ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬೇಸಿಗೆ ನಡುವೆ ಬಂದ ಮಳೆ ಕೆಲವು ಬೆಳೆಗಳಿಗೆ ತೊಂದರೆ ನೀಡಿದರೆ, ಇನ್ನೂ ಹಲವು ಬೆಳೆಗಳಿಗೆ ಅನುಕೂಲ ಮಾಡಿದೆ. ಅದರಲ್ಲೂ ಆಲಿಕಲ್ಲು ಮಳೆ ಬಿದ್ದ ಕಡೆ ಕಾಫಿ, ಮೆಣಸು ಸೇರಿ ಪ್ರಮುಖ ಬೆಳೆಗಳು ನೆಲ ಕಚ್ಚಿವೆ.

ಜಿಲ್ಲೆಯಲ್ಲಿ ಈ ವಾರ ಹಲವೆಡೆ ಮಳೆಯಾಗಿದೆ. ಅದರಲ್ಲೂ ಗುಡುಗು, ಸಿಡಿಲಿನ ಜತೆಗೆ ಆಲಿಕಲ್ಲು ಸಹಿತ ಸುರಿದ ಮಳೆ ಅಪಾರ ಹಾನಿ ತಂದೊಡ್ಡಿದೆ. ಚಿಕ್ಕಮಗಳೂರು ತಾಲ್ಲೂಕಿನ ಕೂದುವಳ್ಳಿ ಸೇರಿ ಆಲ್ದೂರು ಸುತ್ತಮುತ್ತಲ ಪ್ರದೇಶದಿಂದ ಆರಂಭವಾಗಿ ಕಡಬಗೆರೆ, ಅಂಡವಾನೆ, ಕರಗಣೆ, ಹೂಯಿಗೆರೆ, ಹೇರೂರು, ಹ್ಯಾರಂಬಿ, ಬೈರಮಕ್ಕಿ, ಸಂಗಮೇಶ್ವರ ಪೇಟೆ, ಖಾಂಡ್ಯ ತನಕ ಆಲಿಕಲ್ಲು ಮಳೆ ಸುರಿಯಿತು.

ಮತ್ತೊಂದೆಡೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಮತ್ತು ಲಕ್ಕವಳ್ಳಿ ಸುತ್ತಮುತ್ತ ಕೂಡ ಆಲಿಕಲ್ಲು ಸುರಿದು ಅವಾಂತರ ಸೃಷ್ಟಿಸಿತು. ಕಾಫಿ ತೋಟಗಳಲ್ಲಿ ಈಗ ಹೂವು ಕಾಯಿಗಟ್ಟುತ್ತಿದ್ದು, ಆಲಿಕಲ್ಲು ಸುರಿದ ರಭಸಕ್ಕೆ ಅವು ಉದುರಿ ಹೋಗಿವೆ. ಕೆಲವೆಡೆ ಕಾಫಿ ಹೂವಾಗಿದ್ದು, ಅವು ಕೂಡ ಉದುರಿ ಹೋಗಿವೆ.

ಅಡಿಕೆಯ ಹರಳು ಉದುರಿದ್ದರೆ, ಮಲೆನಾಡಿನಲ್ಲಿ ಅತೀ ಹೆಚ್ಚು ಮಾವಿನ ಫಸಲು ನಿರೀಕ್ಷೆ ಇತ್ತು. ಅದರಲ್ಲೂ ಅಪ್ಪೆಮಿಡಿ ಮಾವು ಆಲಿಕಲ್ಲಿನ ಹೊಡೆತಕ್ಕೆ ನೆಲ ಕಚ್ಚಿದೆ. ಶೇ 60ಕ್ಕೂ ಹೆಚ್ಚು ಫಸಲು ನಷ್ಟವಾಗಿದೆ ಎನ್ನುತ್ತಾರೆ ಮಲೆನಾಡಿನ ರೈತರು. ಇನ್ನು ಆಲಿಕಲ್ಲು ರಹಿತ ಸುರಿದ ಮಳೆ ಹಲವು ಬೆಳೆಗಳಿಗೆ ಅನುಕೂಲ ಮಾಡಿದೆ. ಕಾಫಿ ಮತ್ತು ಅಡಿಕೆ ಬೆಳೆ ಉಳಿಸಲು ಈ ಕಾಲದಲ್ಲಿ ಕೊಳವೆ ಬಾವಿ, ಕೆರೆ, ನದಿ ಮೂಲಗಳಿಂದ ನೀರು ತರಲು ರೈತರು ಪ್ರಯತ್ನಿಸುತ್ತಾರೆ. ಮಳೆಯಾಗಿರುವುದು ಕೆಲ ದಿನಗಳ ಮಟ್ಟಿಗೆ ರೈತರಿಗೆ ಸಮಾಧಾನ ನೀಡಿದೆ.

