ಬಾಳೆಹೊನ್ನೂರು: ಖಾಂಡ್ಯ ಹೋಬಳಿ ಸಂಗಮೇಶ್ವರ ಪೇಟೆಯಲ್ಲಿರುವ ದೇವದಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳು ನಿರ್ಮಾಣಗೊಂಡಿದ್ದರೂ, ಲೋಕೋಪಯೋಗಿ ಇಲಾಖೆ ಹಸ್ತಾಮತರ ಮಾಡಿಲ್ಲ. ಆದ್ದರಿಂದ ಅಲ್ಲಿ ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ. ಎರಡು ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ₹34.3 ಲಕ್ಷ ಮಂಜೂರಾಗಿದ್ದು, ಜೂನ್ ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವರದಿ ಸಲ್ಲಿಸಿದ್ದಾರೆ.

ದೇವದಾನ ಶಾಲೆಯ ದುಸ್ಥಿತಿ ಕುರಿತು ಮಾ.19 ರಂದು ‘ಪ್ರಜಾವಾಣಿ’ ವಿಸೃತ ವರದಿ ಪ್ರಕಟಿಸಿತ್ತು. ಉಪನಿರ್ದೇಶಕರು ಕೇಳಿದ್ದ ಮಾಹಿತಿ ಆಧರಿಸಿ ಬಿಇಒ ಅವರು ವರದಿ ಸಲ್ಲಿಸಿದ್ದಾರೆ.

2022-23ರಲ್ಲಿ ವಿವೇಕ ಯೋಜನೆ ಯಡಿ 4 ಕೊಠಡಿನಿರ್ಮಾಣಗೊಂಡಿವೆ. ಹಸ್ತಾಂತರ ಮಾಡುವಂತೆ 2026ರ ಜ.29ರಂದು ಮತ್ತೊಮ್ಮೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೂ, ಹಸ್ತಾಂತರವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ತರಗತಿಗಳು ನಡೆಯುತ್ತಿರುವ ಕಟ್ಟಡ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಕಟ್ಟಡ ತೆರವಾಗುವ ಸಾಧ್ಯತೆ ಇರುವುದರಿಂದ ಹಿಂಭಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಈ ಕೊಠಡಿಗೆ ತರಗತಿಗಳ ಸ್ಥಳಾಂತರ ಮಾಡಲು ಎಸ್ಡಿಎಂಸಿ ಸಭೆಯಲ್ಲೂ ಸಮ್ಮತಿ ದೊರ ಕಿಲ್ಲ ಎಂದು ಹೇಳಿದ್ದಾರೆ.

ನರೇಗಾ ಯೋಜನೆ ಅಡಿಯಲ್ಲಿ ಪ್ರೌಢಶಾಲೆ ಹಿಂಭಾಗದಲ್ಲಿ ನಿರ್ಮಾಣಗೊಂಡಿರುವ ಹೊಸ ಕೊಠಡಿಗಳ ಬಳಿಯಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಹಳೆಯ ಕಟ್ಟಡದಲ್ಲಿ ಇರುವ ಶೌಚಾಲಯ ಕೂಡ ಬಳಕೆಗೆ ಯೋಗ್ಯವಾಗಿದೆ ಎಂದು ಮುಖ್ಯ ಶಿಕ್ಷಕರು ತಿಳಿಸಿದ್ದಾರೆ. ಕೊಠಡಿಗಳ ದುರಸ್ತಿಗೆ 2025-26ನೇ ಸಾಲಿನಲ್ಲಿ ₹2 ಲಕ್ಷ ಮಂಜೂರಾಗಿದ್ದು, ತುರ್ತು ಅಗತ್ಯ ಇರುವ ಶಾಲಾ ಕೊಠಡಿ ದುರಸ್ತಿಗೆ ಕ್ರಮ ವಹಿಸಲಾಗಿದೆ. ಎರಡು ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ₹34.3 ಲಕ್ಷ ಮಂಜೂರಾಗಿದ್ದು, ಜೂನ್ ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ವಿವರಿಸಿದ್ದಾರೆ.

ತಾಲ್ಲೂಕು ಪಂಚಾಯಿತಿ ವತಿಯಿಂದ ಅಡುಗೆ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹೊಸ ಕಟ್ಟಡದ ಬಳಿ ಗ್ರಾಮ ಪಂಚಾಯಿತಿಯಿಂದ ನಿರ್ಮಾಣಗೊಂಡಿರುವ ಶೌಚಾಲಯ ಹಸ್ತಾಂತರ ಮಾಡಲು ಹಾಗೂ ಅಲ್ಲಿ ಬೆಳೆದಿರುವ ಗಿಡ ತೆರವುಗೊಳಿಸಲು ಕೋರಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-126-1573240231

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.