ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಎಣಿಕೆ ನಂತರ ಡಿ.ಎನ್. ಜೀವರಾಜ್ ಅಥವಾ ಟಿ.ಡಿ.ರಾಜೇಗೌಡ ಅವರು ಪಡೆಯುವ ಮತಗಳಲ್ಲಿ ವ್ಯತ್ಯಾಸ ಕಂಡುಬಂದರೆ ಫಲಿತಾಂಶ ಘೋಷಣೆ ಮಾಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿತ್ತು.

2023ರಲ್ಲಿ ಎಣಿಕೆ ವೇಳೆ ತಿರಸ್ಕೃತ ಗೊಂಡಿದ್ದ 279 ಮತಗಳಲ್ಲಿ ಯಾವುದಾ ದರೂ ಮತ ಮರು ಎಣಿಕೆ ವೇಳೆ ಮಾನ್ಯವಾದರೆ ಅವುಗಳನ್ನು ಹಿಂದೆಯೇ ಸಿಂಧುವಾಗಿದ್ದ ಮತಗಳ ಜತೆಗೆ ಸೇರಿಸಿ, ಎಲ್ಲ ಅಂಚೆ ಮತಗಳನ್ನು ಎಣಿಕೆ ಮಾಡ ಬೇಕು’ ಎಂದು ಆದೇಶದಲ್ಲಿ ತಿಳಿಸಿತ್ತು.

ಶನಿವಾರ (ಮೇ 2) ಬೆಳಿಗ್ಗೆ ಆರಂಭವಾಗಿದ್ದ ಮತ ಎಣಿಕೆ ರಾತ್ರಿ 2 ಗಂಟೆ ತನಕವೂ ನಡೆಯಿತು. ಮತಪತ್ರಗಳನ್ನು ಸ್ಟ್ರಾಂಗ್ ರೂಮಿಗೆ ತಲುಪಿಸಿದ ನಂತರ ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಚುನಾವಣಾಧಿಕಾರಿ ಗೌರವಕುಮಾರ್ ಶೆಟ್ಟಿ ಮಾಧ್ಯಮಗಳಿಗೆ ವಿವರ ನೀಡಿದ್ದರು.

‘ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಲಾಗಿದೆ. ಫಲಿತಾಂಶ ಘೋಷಣೆಗೆ ನನಗೆ ಸ್ಪಷ್ಟ ನಿರ್ದೇಶನ ಇಲ್ಲ. ಎಲೆಕ್ಟ್ರಾನಿಕ್ ಮತಯಂತ್ರಗಳ ಮತಗಳನ್ನು ನಾನು ಎಣಿಕೆ ಮಾಡಿಲ್ಲ. ಅಂಚೆ ಮತಗಳನ್ನಷ್ಟೇ ಎಣಿಕೆ ಮಾಡಿ ಫಲಿತಾಂಶ ಘೋಷಣೆ ಮಾಡಲು ಆಗುವುದಿಲ್ಲ. ನ್ಯಾಯಾಲಯದಲ್ಲಿ ಫಲಿತಾಂಶ ಘೋಷಣೆಯಾಗಲಿದೆ’ ಎಂದೂ ಸ್ಪಷ್ಟಪಡಿಸಿದ್ದರು.

ಆದರೆ, ಭಾನುವಾರ ರಾತ್ರಿ ವೇಳೆಗೆ ಫಲಿತಾಂಶ ಘೋಷಿಸಿದ ಚುನಾವಣಾಧಿಕಾರಿ, ಸೋಮವಾರ ಬೆಳಿಗ್ಗೆ ಡಿ.ಎನ್.ಜೀವರಾಜ್ ಅವರಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.

ಮರು ಮತ ಎಣಿಕೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ, ‘ಈಗಿರುವ ಫಲಿತಾಂಶ ವ್ಯತ್ಯಾಸವಾದರೆ ಆಯೋಗದ ಅನುಮತಿ ಪಡೆದು ಘೋಷಣೆ ಮಾಡಲಾ ಗುವುದು’ ಎಂದೂ ತಿಳಿಸಿದ್ದರು.

ಈ ಕುರಿತು ಸ್ಪಷ್ಟನೆ ಪಡೆಯಲು ಗೌರವಕುಮಾರ್ ಶೆಟ್ಟಿ ಅವರಿಗೆ ಹಲವು ಬಾರಿ ಕರೆ ಮಾಡಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-1710682375

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.