ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದಲ್ಲಿ ಈಗ ಆಣೆ-ಪ್ರಮಾಣದ ರಾಜಕೀಯ ಶುರುವಾಗಿದೆ. ಶಾಸಕ ಡಿ.ಎನ್.ಜೀವರಾಜ್ ಪರ ಏಜೆಂಟ್ರಾಗಿದ್ದವರೇ ಜೀವರಾಜ್ ವಿರುದ್ಧ ದೇವಸ್ಥಾನದಲ್ಲಿ ಆಣೆ ಮಾಡಿದ್ದಾರೆ.

2023ರ ಮೇ 13ರಂದು ನಡೆದಿದ್ದ ಮತ ಎಣಿಕೆ ವೇಳೆ ಬಿಜೆಪಿ ಏಜೆಂಟರಾಗಿದ್ದ ಬಿಜೆಪಿಯ ಇಬ್ಬರು ಕಾರ್ಯಕರ್ತರು ದೇವಸ್ಥಾನದಲ್ಲಿ ಶುಕ್ರವಾರ ಆಣೆ ಮಾಡಿದ್ದಾರೆ.

‘ಬಿಜೆಪಿ ಏಜೆಂಟರೇ ಕಾಂಗ್ರೆಸ್ ಜೊತೆ ಸೇರಿ ಅಸಿಂಧು ಅಂಚೆ ಮತಗಳನ್ನು ಕಾಂಗ್ರೆಸ್ನ ಟಿ.ಡಿ. ರಾಜೇಗೌಡರ ಬುಟ್ಟಿಗೆ ಹಾಕಿಸಿದ್ದಾರೆ’ ಎಂಬ ಆರೋಪಗಳ ಹಿನ್ನೆಲೆಯಲ್ಲಿ 2023ರಲ್ಲಿ ಅಂಚೆ ಮತಗಳ ಎಣಿಕೆಯ ಟೇಬಲ್ ಎಜೆಂಟ್ ಆಗಿದ್ದ ಸತೀಶ್ ಅದ್ದಡ ಹಾಗೂ ಎಣಿಕೆ ಏಜೆಂಟ್ ಆಗಿದ್ದ ರಾಮಸ್ವಾಮಿ ಶೆಟ್ಟಿಗದ್ದೆ ಅವರು ಶುಕ್ರವಾರ ಕೊಪ್ಪ ತಾಲ್ಲೂಕಿನ ಗಬ್ಬಾನೆಯ ಭೂತರಾಯಸ್ವಾಮಿ ಗುಡಿ, ಕೊಪ್ಪದ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಪ್ರಮಾಣ ಮಾಡಿದ್ದಾರೆ.

‘2023ರಲ್ಲಿ ಮತ ಎಣಿಕೆಯಲ್ಲಿ ಲೋಪವಾಗಿಲ್ಲ. ಪಾರದರ್ಶಕವಾಗಿ ಎಣಿಕೆ ನಡೆದಿದೆ. ನಾವು ಯಾರ ಜತೆ ಶಾಮೀಲಾಗಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆ ಯಾಗಲಿ. ಇಲ್ಲ ಸುಖಾಸುಮ್ಮನೆ ಆರೋಪ ಮಾಡುತ್ತಿರುವವರಿಗೆ ಶಿಕ್ಷೆಯಾಗಲಿ ಎಂದು ಕೇಳಿಕೊಂಡಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1621670714

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.