ನರಸಿಂಹರಾಜಪುರ (ಚಿಕ್ಕಮಗಳೂರು): ತಾಲ್ಲೂಕು ಪಂಚಾಯಿತಿ ಆವರಣದಲ್ಲಿನ ಶಾಸಕರ ಕಚೇರಿಯ ಬಳಿ ಅಳವಡಿಸಿದ್ದ ಟಿ.ಡಿ.ರಾಜೇಗೌಡ ಹೆಸರಿದ್ದ ಫಲಕ ತೆರವುಗೊಳಿಸಿದ್ದ ಆರೋಪದಲ್ಲಿ ವೆಲ್ಡಿಂಗ್ ಶಾಪ್ ಕಾರ್ಮಿಕ ಹಾಗೂ ಬಿಜೆಪಿಯ ಎಂಟು ಜನ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ವಿನಾಯಕ ವೆಲ್ಡಿಂಗ್ ಶಾಪ್ನ ವರುಣ್, ಬಿಜೆಪಿ ಕಾರ್ಯಕರ್ತರಾದ ಪ್ರದೀಪ್, ಅಶ್ವಿನ್, ಸುಮಂತ್, ರಾಜೇಂದ್ರ, ಫರ್ವೇಜ್, ಮನೋಜ್, ಮದನ್, ದರ್ಶನ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಲಾಗಿದೆ.

‘ಶಾಸಕರ ಹೆಸರಿನ ನಾಮಫಲಕ ಬದಲಾಯಿಸಲು ಪಟ್ಟು ಹಿಡಿದಿದ್ದ ಗುಂಪು ಸಮಯಾವಕಾಶ ಬೇಕು ಎಂದು ತಿಳಿಸಿದರೂ ಒಪ್ಪಲಿಲ್ಲ. ಫಲಕವನ್ನು ಸುರಕ್ಷಿತವಾಗಿ ತೆಗೆದಿಡಲು ವಿನಾಯಕ ವೆಲ್ಡಿಂಗ್ ಶಾಪ್ನ ವರುಣ್ ಎಂಬುವರನ್ನು ಕರೆತರಲಾಗಿತ್ತು. ಫಲಕ ಕೆಳಗೆ ಬೀಳಿಸುತ್ತಿದ್ದಂತೆ ಕೆಲವರು ನಮ್ಮ ಗಮನಕ್ಕೆ ಬಾರದೆ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎನ್.ಎಲ್.ಮನಿಷ್ ದೂರು ನೀಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-725096130

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.