ಚಿಕ್ಕಮಗಳೂರು: 15 ದಿನಗಳಿಂದ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಗುರುವಾರ ಸಂಜೆ ಅಲ್ಲಲ್ಲಿ ಮಳೆಯಾಗಿ ತಂಪೆರೆದಿದೆ.

ಸಂಜೆ 5 ಗಂಟೆ ಸುಮಾರಿಗೆ ಗುಡುಗು ಮತ್ತು ಸಿಡಿಲಿನ ಅಬ್ಬರದೊಂದಿಗೆ ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮಳೆ ಆರಂಭವಾಯಿತು. ಕೆಲ ಹೊತ್ತಿನಲ್ಲೇ ಚಿಕ್ಕಮಗಳೂರು ನಗರದಲ್ಲೂ ಮಳೆ ಆರ್ಭಟಿಸಿತು. ಅರ್ಧ ಗಂಟೆಗಳ ಕಾಲ ಸುರಿದು ಭೂಮಿಯನ್ನು ತಂಪಾಗಿಸಿತು. ನಗರದಲ್ಲಿ ಅಲ್ಲಲ್ಲಿ ರಸ್ತೆಯಲ್ಲಿ ನೀರು ಹರಿಯಿತು.

ಮಲೆನಾಡಿನ ಆಲ್ದೂರು, ಬಾಳೆಹೊನ್ನೂರು, ಶೃಂಗೇರಿ, ಕಳಸ, ಜಾವಳಿ, ಕೊಟ್ಟಿಗೆಹಾರ, ನರಸಿಂಹರಾಜಪುರ, ಬಣಕಲ್, ಚಾರ್ಮಾಡಿ ಘಾಟಿ, ಮೂಡಿಗೆರೆ, ಕುದುರೆಮುಖ, ಸಂಸೆ, ಜಯಪುರ ಸೇರಿ ಹಲವೆಡೆ ಮಳೆಯಾಗಿದೆ. ಬಯಲು ಸೀಮೆಯ ಚಿಕ್ಕಮಗಳೂರು ತಾಲ್ಲೂಕಿನ ಹಲವೆಡೆ, ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ ಕೆಲವೆಡೆ ಸಾಧಾರಣ ಮಳೆಯಾಯಿತು.

ಕಳೆದ 15 ದಿನಗಳಿಂದ ಮಳೆ ಇಲ್ಲದೆ ಬಿಸಿಲ ಝಳ ಹೆಚ್ಚಾಗಿ ಜನ ಕಂಗೆಟ್ಟಿದ್ದರು. ಗುರುವಾರ ಸುರಿದ ಮಳೆ ಕಂಡ ಜನ ಹರ್ಷಗೊಂಡು ನಿಟ್ಟುಸಿರುವ ಬಿಟ್ಟರು.

15 ದಿನಗಳಿಂದ ಹಗಲಿನಲ್ಲಿ ಬಿಸಿಲ ಝಳ, ರಾತ್ರಿ ವೇಳೆ ಸೆಕೆಯ ನಡುವೆ ಜನ ಸುಸ್ತಾಗಿದ್ದರು. ತಣ್ಣನೆ ಗಾಳಿ ಇಲ್ಲದೆ ನಿದ್ರೆ ಮಾಡಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಇತ್ತು. ಗುರುವಾರ ಮಳೆ ಆಗಿರುವುದರಿಂದ ಸಂಜೆ ಕೊಂಚ ತಣ್ಣನೆ ಗಾಳಿ ಬೀಸುತ್ತಿರುವುದು ಜನರ ಮುಖದಲ್ಲಿ ಸಂತಸ ಮೂಡಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-126-1088021651

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.