ಚಿಕ್ಕಮಗಳೂರು: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯ ಹಲವೆಡೆ ಸೋಮವಾರ ಸಂಜೆ ಮಳೆ ಸುರಿದು ತಂಪೆರೆಯಿತು.

ಸಂಜೆ 6 ಗಂಟೆ ಸುಮಾರಿಗೆ ಗುಡುಗು ಮತ್ತು ಸಿಡಿಲಿನ ಅಬ್ಬರದೊಂದಿಗೆ ಮಳೆ ಆರಂಭವಾಯಿತು. ಅರ್ಧ ಗಂಟೆಗಳ ಕಾಲ ಸುರಿದು ಭೂಮಿಯನ್ನು ತಂಪಾಗಿಸಿತು. ನಗರದ ಅಲ್ಲಲ್ಲಿ ರಸ್ತೆಯಲ್ಲಿ ನೀರು ಹರಿಯಿತು.

ಮಲೆನಾಡಿನ ಆಲ್ದೂರು, ಬಾಳೆಹೊನ್ನೂರು, ನರಸಿಂಹರಾಜಪುರ, ತರೀಕೆರೆ ಸುತ್ತಮುತ್ತ ಸೇರಿ ಹಲವೆಡೆ ಮಳೆಯಾಗಿದೆ. ಮಧ್ಯಾಹ್ನ ಬಿಸಿಲ ಝಳ, ರಾತ್ರಿ ವೇಳೆ ಸೆಕೆಯ ನಡುವೆ ಜನ ಕಂಗೆಟ್ಟಿದ್ದರು.

ತಣ್ಣನೆ ಗಾಳಿ ಇಲ್ಲದೆ ನಿದ್ರೆ ಮಾಡಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಎದುರಾಗಿತ್ತು. ಸೋಮವಾರ ಮಳೆ ಸುರಿದ ಕಾರಣ ಸಂಜೆ ತಣ್ಣನೆ ಗಾಳಿ ಬೀಸುತ್ತಿರುವುದು ಜನರಲ್ಲಿ ಸಂತಸ ಮೂಡಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-126-1076135363

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.