ಪೂರಕ ಮಾಹಿತಿ: ಕೆ.ವಿ.ನಾಗರಾಜ್, ಕೆ.ನಾಗರಾಜ್, ರವಿ ಕೆಳಂಗಡಿ, ರವಿಕುಮಾರ್ ಶೆಟ್ಟಿಹಡ್ಲು, ಎನ್.ಸೋಮಶೇಖರ್

ಮಳೆಯಿಂದ ಕೆಲವರಿಗೆ ಅನುಕೂಲ; ಹಲವರಿಗೆ ಅನನುಕೂಲ

ತರೀಕೆರೆ: ಕೆಲ ದಿನಗಳ ಹಿಂದೆ ತಾಲ್ಲೂಕಿನ ಕೆಲ ಭಾಗಗಳಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಅನುಕೂಲ ಮತ್ತು ಅನನುಕೂಲ ಎರಡೂ ಆಗಿದೆ. ಕಾಫಿ, ಅಡಿಕೆ, ತೆಂಗು, ಮಾವು ಮತ್ತು ವಿವಿಧ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಆಲಿಕಲ್ಲು ಮಳೆಯಿಂದ ಮಾವು ಮತ್ತು ತರಕಾರಿ ಬೆಳೆಗಳಿಗೆ ನಷ್ಟ ಉಂಟಾಗಿದೆ. ಮಾವಿನ ತೋಟಗಳಲ್ಲಿ ಇದೀಗ ಸಣ್ಣ ಮಾವಿನ ಕಾಯಿಗಳು ಬಿಟ್ಟಿದ್ದು, ಆಲಿಕಲ್ಲಿನ ಹೊಡೆತದಿಂದ ಕಾಯಿ ಕೊಳೆತು ಉದುರುತ್ತಿವೆ. ಅಲ್ಲದೇ ಟೊಮೆಟೊ, ಬೀನ್ಸ್, ಕುಂಬಳ, ಬದನೆ ಮೊದಲಾದ ತರಕಾರಿ ಬೆಳೆಗಳಿಗೂ ಇದೇ ಪರಿಸ್ಥಿತಿ ಉಂಟಾಗುವುದರಿಂದ ಬಹಳಷ್ಟು ತೊಂದರೆಯಾಗಲಿದೆ ಎಂದು ರೈತರು ಹೇಳುತ್ತಾರೆ. ಬೇಸಿಗೆಯ ಬಿಸಿಲಿನ ತಾಪಕ್ಕೆ ನಲುಗಿದ್ದ ತೆಂಗು, ಕಾಫಿ ಮತ್ತು ಅಡಿಕೆ ಬೆಳೆ ಈ ಮಳೆಯಿಂದಾಗಿ ತುಸು ಚೇತರಿಸಿಕೊಂಡಂತಾಗಿದೆ.

ಮೂಡಿಗೆರೆಯಲ್ಲಿ ಕಾಫಿಗೆ ವರದಾನ

ಮೂಡಿಗೆರೆ: ತಾಲ್ಲೂಕಿನಲ್ಲಿ ಕಳೆದ ವಾರ ಸುರಿದ ಮಳೆಯು ಕಾಫಿ ಬೆಳೆಗೆ ವರದಾನವಾಗಿದೆ. ಈ ಬಾರಿ ಜನವರಿ ತಿಂಗಳಿನಲ್ಲೆ ಹೂವಿನ ಮಳೆಯಾಗಿದ್ದರಿಂದ ಅವಧಿಗೂ ಮೊದಲೇ ಕಾಫಿ ಹೂವಾಗಿತ್ತು. ಆದರೆ, ಅವಧಿಗೂ ಮೊದಲೇ ಮಳೆ ಬಂದಿದ್ದರಿಂದ ಹೂವಿನ ಪ್ರಮಾಣ ಶೇ 50ರಷ್ಟು ಕಡಿಮೆಯಾಗಿತ್ತು. ಫೆಬ್ರುವರಿಯಲ್ಲಿ ಸುರಿದ ಮಳೆಯಿಂದ ಉಳಿದ ಹೂವು ಅರಳಲು ನೆರವಾಗಿತ್ತು. ಕಳೆದ ವಾರ ಸುರಿಸ ಮಳೆ ಕಾಫಿಗೆ ಹಿನ್ನೀರು ಹಾಯಿಸಿದಂತಾಗಿದ್ದು, ಬೆಳೆಗಾರರಿಗೆ ನೀರು ಹಾಯಿಸುವ ಫಜೀತಿ ತಪ್ಪಿದಂತಾಗಿದೆ. ಹೀಚಾಗುತ್ತಿರುವ ಕಾಫಿಗೆ ಮೊದಲ ಹಂತದಲ್ಲಿ ಗೊಬ್ಬರ ಹಾಕಲು ಮಳೆ ನೆರವಾಗಿದೆ. ಮಳೆಯು ಕಾಳು ಮೆಣಸಿಗೆ ಹಾನಿಯುಂಟು ಮಾಡಿದೆ. ಕೆಲವೆಡೆ ಕಾಳು ಮೆಣಸಿನ ಕೊಯ್ಲು ಸಂಪೂರ್ಣಮುಗಿದಿಲ್ಲ. ಹಣ್ಣಾಗಿದ್ದ ಕಾಳು ಮೆಣಸಿನ ಗೊಂಚಲು ಮಳೆಯಿಂದ ನೆಲ ಕಚ್ಚುವಂತಾದರೆ ಕೊಯ್ಲು ನಡೆಸಿ ಒಣ ಹಾಕಿದ್ದ ಮೆಣಸು ಮಳೆಗೆ ಸಿಲುಕಿ ಗುಣಮಟ್ಟ ಕಳೆದುಕೊಳ್ಳುವ ಸಂಕಷ್ಟ ತಂದೊಡ್ಡಿದೆ.

