ಚಿಕ್ಕಮಗಳೂರು: ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ಐವರನ್ನು ಸಿಐಡಿ ಅರಣ್ಯ ಸಂಚಾರ ದಳದ ಸಿಬ್ಬಂದಿ ನಗರದಲ್ಲಿ ಬಂಧಿಸಿದ್ದಾರೆ.

ದಾವಣಗೆರೆ ಜಿಲ್ಲೆ ಹಸ್ತಪ್ಪನಹಳ್ಳಿಯ ಯತೀಶ್, ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಗುಂತ್ಕಲ್ ತಾಲ್ಲೂಕಿನ ಗೋಲ್ಕದೊಡಿ ಗ್ರಾಮದ ಎಂ.ವಂಶಿ ಕೃಷ್ಣ, ಅನಂತಪುರ ತಾಲ್ಲೂಕು ಆಜಾದ್ ನಗರದ ಎಸ್.ಎ. ಆರೀಫ್, ತುಮಕೂರು ಲೇಬರ್ ಕಾಲೊನಿಯ ಮೆಕ್ಯಾನಿಕ್ ಷಫಿ, ತುಮಕೂರು ಪಿ.ಎಚ್. ಕಾಲೊನಿಯ ಚಾಲಕ ನವಾಜ್ ಪಾಷ ಬಂಧಿತ ಆರೋಪಿಗಳು.

ಮಣ್ಣು ಮುಕ್ಕ ಹಾವು ಸಹಿತ ಆರೋಪಿಗಳಿಗೆ ಸೇರಿದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಐಡಿ ಪೊಲೀಸ್ ಅರಣ್ಯ ಸಂಚಾರ ದಳದ ಉಪನಿರೀಕ್ಷಕ ಬಾಬುದ್ದೀನ್, ಸಿಬ್ಬಂದಿ ದೇವರಾಜ, ಕೃಷ್ಣರಾಜ್ ಅರಸ್, ದಿಲೀಪ್, ನಟರಾಜ್, ಹಾಲೇಶ್ ಹಾಗೂ ಚಾಲಕ ತಿಮ್ಮಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಅರಣ್ಯ ಕಾಯ್ದೆ ಮತ್ತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಸಂಬಂಧಪಟ್ಟ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ದೂ.ಸಂ. 9480800220 (ಮಡಿಕೇರಿ) ಹಾಗೂ 8277949809 (ಚಿಕ್ಕಮಗಳೂರು) ಮಾಹಿತಿ ನೀಡುವಂತೆ ಅರಣ್ಯ ಸಂಚಾರ ದಳದ ಪ್ರಕಟಣೆ ಮನವಿ ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-126-197902773

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.