ಚಿಕ್ಕಮಗಳೂರು: ‘ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿ ನಡೆದ ಅಕ್ರಮವನ್ನು ಚುನಾವಣಾ ಆಯೋಗ ಪಾರದರ್ಶಕವಾಗಿ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಒತ್ತಾಯಿಸಿದರು.

‘ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಂಥ ಪ್ರಕರಣ ದೇಶದ ಚುನಾವಣಾ ಇತಿಹಾಸದಲ್ಲಿ ಎಂದೂ ನಡೆದಿಲ್ಲ. ಮುಂದೆಂದೂ ನಡೆಯುವುದಿಲ್ಲ. ಮೇಲ್ನೋಟಕ್ಕೆ ಕಾಣುವ ರೀತಿಯಲ್ಲಿ ಎಲ್ಲೋ ಒಂದು ಕಡೆ ಅಕ್ರಮ ನಡೆದಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ದೂರಿದರು.

‘2023ರಲ್ಲಿ ನಡೆದ ಮತ ಎಣಿಕೆ ಸಂದರ್ಭದಲ್ಲಿ ಸರಿ ಇದ್ದದ್ದು 2026ರಲ್ಲಿ ಹೇಗೆ ಸರಿ ಇಲ್ಲ? ಚುನಾವಣೆ ಏಜೆಂಟ್, ಅಭ್ಯರ್ಥಿಗಳು ಅಂದು ಮತ ಎಣಿಕೆಯ ಪ್ರತಿ ಸುತ್ತಿನಲ್ಲೂ ದಾಖಲಾದ ಅಂಚೆ ಮತದಾನದ ವಿವರಗಳನ್ನು ದಾಖಲು ಮಾಡಿ ಸಹಿ ಹಾಕಿದ್ದಾರೆ. ಅಂದು ಚುನಾವಣೆ ಆಯೋಗ ಒಪ್ಪಿರುವ ದಾಖಲೆ 2026ರಲ್ಲಿ ಯಾವ ರೀತಿ ಬದಲಾಯಿತು ಎಂದು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಬೇಕಿದೆ ಎಂದು ಒತ್ತಾಯಿಸಿದರು.

ರಾಜೇಗೌಡರಿಗೆ ಸಂಬಂಧಿಸಿದ ಅಂಚೆ ಮತಗಳು ಮಾತ್ರ ಎರಡು ಗುರುತು ಆಗಿ ತಿರಸ್ಕೃತವಾಗಿದೆ ಎಂದರೆ ಸಾರ್ವಜನಿಕವಾಗಿ ಹಲವಾರು ಚರ್ಚೆಗಳು, ಸಂಶಯಕ್ಕೆ ಎಡೆಮಾಡಿದಂತಾಗಿದೆ ಎಂದರು.

ಸ್ಟ್ರಾಂಗ್ ರೂಂಗೆ ಅಕ್ರಮ ಪ್ರವೇಶ ಆಗಿದೆಯೊ, ಅಂಚೆ ಮತಗಳನ್ನು ತಿದ್ದಲಾಗಿದೆಯೋ, ಇದರ ಹಿಂದೆ ಅಡಗಿರುವ ಸತ್ಯ ತಿಳಿಯ ಬೇಕಿದೆ. ಈ ಸಂಬಂಧ ನಗರದ ಟೌನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ರಾಜೇಗೌಡ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮತ ಮರು ಎಣಿಕೆ ಬಗ್ಗೆ ಪಾರದರ್ಶಕ ತನಿಖೆಯನ್ನು ಚುನಾವಣಾ ಆಯೋಗ ನಡೆಸಬೇಕು ಎಂದು ಒತ್ತಾಯಿಸಿದರು.

2023ರ ಎಣಿಕೆಯಲ್ಲಿ ತಪ್ಪಾಗಿದೆಯೋ ಅಥವಾ 2026ರಲ್ಲಿ ತಪ್ಪಾಗಿದೆಯೋ ಎಂಬುದು ತನಿಖೆಯಾಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗ ಬೇಕು. ಇದು ಜನಾದೇಶ, ಜನರ ವಿಶ್ವಾಸ ಕಳೆದುಕೊಳ್ಳುಬಾರದು ಎಂದರು.

ಚುನಾವಣಾ ಆಯೋಗ ಯಾವುದೇ ಪಕ್ಷಕ್ಕೆ ಸೀಮಿತವಾಗದೆ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ಜನಾದೇಶವನ್ನೇ ತಿರುಚುವಂತಹ ಪ್ರಯತ್ನಕ್ಕೆ ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.

ಸಿಡಿಎ ಅಧ್ಯಕ್ಷ ಮಂಜೇಗೌಡ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ತನೋಜ್ ಕುಮಾರ್ ನಾಯ್ಡು, ಕಾಂಗ್ರೆಸ್ ಎಸ್.ಸಿ ಘಟಕದ ಜಿಲ್ಲಾ ಅಧ್ಯಕ್ಷ ಎಂ.ಮಲ್ಲೇಶ್, ಕೆಪಿಸಿಸಿ ನೀತಿ ಸಂಶೋಧನಾ ಅಧ್ಯಕ್ಷ ಶಿವಕುಮಾರ್, ನಯಾಜ್ ಅಹಮ್ಮದ್, ಜಾವಿದ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-126-1156001623

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.