆಧುನಿಕ ತಂತ್ರಜ್ಞಾನ ಹೊಂದಿರುವ ಶವ ಸುಡುವ ಯಂತ್ರ ಹಾಗೂ ನೂತನ ಶೆಡ್ಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಲಯನ್ಸ್ ಕ್ಲಬ್, ರೋಟರಿ, ಕಾಫಿ ಲ್ಯಾಂಡ್ನಂತಹ ಸಂಸ್ಥೆಗಳು ಸಮಾಜಮುಖಿ ಕೆಲಸ ಮಾಡುತ್ತಿವೆ. ಇಂತಹ ಕೆಲಸಗಳಲ್ಲಿ ಸಾರ್ವಜನಿಕ ಸಹಭಾಗಿತ್ವ ಇರಬೇಕು. ಇದು ನಮ್ಮದು ಎಂಬ ಭಾವನೆ ಬರಬೇಕು. ಆಗ ಮಾತ್ರ ಒಂದು ವ್ಯವಸ್ಥೆ ನಡೆಸಿಕೊಂಡು ಹೋಗಲು ಸಾಧ್ಯ’ ಎಂದರು.

‘ಸಾವು ಇಲ್ಲದ ಮನೆ ಯಾವುದೂ ಇಲ್ಲ. ಧರ್ಮದಲ್ಲಿ ನಂಬಿಕೆ ಇಟ್ಟು ನಾವು ಬದುಕುತ್ತಿದ್ದೇವೆ. ಮೃತರಿಗೆ ಮುಕ್ತಿ ಸಿಗುವ ಜಾಗ ಇದು. ಇಲ್ಲಿಗೆ ಬಂದಾಗ ರುದ್ರಭೂಮಿಗೆ ಬಂದಿದ್ದೇವೆ ಎಂದು ಎನಿಸಬಾರದು. ಸುಂದರವಾದ ಪಾರ್ಕ್ನಲ್ಲಿ ಕುಳಿತುಕೊಂಡಿದ್ದೇವೆ ಎಂದು ಅನಿಸಬೇಕು. ಆ ರೀತಿಯಲ್ಲಿ ಸ್ವಚ್ಛತೆ ಕಾಪಾಡಬೇಕು. ಮಾತ್ರ ಅಲ್ಲ, ಮನೆಯ ಮುಂಭಾಗದಲ್ಲಿ ಸ್ವಚ್ಛತೆ ಕಾಪಾಡಬೇಕು’ ಎಂದು ತಿಳಿಸಿದರು.

‘ಸಾರ್ವಜನಿಕ ರುದ್ರಭೂಮಿ ಆಗಿರುವುದರಿಂದ ಕಟ್ಟೆ ಕಟ್ಟಬಾರದು. ತಂದೆ– ತಾಯಿ ಬದುಕಿದ್ದಾಗ ಅವರಿಗೆ ಒಳ್ಳೆಯ ಊಟ, ಬಟ್ಟೆ ಕೊಟ್ಟಿರುವುದಿಲ್ಲ. ಆದರೆ, ನಿಧನರಾದ ನಂತರ ತಿಂಗಳ ಪೂಜೆಗಾಗಿ ಎಡೆ ಇಡುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಗರದ ಚಿತಾಗಾರವನ್ನು ಸುಮಾರು ₹4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಎಲೆಕ್ಟ್ರಾನಿಕ್ ಚಿತಾಗಾರ ಹಾಗೂ ರುದ್ರಭೂಮಿಯಲ್ಲಿ ಪಾರ್ಕ್ ನಿರ್ಮಾಣ ಸೇರಿ ಇತರೆ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ನಾಗೇಶ್ ಕೆಂಜಿಗೆ, ಸಂಸ್ಥೆಯ ಸಿಲ್ವರ್ ಜೂಬ್ಲಿ ಅಧ್ಯಕ್ಷ ಬಿ.ಕೆ. ಗುರುಮೂರ್ತಿ, ಹಿಂದೂ ರುದ್ರಭೂಮಿ ಅಧ್ಯಕ್ಷ ಬಿ.ಎನ್. ಸುರೇಶ್, ನಗರಸಭೆ ಪ್ರಭಾರಿ ಅಧ್ಯಕ್ಷೆ ಲಲಿತಾ ರವಿನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-126-1023005881

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.