ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಕೊರತೆಯಾಗಿದ್ದು, ಸಾಂಪ್ರದಾಯಿಕ ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿದೆ. ಬಯಲು ಸೀಮೆಯಲ್ಲಿ ಬಿತ್ತನೆಗೆ ಕಾದಿರುವ ರೈತರು, ಮುಗಿಲಿನತ್ತ ನೋಡುವಂತಾಗಿದೆ.

ಏಪ್ರಿಲ್ನಲ್ಲಿ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 53.1 ಮಿಲಿ ಮೀಟರ್ ಇದ್ದು, 2025ರ ಏಪ್ರಿಲ್ನಲ್ಲಿ 89.1 ಮಿಲಿ ಮೀಟರ್ ಮಳೆಯಾಗಿತ್ತು. ಈ ವರ್ಷ 42.6 ಮಿಲಿ ಮೀಟರ್ ಮಳೆಯಾಗಿದೆ. ಶೇ 20ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ 91.8 ಮಿಲಿ ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 316.3 ಮಿಲಿ ಮೀಟರ್ ಮಳೆಯಾಗಿತ್ತು.

ಈ ವರ್ಷ ಮೇ 20ರವರೆಗೆ ವಾಡಿಕೆ ಮಳೆ 51.5 ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, 47.2 ಮಿಲಿ ಮೀಟರ್ ಮಾತ್ರ ಮಳೆಯಾಗಿದೆ. ಶೇ 8ರಷ್ಟು ಕೊರತೆಯಾಗಿದೆ.

ಪೂರ್ವ ಮುಂಗಾರಿನ ಬಿತ್ತನೆಗೆ ಬರಬೇಕಿದ್ದ ಪ್ರಮುಖ ಮಳೆಗಳು ಕೈ ಕೊಟ್ಟಿದ್ದು, ಬಿತ್ತನೆ ಪ್ರಮಾಣ ಸಂಪೂರ್ಣ ಕುಸಿತವಾಗಿದೆ. ಈ ವೇಳೆಗೆ 97 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾಗುವ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ, 190 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿದೆ.

ಪೂರ್ವ ಮುಂಗಾರಿನಲ್ಲಿ ಪ್ರಮುಖ ವಾಗಿ ಹತ್ತಿ ಬಿತ್ತನೆಯಾಗಬೇಕಿತ್ತು. ಮಳೆ ಬಾರದ ಕಾರಣ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. 2020 ಹೆಕ್ಟೇರ್ನಲ್ಲಿ ಬಿತ್ತನೆಯ ಗುರಿ ಇದ್ದು, ಸದ್ಯ 70 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿದೆ. ಮುಂಗಾರು ಆರಂಭವಾದರೆ ಹತ್ತಿ ಬಿತ್ತನೆ ಮಾಡಲು ಸಾಧ್ಯವಿಲ್ಲ. ಪೂರ್ವ ಮುಂಗಾರಿನಲ್ಲೇ ಬಿತ್ತನೆಯಾಗಬೇಕಿತ್ತು. ಮಳೆ ಕೊರತೆಯಿಂದ ಈ ಬಾರಿ ಹತ್ತಿ ಬೆಳೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ರೈತರು ಹೇಳುತ್ತಾರೆ.

ಅಜ್ಜಂಪುರ, ತರೀಕೆರೆ, ಕಡೂರು ತಾಲ್ಲೂಕಿನಲ್ಲಿ ಅಲಸಂದೆ, ಎಳ್ಳು, ಹೆಸರು, ನೆಲಗಡಲೆ, ಸೂರ್ಯಕಾಂತಿ, ಉದ್ದು ಬೆಳೆಯಲಾಗುತ್ತದೆ. ಆದರೆ, ಯಾವುದೇ ಬೆಳೆ ಬಿತ್ತನೆಯೇ ಆಗಿಲ್ಲ. ಆಗೊಮ್ಮೆ ಈಗೊಮ್ಮೆ ಬಂದು ಹೋದ ಮಳೆಗೆ ರೈತರು ಹೊಲ ಹಸನು ಮಾಡಿಕೊಂಡಿದ್ದಾರೆ. ಕೆಲವೆಡೆ ಇನ್ನೂ ಮಳೆಯೇ ಬೀಳದ ಕಾರಣ ಹೊಲ ಹಸನು ಮಾಡಿಕೊಳ್ಳುವ ಕೆಲಸವೂ ಆಗಿಲ್ಲ.