ಕೊಪ್ಪ: ಅಡಿಕೆಗೆ ಕೊಂಚ ಅನುಕೂಲ

ಕೊಪ್ಪ: ತಾಲ್ಲೂಕಿನಲ್ಲಿ ಕಳೆದ ಎರಡು ವಾರಗಳಲ್ಲಿ ಎರಡು ಬಾರಿ ಮಳೆ ಸುರಿದಿದ್ದು, ಗೊಬ್ಬರ ಹಾಕಿ ಬೇಸಾಯ ಮಾಡಿದ ಅಡಿಕೆ ತೋಟಗಳಿಗೆ ಅನುಕೂಲವಾಗಿದೆ. ಪ್ರತ್ಯೇಕವಾಗಿ ನೀರು ಹಾಯಿಸುವ ಕೆಲಸ ಉಳಿದಂತಾಗಿದೆ.

ಹಳ್ಳ ಕೊಳ್ಳಗಳಲ್ಲಿ ಈಗಾಗಲೇ ಸಂಪೂರ್ಣ ನೀರು ಬತ್ತುವ ಹಂತಕ್ಕೆ ತಲುಪಿತ್ತು. ಹಳ್ಳದಲ್ಲಿ ಅಲ್ಲಲ್ಲಿ ಕಸ ಕಡ್ಡಿಗಳು ಕಟ್ಟಿಕೊಂಡು ನೀರು ಸರಾಗವಾಗಿ ಹರಿಯಲು ಉಂಟಾಗಿದ್ದ ತೊಂದರೆ ಮಳೆಯಿಂದ ನಿವಾರಣೆಯಾದಂತಾಗಿದೆ. ಆಗಾಗ ಸುರಿಯುವ ಮಳೆ ಇಳೆಯನ್ನು ತಂಪಾಗಿಸಲು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅನುಕೂಲವಾಗಿದೆ.

ಕಾಫಿ ಕೊಯ್ಲು ಮುಕ್ತಾಯಗೊಂಡಿದ್ದು, ಮತ್ತೆ ನೀರು ಹಾಯಿಸಲು ಪಂಪ್ಸೆಟ್ ಮೊರೆ ಹೋಗಬೇಕಿದ್ದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಿದೆ. ಬಿಸಿಲಿನ ಬೇಗೆಯಲ್ಲಿ ಕಾದ ನೆಲ ತಂಪಾದಂತಾಗಿದೆ. ಕಾಳು ಮೆಣಸಿನ ಕೊಯ್ಲು ಕೂಡ ಬಹುತೇಕ ಮುಕ್ತಾಯಗೊಂಡಿದ್ದು, ಬಳ್ಳಿ ಚಿಗುರೊಡೆಯಲು ಅನುಕೂಲವಾಗಿದೆ.

