ಚಿಕ್ಕಮಗಳೂರು: ಪಿಯುಸಿ ಪರೀಕ್ಷೆಯಲ್ಲಿ ಶೇ 90.19ರಷ್ಟು ಫಲಿತಾಂಶ ಗಳಿಸುವ ಮೂಲಕ ವಿದ್ಯಾರ್ಥಿಗಳು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಎಂ.ಇ.ಎಸ್. ಗೌರವ ಕಾರ್ಯದರ್ಶಿ ಡಿ.ಎಲ್. ವಿಜಯ್ ಕುಮಾರ್ ಹೇಳಿದರು.

ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಎಸ್.ಎಸ್.ಎಂ. ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಅವರು ಮಾತನಾಡಿದರು.

ಜಿಲ್ಲೆಯ ಕೆಲವು ಬಲಾಢ್ಯ ಶಾಲೆಗಳು ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸುತ್ತೇವೆ. ಆದರೆ ಎಂಇಎಸ್ ಸಂಸ್ಥೆ ಬಡ ಹಾಗೂ ಮಾಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ವ್ಯವಸ್ಥೆ ಕಲ್ಪಿಸಿಕೊಟ್ಟು ಸಾಧನೆಗೆ ಅವಕಾಶ ಮಾಡಿಕೊಡುತ್ತಿದೆ ಎಂದರು.

ಒಟ್ಟು 184 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಉನ್ನತ ಶ್ರೇಣಿಯಲ್ಲಿ 50, ಪ್ರಥಮ 109, ದ್ವಿತೀಯ 17, ತೃತೀಯ ಶ್ರೇಣಿಯಲ್ಲಿ 8 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ವಿಜ್ಞಾನದಲ್ಲಿ ಶೇ 98, ವಾಣಿಜ್ಯ ಶೇ 90.10, ಕಲಾ ವಿಭಾಗ ಶೇ 82.50 ಫಲಿತಾಂಶ ದಾಖಲಿಸಿದೆ.

ವಿಜ್ಞಾನ ವಿಭಾಗದಲ್ಲಿ ಎಸ್. ವರ್ಷಿತ್ 575 ಅಂಕ, ವಾಣಿಜ್ಯ ವಿಭಾಗದಲ್ಲಿ ಜೆ.ಬಿ. ಸಹನಾ 575 ಅಂಕ, ಕಲಾ ವಿಭಾಗದಲ್ಲಿ ತುಬ 551 ಅಂಕ ಪಡೆದಿದ್ದಾರೆ. ಉಳಿದಂತೆ ಗಣಿತದಲ್ಲಿ ಎಸ್. ವರ್ಷಿತ್, ಕನ್ನಡ- ಭೌತಶಾಸ್ತ್ರದಲ್ಲಿ ಎಚ್.ವಿ. ಶಿಲ್ಪ, ಕನ್ನಡ, ವ್ಯವಹಾರ ಅಧ್ಯಯನ, ಸಂಖ್ಯಾಶಾಸ್ತ್ರದಲ್ಲಿ ಜೆ.ಬಿ. ಸಹನಾ, ಲೆಕ್ಕಶಾಸ್ತ್ರದಲ್ಲಿ ಆಯೇಷಾ, ವ್ಯವಹಾರದ ಅಧ್ಯಯನದಲ್ಲಿ ಸಿ.ಕೆ. ಪುನೀತ್ಕುಮಾರ್, ಗಣಕ ವಿಜ್ಞಾನದಲ್ಲಿ ಎಸ್.ಎನ್. ಪುನೀತ್, ಕನ್ನಡದಲ್ಲಿ ಕೆ.ಎಸ್. ಶಿವಾನಿ ಹಾಗೂ ಇತಿಹಾಸದಲ್ಲಿ ಎಂ.ಡಿ. ಹೇಮಾ 100ಕ್ಕೆ 100 ಅಂಕ ಗಳಿಸಿದ್ದಾರೆ.

ಮಲೆನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಕೇಶವಮೂರ್ತಿ, ಪ್ರಾಂಶುಪಾಲ ಗೋಪಾಲರಾವ್, ಅಕಾಡೆಮಿ ಶೈಕ್ಷಣಿಕ ಸಲಹೆಗಾರ ಮಂಜುನಾಥ್ಭಟ್, ವ್ಯವಸ್ಥಾಪಕಿ ಶ್ರೀಲಕ್ಷ್ಮಿ ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-126-224157319

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.