ಕೆರೆಗಳೂ ಖಾಲಿ: ಬಯಲು ಸೀಮೆಯಲ್ಲಿ ಈ ವರ್ಷ ಬರದ ಛಾಯೆ ಆವರಿಸಿದೆ. ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ, ಕಳಸಾಪುರ ಭಾಗದಲ್ಲಿ ಮಳೆ ಕೊರತೆಯಾಗಿದೆ. ಕೆರೆಗಳು ಖಾಲಿಯಾಗಿದ್ದು, ಮಳೆ ಬಾರದಿದ್ದರೆ ಮುಂದೇನು ಎಂಬ ಚಿಂತೆ ರೈತರಲ್ಲಿದೆ. ಬಯಲು ಸೀಮೆಯ ಬಹುತೇಕ ಕೆರೆಗಳು ಮುಂಗಾರು ಪೂರ್ವದ ಮಳೆಯಲ್ಲೇ ಮುಕ್ಕಾಲು ಭಾಗ ಭರ್ತಿಯಾಗುತ್ತವೆ. ಆದರೆ, ಯಾವುದೇ ಕೆರೆಗೆ ನೀರು ಬರುವ ರೀತಿಯ ಮಳೆ ಬಂದಿಲ್ಲ. ಇದು ಜಿಲ್ಲೆಯ ರೈತರನ್ನು ಮತ್ತಷ್ಟು ಕಂಗಾಲಾಗಿಸಿದೆ.

ಬಿತ್ತನೆ ಬೀಜ ಖರೀದಿಗೆ ಬಾರದ ರೈತರು

ಜಿಲ್ಲೆಗೆ ಈ ವರ್ಷಕ್ಕೆ 6351 ಕ್ವಿಂಟಲ್ ಬಿತ್ತನೆ ಬೀಜ ಬೇಕಾಗಬಹುದು ಎಂದು ಕೃಷಿ ಇಲಾಖೆ ಬೇಡಿಕೆ ಸಲ್ಲಿಸಿದೆ. ಸದ್ಯ ಪೂರೈಕೆಯಾಗಿರುವ ಬಿತ್ತನೆ ಬೀಜ ಖರೀದಿಗೂ ಜನ ಬಾರದಾಗಿದ್ದಾರೆ.

699 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜಾಗಿದೆ. ಈ ಪೈಕಿ 13 ಕ್ವಿಂಟಲ್ ಮಾತ್ರ ಖರೀದಿ ಮಾಡಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಿಗೆ ಅಗತ್ಯ ಇರುವ 51 ಸಾವಿರ ಟನ್ ರಸಗೊಬ್ಬರ ಕೂಡ ದಾಸ್ತಾನಿದ್ದು, ಮಳೆ ಇಲ್ಲದ ಕಾರಣ ಖರೀದಿಗೂ ರೈತರು ಮುಂದಾಗುತ್ತಿಲ್ಲ.

ಮಳೆಯ ಪ್ರಮಾಣ(ಮಿಲಿ ಮೀಟರ್ಗಳಲ್ಲಿ)

ತಿಂಗಳು; ವಾಡಿಕೆ ಮಳೆ; ಸುರಿದ ಮಳೆ

ಏಪ್ರಿಲ್(2025); 53.1; 89.1

ಏಪ್ರಿಲ್(2026); 53.1; 42.6

ಮೇ (2025); 91.8; 316.3

ಮೇ 20(2026); 51.5; 47.2

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-126-1340539447

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.