ಕಡೂರು: ಬಾರದ ಮಳೆ

ಕಡೂರು: ತಾಲ್ಲೂಕಿನಲ್ಲಿ ಈವರೆಗೆ ಉತ್ತಮ ಮಳೆ ಆಗಿಲ್ಲ. ಮಾರ್ಚ್ ಮೂರನೇ ವಾರದ ವೇಳೆಗೆ ಬಹುತೇಕ ಜಮೀನುಗಳಲ್ಲಿ ರಾಗಿ ಮೊದಲಾದ ಬೆಳೆಗಳು ಕಟಾವಾಗಿ ಮಾರುಕಟ್ಟೆ ತಲುಪಿವೆ. ತರಕಾರಿ ಬೆಳೆ ಪ್ರಮುಖವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅಲ್ಲೊಂದು ಇಲ್ಲೊಂದು ಜಮೀನಿನಲ್ಲಿ ರಾಗಿ ಮತ್ತು ಜೋಳ ಉಳಿದುಕೊಂಡಿದ್ದು, ರೈತರು ತುಂತುರು ನೀರಾವರಿ ಮೂಲಕ ಬೆಳೆ ಕಾಪಾಡಿಕೊಂಡಿದ್ದಾರೆ.ಅಡಿಕೆ ಮತ್ತು ತೆಂಗಿನ ತೋಟಗಳಿಗೆ ಬಿಸಿಲು ಹೆಚ್ಚುತ್ತಿರುವುದರಿಂದ ನೀರಿನ ಅಗತ್ಯವಿದ್ದು, ಕೊಳವೆಬಾವಿ ಮೂಲಕ ರೈತರು ನೀರು ಪೂರೈಸುತ್ತಿದ್ದಾರೆ. ತಾಲ್ಲೂಕಿನ ಜೀವನಾಡಿ ಮದಗದ ಕೆರೆಯಿಂದ ಇದೇ 24ರಿಂದ ನೀರು ಹರಿಸುವ ನಿರ್ಧಾರವಾಗಿದ್ದು, ಬಹುತೇಕ ಅಡಿಕೆ ತೋಟಗಳಿಗೆ ಆ ನೀರು ಪೂರೈಕೆಯಾಗಲಿದೆ.

ಬಾರದ ಮಳೆ: ತೇವಾಂಶದ ಕೊರತೆ

ಕಳಸ: ತಾಲ್ಲೂಕಿನಲ್ಲಿ ವಾಡಿಕೆ ಬೇಸಿಗೆ ಮಳೆ ಬಾರದೆ ತೋಟಗಾರಿಕಾ ಬೆಳೆಗಳಿಗೆ ತೇವಾಂಶದ ಕೊರತೆ ಎದುರಾಗಿದೆ.
ಜನವರಿಯಲ್ಲಿ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಬಿದ್ದ ಅಕಾಲಿಕ ಮಳೆಗೆ ಕಾಫಿ ಹೂವು ಅರಳಿತ್ತು. ಆನಂತರ ಕೆಲವೆಡೆ ಫೆಬ್ರುವರಿ ಅಂತ್ಯದಲ್ಲಿ ಮತ್ತು ಮಾರ್ಚ್ ಎರಡನೇ ವಾರ ಮಳೆ ಆಗಿತ್ತು. ಉಳಿದೆಡೆ ಈವರೆಗೂ ಮಳೆಯೇ ಆಗದೆ ಕಾಫಿ, ಅಡಿಕೆ, ಮೆಣಸಿನ ಬಳ್ಳಿಗಳು ಬಾಡುತ್ತಿವೆ.

ಸಂಸೆ, ಎಸ್.ಕೆ.ಮೇಗಲ್, ಮರಸಣಿಗೆ ಪ್ರದೇಶದಲ್ಲಿ ಫೆಬ್ರುವರಿ ಅಂತ್ಯದಲ್ಲಿ ಮಳೆಯಾಗಿದ್ದು ಆನಂತರ ಸಾಕಷ್ಟು ಮಳೆ ಆಗಿಲ್ಲ. ಇದರಿಂದ ಕಾಫಿ ಗಿಡಗಳಲ್ಲಿ ಅರಳಿದ್ದ ಹೂವುಗಳಿಗೆ ಈಗ ತೇವಾಂಶ ಸಾಲದಾಗಿದೆ. ಗಿಡಗಳು ಬಾಡುತ್ತಿದ್ದು, ಕಾಯಿಕಟ್ಟಿದ ಮಿಡಿಗಳು ಕೂಡ ಕರಟುತ್ತಿವೆ. ಅಡಿಕೆ ಮರಗಳ ಎಳೆಮಿಡಿ ಕೂಡ ಬಿಸಿಲಿನ ಹೊಡೆತಕ್ಕೆ ನೆಲಕ್ಕೆ ಉದುರುತ್ತಿದೆ.

ಕಳೆದ ವಾರ ಕಳಸ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಾತ್ರ ಕೊಂಚ ಮಳೆ ಆಗಿದೆ. ಸಂಸೆ, ಹಳುವಳ್ಳಿ, ಬಾಳೆಹೊಳೆ, ಮುನ್ನೂರುಪಾಲು, ಹೆಮ್ಮಕ್ಕಿ, ಇಡಕಿಣಿ, ಎಡೂರು, ಹಿರೇಬೈಲು, ಹೊರನಾಡು ಪ್ರದೇಶದಲ್ಲಿ ಮಳೆ ಆಗದೆ ಬೆಳೆಗಾರರು ಕಂಗಾಲಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.