ಚಿಕ್ಕಮಗಳೂರು: ಜನಮನವನ್ನು ಜಾಗೃತಗೊಳಿಸಲು ಧರ್ಮ ಬೇಕು. ಗುರುವಿನ ದರ್ಶನ ಪಡೆಯಲು ಭಾಗ್ಯ ಬೇಕು. ಗುರು ದರ್ಶನ ಸಂಸ್ಕಾರದಿಂದ ಭವ ಬಂಧನ ದೂರವಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಭಕ್ತಿ ಭಂಡಾರಿ ಬಸವೇಶ್ವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪ್ರಾಪಂಚಿಕ ಸಂಬಂಧಗಳು ಕಾಲಾಂತರದಲ್ಲಿ ಶಿಥಿಲಗೊಳ್ಳಬಹುದು. ಆದರೆ, ಗುರು– ಶಿಷ್ಯರ ಸಂಬಂಧ ಚಿರಂತನ ಮತ್ತು ನಿತ್ಯ ನೂತನ. ನೊಂದವರ ಬಾಳಿನ ಬೆಳಕು ಗುರು ಮತ್ತು ಅರಿವಿನ ಚೈತನ್ಯದ ಪ್ರತೀಕ. ವೀರಶೈವ ಧರ್ಮ ವೃಕ್ಷದ ತಾಯಿಬೇರು ರೇಣುಕಾಚಾರ್ಯರು. ಆ ಧರ್ಮ ವೃಕ್ಷದ ಹೂವು, ಹಣ್ಣು ಬಸವಾದಿ ಶರಣರು ಇದ್ದಂತೆ. ರೇಣುಕಾಚಾರ್ಯರು ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕು ಬಂಗಾರಗೊಳಿಸಿದರು. ಶಿವಪಥವನ್ನು ಅರಿಯಲು ಗುರು ಪಥವೇ ಮೊದಲು ಎಂದು ಸಾರಿದವರು ಬಸವಣ್ಣ. ಕಾಯಕದ ಮೂಲಕ ಕಳೆಯನ್ನು ತಂದ ಶ್ರೇಯಸ್ಸು ಅವರು ಎಂದರು.

ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಭಕ್ತಿ ಭಂಡಾರಿ ಬಸವೇಶ್ವ ರರು ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನತ್ತ ಹೆಜ್ಜೆ ಹಾಕಲು ಪ್ರೇರೇಪಿಸಿದ ಮಹಾನುಭಾವರು. ಬಾಳಿಗೊಂದು ಗುರಿ ಮತ್ತು ಗುರು ಇರಬೇಕು ಎಂಬುದನ್ನು ಮನವರಿಕೆ ಮಾಡಿ ಕೊಟ್ಟರು’ ಎಂದರು.

ಶಂಕರ ದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ವಿಚಾರ ಧಾರೆ ಎಂದೆಂದಿಗೂ ಎಲ್ಲರಿಗೂ ಬೇಕಾದವು’ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ಉಪಾಧ್ಯಕ್ಷ ಎ.ಬಿ. ಸುದರ್ಶನ್ ಮಾತನಾಡಿ, ‘ರವಿ ಕಿರಣದಿಂದ ಪುಷ್ಪ ಅರಳಿದರೆ ಗುರು ಕರುಣದಿಂದ ಆತ್ಮ ಅರಳುತ್ತದೆ. ಜಗ ಬೆಳಗಲು ಸೂರ್ಯ, ಬದುಕು ಬೆಳಗಲು ಗುರು ಬೇಕು. ಗುರುವಿನ ಆಧ್ಯಾತ್ಮ ಶಕ್ತಿ ಅದ್ಭುತ’ ಎಂದು ತಿಳಿಸಿದರು.

ರೇಣುಕಾಚಾರ್ಯ ಟ್ರಸ್ಟಿನ ಪದಾಧಿಕಾರಿಗಳಾದ ಯು.ಎಂ. ಬಸವರಾಜ್, ಎಂ.ಡಿ. ಪುಟ್ಟಸ್ವಾಮಿ, ಎಸ್.ಎಂ. ದೇವಣ್ಣಗೌಡ, ಎಚ್.ಎನ್. ನಂಜೇಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-126-1113090305

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.