ಶೃಂಗೇರಿ: ‘ಪ್ರಸ್ತುತ ದೇಶ ಹಾಗೂ ನಮ್ಮೂರುಗಳಲ್ಲಿ ಪ್ರತಿನಿತ್ಯ ಜನರ ಮನಸ್ಸುಗಳಲ್ಲಿ ದ್ವೇಷ, ಅಸೂಯೆ ಬಿತ್ತಿ ಈ ಭವ್ಯ ಭಾರತವನ್ನು ಒಡೆದು ಆಳುವ ಕೆಲಸ ನಡೆಯುತ್ತಿದ್ದು, ಈ ಹೊತ್ತಿನಲ್ಲಿ ಸರ್ವ ಸಮಾಜೋತ್ಸವದಂತಹ ಕಾರ್ಯಕ್ರಮ ಕೂಡಿ ಬಾಳುವ ಸಂದೇಶವನ್ನು ಕೊಡುವ ಉದ್ದೇಶ ಹೊಂದಿದೆ’ ಎಂದು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಮಾತನಾಡಿದರು.

ಶೃಂಗೇರಿಯ ಕೂತುಗೋಡು ಗ್ರಾಮ ಪಂಚಾಯಿತಿಯಲ್ಲಿ ರಮೇಶ್ ಭಟ್ರವರ ಮನೆಯಂಗಳದಲ್ಲಿ ಮೇ 3ರಂದು ನಡೆಯುವ ಸರ್ವ ಸಮಾಜೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಹಲವು ಧರ್ಮಗಳು, ಸಾವಿರಾರು ಭಾಷೆಗಳು, ಹಲವು ಜಾತಿಗಳು, ವಿಭಿನ್ನವಾದ ಆಹಾರ ಕ್ರಮಗಳು, ಎಣಿಸಲಾರದಷ್ಟು ಆಚರಣೆಗಳು, ದೈವಗಳು, ಅಪರಿಮಿತ ತತ್ವಗಳಿಂದ ಒಂದಾಗಿ ಸಾಗುತ್ತಿರುವ ಏಕೈಕ ದೇಶ ಎಂದರೆ ನಮ್ಮ ಭಾರತ. ಇಂತಹ ರಾಷ್ಟ್ರದಲ್ಲಿ ಒಡೆದು ಆಳುವ ಕೆಲಸವನ್ನು ಕೆಲವೊಂದು ದುಷ್ಟ ಶಕ್ತಿಗಳು ಮಾಡುತ್ತಿವೆ. ಹಾಗಾಗಿ ನಾವು ನೀವೆಲ್ಲ ಸೇರಿ ಈ ಸರ್ವ ಸಮಾಜೋತ್ಸವ ಮಾಡುವುದರ ಮುಖಾಂತರ ಕೂಡಿ ಬಾಳುವ ಕೆಲಸ ಮಾಡಬೇಕು. ಆದರಿಂದ ಸಮಾಜಕ್ಕೆ ಯುದ್ಧ ಬೇಡ ಬುದ್ಧನ ವಿಚಾರ ಬೇಕು’ ಎಂದರು.

ಸರ್ವ ಸಮಾಜೋತ್ಸವದ ಶೃಂಗೇರಿ ತಾಲ್ಲೂಕು ಸಮಿತಿ ಅಧ್ಯಕ್ಷ ಛಾಯಾಪತಿ ಮಾತನಾಡಿ, ‘ಸರ್ವ ಸಮಾಜೋತ್ಸವದಲ್ಲಿ ಅನಿಲ್ ಹೊಸಕೊಪ್ಪ ಮತ್ತು ಸುಧೀರ್ ಕುಮಾರ್ ಮುರೋಳ್ಳಿ ನೇತೃತ್ವದಲ್ಲಿ ಮಲೆನಾಡಿಗೆ ಅಗತ್ಯವಾಗಿರುವ ಹಕ್ಕೊತ್ತಾಯಗಳನ್ನು ಮಾಡುತ್ತಿದ್ದಾರೆ. ನಮ್ಮೂರಿಗೆ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜು, ಹೈನುಗಾರಿಕೆ ಬೆಳೆಸಲು ಮಲೆನಾಡಿನಲ್ಲಿ ಹಾಲಿನ ಘಟಕ ಅಗತ್ಯವಿದೆ. ಪ್ರಸ್ತುತ ಮಾರಕ ಅರಣ್ಯ ಕಾಯ್ದೆಗಳಿಂದ ಜನರ ತಮ್ಮ ಅಸ್ತಿತ್ವ ಕಳೆದುಕೊಂಡಿದ್ದಾರೆ. ಆದರಿಂದ ಮಲೆನಾಡಿನಲ್ಲಿ ವಾಸಿಸುವ ಜನರಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ’ ಎಂದರು.

ಸರ್ವ ಸಮಾಜೋತ್ಸವದ ಶೃಂಗೇರಿ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಕೆ.ಎಂ ರಮೇಶ್ ಭಟ್ ಮಾತನಾಡಿದರು. ಸರ್ವ ಸಮಾಜೋತ್ಸವ ಸಮಿತಿಯ ಗೋಳುಗೋಡು ನಾಗೇಶ್, ಸಂತೋಷ್ ಕಾಳ್ಯ, ಜಗದೀಶ್ ಕಣದಮನೆ, ಆದೇಶ ಕೂಡ್ಲುಮಕ್ಕಿ, ಅಂಬಲಮನೆ ಸುಬ್ರಹ್ಮಣ್ಯ ಭಟ್, ತ್ರಿಮೂರ್ತಿ, ಕೆ.ಟಿ ಮಂಜುನಾಥ್, ಕಲ್ಲೋಳ್ಳಿ ಪ್ರದೀಪ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-126-1122478651

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.