ಚಿಕ್ಕಮಗಳೂರು: ನಗರದ ಹೊರವಲಯದ ಹಿರೇಮಗಳೂರಿನ ಕೋದಂಡ ರಾಮಚಂದ್ರಸ್ವಾಮಿ, ರತ್ನಗಿರಿ ರಸ್ತೆಯ ಶ್ರೀರಾಮ ದೇವಾಲಯ ಸೇರಿದಂತೆ ವಿವಿಧ ಕಡೆಗಳಲ್ಲಿ ಶುಕ್ರವಾರ ಶ್ರೀರಾಮನವಮಿ ಉತ್ಸವ ವೈಭವದಿಂದ ಜರುಗಿತು.

ರಾಮನವಮಿ ಪ್ರಯುಕ್ತ ಹಿರೇಮಗಳೂರಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾಮಾತೆಯ ಮೂರ್ತಿಗಳಿಗೆ ಬೆಳ್ಳಿ ಕಿರೀಟ, ವಸ್ತ್ರ, ಆಭರಣಗಳನ್ನು ತೊಡಿಸಲಾಗಿತ್ತು. ತುಳಸಿ ಮಾಲೆ, ಮಲ್ಲಿಗೆ ಹಾರಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಸುಪ್ರಭಾತ ಸೇವೆ, ಸುಂದರಕಾಂಡ ಪಾರಾಯಣ, ಪಂಚಾಮೃತ ಅಭಿಷೇಕ, ರಾಮತಾರಕ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.

ಎನ್ಎಂಸಿ ವೃತ್ತದ ರಾಮಮಂದಿರದಲ್ಲಿ ಶ್ರೀರಾಮನ ತೊಟ್ಟಿಲ ಸೇವೆ ನಡೆಯಿತು. ಬಸವನಹಳ್ಳಿ ವೇಣುಗೋಪಾಲ ಸ್ವಾಮಿ ದೇಗುಲ, ಹಳೇ ಬಾಳೆಹಳ್ಳಿಯ ವೀರಾಂಜನೇಯಸ್ವಾಮಿ ದೇವಸ್ಥಾನ, ನೇಕಾರರ ಬೀದಿ ಶ್ರೀರಾಮ ದೇವಸ್ಥಾನ, ದಂಟರಮಕ್ಕಿ ಆಂಜನೇಯ ಸ್ವಾಮಿ ದೇವಾಲಯ, ತೇಗೂರು ಆಂಜನೇಯ ದೇವಸ್ಥಾನ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಪಾಲಕ ವಿತರಣೆ ನಡೆಯಿತು.

ನಗರದ ಕೆಲ ಬೀದಿಗಳಲ್ಲಿ ರಾಮನ ವಿಗ್ರಹ ಇಟ್ಟು ಪೂಜಿಸಿ ಪ್ರಸಾದ, ಮಜ್ಜಿಗೆ, ಪಾನಕ ವಿತರಣೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.