ಚಿಕ್ಕಮಗಳೂರು: ಸರ್ಫೇಸಿ ಕಾಯ್ದೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ಜಿಲ್ಲಾ ಕಾಫಿ ಬೆಳೆಗಾರರ ಸಂಘ, ಜಿಲ್ಲಾ ಸಣ್ಣ ಬೆಳೆಗಾರರ ಸಂಘ, ಬೆಳೆಗಾರರ ಹಿತ ರಕ್ಷಣಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ತಾಲ್ಲೂಕು ಕಚೇರಿ ಆವರಣದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ನಗರಸಭೆ ಆವರಣದ ಸಂಸತ್ ಸದಸ್ಯರ ಕಚೇರಿ ಎದುರು ಧರಣಿ ಆಕ್ರೋಶ ಹೊರಹಾಕಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಹೇಶ್ ಮಾತನಾಡಿ, ‘ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳ ಹುನ್ನಾರದ ಕಾಯ್ದೆಯೇ ಸರ್ಫೇಸಿ. ರೈತರಿಗೆ, ರೈತ ಕುಟುಂಬಗಳಿಗೆ ಮರಣ ಶಾಸನ ಬರೆಯಲು ಹೊರಡಿರುವ ಕಾಯ್ದೆ ಇದು’ ಎಂದು ಹೇಳಿದರು.

ಸಾಲ ಪಡೆದ ಕುಟುಂಬಕ್ಕೆ ನೋಟಿಸ್ ನೀಡಿ ಮಾನವೀಯ ದೃಷ್ಟಿಯಲ್ಲಿ ಮರುಪಾವತಿ ಮಾಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಆನ್ಲೈನ್ ಮೂಲಕ ರೈತನಿಗೆ ಗೊತ್ತೇ ಆಗದಂತೆ ಹರಾಜು ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಇದನ್ನು ನಿಲ್ಲಸಬೇಕು ಎಂದು ಆಗ್ರಹಿಸಿದರು.

ಈ ದೇಶದ ಕಾನೂನು ಒಬ್ಬ ಕೊಲೆಗಾರನಿಗೂ ಕೂಡ ಕೊನೆ ಆಸೆಯನ್ನು ಕೇಳುತ್ತದೆ. ಆದರೆ, ಒಬ್ಬ ರೈತನನ್ನು ಕೇಳದೆ ತನ್ನ ಭೂಮಿಯನ್ನು ಆನ್ಲೈನ್ ಮೂಲಕ ಹರಾಜು ಮಾಡುವುದು ಸರಿಯಲ್ಲ ಎಂದರು.

‘ಜನಪ್ರತಿನಿಧಿಗಳ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವಾಗ ರೈತರ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ರೈತರನ್ನು ಮರೆಯುತ್ತಾರೆ’ ಎಂದು ದೂರಿದರು.

ಈ ವಿಷಯದಲ್ಲಿ ರಿಯಲ್ ಎಸ್ಟೇಟ್ ಹಾಗೂ ಭೂಮಾಫಿಯಾ ಪ್ರವೇಶ ಮಾಡಿದೆ. ರೈತರ ಜಮೀನನ್ನು ಮನಸೋಇಚ್ಛೆ ಹರಾಜು ಮಾಡಿ ಏಜೆಂಟರಿಗೆ ಮಾರಾಟ ಮಾಡಲಾಗುತ್ತಿದೆ. ಆನ್ಲೈನ್ ಮೂಲಕ ಹರಾಜು ಮಾಡಲು ರೈತರಿಗೂ ಒತ್ತಾಯ ಹೇರಲಾಗುತ್ತಿದೆ. ಇದು ಕೂಡ ಕಾಯ್ದೆಯ ಉಲ್ಲಂಘನೆ ಎಂದು ಆರೋಪಿಸಿದರು.

ಕಾಫಿ ಎಂಬುದು ಕೃಷಿಯ ಒಂದು ಭಾಗ. ಈ ಕೃಷಿಯನ್ನು ಸರ್ಫೇಸಿ ಕಾಯ್ದೆಯ ವ್ಯಾಪ್ತಿಗೆ ತರುವುದು ದೊಡ್ಡ ಅನ್ಯಾಯ. ಸರ್ಫೇಸಿ ಕಾಯ್ದೆ ಇದೆ ಎಂಬುದೇ ಕಾಫಿ ಬೆಳೆಗಾರರಲ್ಲಿ ಶೇ 60ರಷ್ಟು ಜನರಿಗೆ ಗೊತ್ತಿಲ್ಲ. ಇದು ರೈತರಿಗೆ ಮಾರಣಾಂತಿಕ ಕಾಯ್ದೆ. ಈ ಕಾಯ್ದೆಯಲ್ಲಿ ರೈತರ ಗಮನಕ್ಕೆ ಬರದೆ ಆನ್ಲೈನ್ ಮೂಲಕ ಹರಾಜು ಮಾಡಲಾಗುತ್ತಿದೆ ಎಂದು ಕೀಡಿ ಕಾರಿದರು.

ಆನ್ಲೈನ್ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲಿದಿದ್ದರೆ ಬ್ಯಾಂಕ್ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ರೈತ ಮುಖಂಡ ಗುರುಶಾಂತಪ್ಪ, ಕಾಂಗ್ರೆಸ್ ವಕ್ತಾರ ಎಚ್.ಎಚ್. ದೇವರಾಜ್, ಹೊಲಗದ್ದೆ ಗಿರೀಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-126-1057716913

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.