ಬಾಳೆಹೊನ್ನೂರು: ‘ಶಿವಜ್ಞಾನದ ಬೀಜ ಬಿತ್ತಿ ಸಂಸ್ಕಾರ ನೀಡುವಾತನೇ ಗುರು. ಭಕ್ತನ ಹೃದಯ ಭಗವಂತ ನೆಲೆಸಿರುವ ಗುಡಿಯಾಗಿದೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ‘ಕನಸುಗಳನ್ನು ಸಾಕಾರಗೊಳಿಸಲು ಮಾರ್ಗ ಬದಲಿಸಬೇಕೇ ವಿನಾ ನಂಬಿದ ತತ್ವಗಳನ್ನಲ್ಲ. ಗಿಡಗಳು ಚಿಗುರು ಪಡೆಯಲು ಎಲೆ ಉದುರಿಸುತ್ತವೆಯೇ ಹೊರತು ಬೇರುಗಳನ್ನಲ್ಲ. ಸುಳ್ಳಿನ ಪರ ಜನ ಇದ್ದರೆ ಸತ್ಯದ ಪರ ದೇವರು ಇರುತ್ತಾನೆ’ ಎಂದರು.

‘ಸಾವು ಪಡೆಯಲು ಸಾವಿರ ದಾರಿ. ಬದುಕು ಪಡೆಯಲು ಇರುವುದೊಂದೆ ದಾರಿ, ಅದುವೇ ಆತ್ಮ ವಿಶ್ವಾಸ. ಧರ್ಮಕ್ಕಿಂತ ದಯಾಗುಣ ಶ್ರೇಷ್ಠ. ಅರಿವಿಗಿಂತ ಆಚಾರ ದೊಡ್ಡದು. ಅಧಿಕಾರ ಅಂತಸ್ತಿಗಿಂತ ಅಭಿಮಾನ ದೊಡ್ಡದು. ಮಾನ, ಸನ್ಮಾನಕ್ಕಿಂತ ಸಂಸ್ಕಾರ, ಸಂಸ್ಕೃತಿ ದೊಡ್ಡದು. ನಂಬಿಕೆ ಎನ್ನುವ ಚಿಕ್ಕ ಆಸರೆ ಸಿಕ್ಕರೆ ಸಾಕು. ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು’ ಎಂದರು.

ಅಧಿಕ ಜೇಷ್ಠ ಮಾಸದ ಅಂಗವಾಗಿ ಬುಕ್ಕಾಂಬುಧಿ ತಪೋ ಬೆಟ್ಟದಲ್ಲಿ ವಿಶೇಷವಾಗಿ ಜಪ ತಪೋನುಷ್ಠಾನ ನೆರವೇರಿಸಿದ ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ತರ್ಲಘಟ್ಟ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಹುಬ್ಬಳ್ಳಿಯ ವೀರೇಶ ಪಾಟೀಲ, ಹರಿಹರದ ಕೊಂಡಜ್ಜಿ ಪಂಚಾಕ್ಷರಿ, ಪ್ರೊ. ವಜ್ರೇಶ ನಾಗರಾಜ, ಸುರೇಶ, ತರ್ಲಘಟ್ಟದ ವೀರೇಶ ಹಿರೇಮಠ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-126-592943987

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.