ಕಡೂರು: ಪಡಿತರ ಚೀಟಿದಾರರಿಗೆ ಮೇ ತಿಂಗಳಿನಲ್ಲಿ ಆಹಾರ ಧಾನ್ಯ ಹಂಚಿಕೆಯಲ್ಲಿ ಬದಲಾವಣೆ ಇರಲಿದ್ದು, ನ್ಯಾಯಬೆಲೆ ಅಂಗಡಿಯವರು ಪಡಿತರ ಚೀಟಿದಾರರ ಜತೆ ಸಮನ್ವಯದಿಂದ ಸಮರ್ಪಕ ವಿತರಣೆಗೆ ಕೈ ಜೋಡಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ ಸೂಚಿಸಿದರು.

ಕಡೂರು ಪಟ್ಟಣದಲ್ಲಿ ಬುಧವಾರ ನ್ಯಾಯಬೆಲೆ ಅಂಗಡಿ ಪರವಾನಗಿದಾರರ ಸಭೆಯಲ್ಲಿ ಅವರು ಮಾತನಾಡಿದರು.

ನ್ಯಾಯಬೆಲೆ ಅಂಗಡಿಯವರು ಪಡಿತರ ಚೀಟಿದಾರರಿಗೆ ಮೇ ಮತ್ತು ಜೂನ್ ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸಬೇಕಿದೆ. ಈ ಬಾರಿ ರಾಜ್ಯ ಸರ್ಕಾರ ನೀಡುವ ಅನ್ನಭಾಗ್ಯ ಅಕ್ಕಿ ಇರುವುದಿಲ್ಲ, ಬದಲಾಗಿ ಕೇಂದ್ರ ಸರ್ಕಾರವು ಬೆಂಬಲ ಬೆಲೆಯಡಿ ರೈತರಿಂದ ಖರೀದಿಸಿದ ರಾಗಿಯನ್ನು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ (ಎನ್ಎಫ್ಎಸ್ಎ) ವಿತರಿಸುವ ಅಕ್ಕಿಯ ಜತೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಅಂತ್ಯೋದಯ ಅನ್ನ ಯೋಜನೆಯಲ್ಲಿ ಈ ಬಾರಿ ಪ್ರತಿ ಕಾರ್ಡ್ಗೆ ಮೇ ತಿಂಗಳಿಗೆ 35 ಕಿಲೋ ಆಹಾರಧಾನ್ಯ, ಜೂನ್ ತಿಂಗಳಿನ 35 ಕಿಲೋ ಆಹಾರಧಾನ್ಯ ವಿತರಣೆಯಾಗಲಿದ್ದು, ವಿತರಣಾ ಪ್ರಮಾಣವು ರಾಗಿ ವಿತರಣೆ ಇರುವಲ್ಲಿ ತಲಾ 21 ಕಿಲೋ ರಾಗಿ ಮತ್ತು 14 ಕಿಲೋ ಅಕ್ಕಿ ಪ್ರತಿ ಕಾರ್ಡ್ಗೆ ಇರಲಿದೆ. ರಾಗಿ ಹಂಚಿಕೆ ಇಲ್ಲದ ಕಡೆ ತಿಂಗಳಿಗೆ 35 ಕಿಲೋ ಅಕ್ಕಿಯನ್ನು ವಿತರಿಸಲಾಗುವುದು. ಅನ್ನಭಾಗ್ಯ ಅಕ್ಕಿ ವಿತರಣೆ ಇಲ್ಲದ ಕಾರಣ ಯುನಿಟ್ ರೀತಿಯ ಹಂಚಿಕೆ ಈ ಬಾರಿ ಇರುವುದಿಲ್ಲ. ಎರಡು ತಿಂಗಳ ಹಂಚಿಕೆ ನಡೆಯುವುದರಿಂದ ಕಾರ್ಡುದಾರರಿಂದ 2 ಬಾರಿ ಬಯೋಮೆಟ್ರಿಕ್ ಪಡೆದು ಎರಡು ತಿಂಗಳ ಆಹಾರಧಾನ್ಯವನ್ನು ಗೊಂದಲಕ್ಕೆ ಒಳಗಾಗದಂತೆ ವಿತರಿಸಬೇಕು ಎಂದು ನಿರ್ದೇಶಿಸಿದರು.

ಕೇಂದ್ರ ಆದ್ಯತಾ ಕುಟುಂಬಗಳಿಗೂ ಎರಡು ತಿಂಗಳ ಆಹಾರಧಾನ್ಯ ವಿತರಿಸಬೇಕಿದ್ದು, ಒಂದು ಯುನಿಟ್ಗೆ ಒಂದು ತಿಂಗಳಿಗೆ 3 ಕಿಲೋ ರಾಗಿ ಮತ್ತು 2 ಕಿಲೋ ಅಕ್ಕಿ ಹಂಚಿಕೆಯಾಗಿದೆ. ಅದರಂತೆ ಎರಡು ತಿಂಗಳಿಗೆ ಒಂದು ಯುನಿಟ್ಗೆ 6 ಕಿಲೋ ರಾಗಿ ಮತ್ತು 4 ಕಿಲೋ ಅಕ್ಕಿ ವಿತರಿಸಲಾಗುತ್ತದೆ. ರಾಜ್ಯ ಸರ್ಕಾರ ವಿತರಿಸಿರುವ ಆದ್ಯತಾ ಪಡಿತರ ಚೀಟಿಗಳಿಗೆ ರಾಗಿ ಹಂಚಿಕೆ ಇರುವುದಿಲ್ಲ, ಒಂದು ಯುನಿಟ್ಗೆ ತಲಾ 5 ಕಿಲೋ ಅಕ್ಕಿಯಂತೆ ಎರಡು ತಿಂಗಳ ಪಡಿತರ 10ಕಿಲೋ ವಿತರಣೆ ಇರುತ್ತದೆ. ನ್ಯಾಯಬೆಲೆ ಅಂಗಡಿಯವರು ಪಡಿತರ ಕಾರ್ಡುದಾರರಿಗೆ ಪ್ರಮಾಣದ ಬಗ್ಗೆ ವಿವರಿಸಿ ಆಹಾರಧಾನ್ಯ ವಿತರಿಸಬೇಕು. ಯಾವುದೇ ದೂರುಗಳು ಬಾರದಂತೆ ಪಡಿತರ ವಿತರಣೆಗೆ ಮುಂದಾಗಿರಿ. ವಿತರಣಾ ಪ್ರಮಾಣದ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿಯ ಮುಂದೆ ಪ್ರದರ್ಶಿಸಿ, ಇಲಾಖೆಯ ಕಾನೂನುಗಳನ್ನು ಪಾಲಿಸಿ ಎಂದು ಅವರು ಸಲಹೆ ನೀಡಿದರು.

ಇತ್ತೀಚೆಗೆ ನಿಧನರಾದ ನ್ಯಾಯಬೆಲೆ ಅಂಗಡಿ ಪರವಾನಗಿದಾರರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಆಹಾರ ನಿರೀಕ್ಷಕರಾದ ಎಚ್. ಶ್ರೀನಿವಾಸ, ಎಸ್. ಶಿಲ್ಪಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಗೋದಾಮು ವ್ಯವಸ್ಥಾಪಕ ಡಿ. ವೆಂಕಟೇಶ್, ಆಹಾರ ಇಲಾಖೆಯ ಅಂಕಿತಾ ಕುಮಾರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-126-994692253

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.