ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳನ್ನು ತಿದ್ದುವ ಮೂಲಕ ಬಿಜೆಪಿ ಗೆಲುವು ಪಡೆದುಕೊಂಡಿದೆ. ಆ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ಆರೋಪಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಪ್ರಭುಗಳು. ಅವರು ನೀಡಿರುವ ತೀರ್ಪಿಗೆ ವಿರುದ್ಧವಾಗಿ ಮತಪತ್ರ ತಿದ್ದುವ ಮೂಲಕ ಫಲಿತಾಂಶ ಪಡೆದುಕೊಳ್ಳಲಾಗಿದೆ. ಮುಗ್ಧರಾದ ರಾಜೇಗೌಡ ಅವರಿಗೂ ಮೋಸ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ದೂರಿದರು.

2023ರಲ್ಲಿ ನಡೆದ ವಿಧಾನಸಭೆ ಮತ ಎಣಿಕೆ ಸಂದರ್ಭದಲ್ಲಿ ಎಲ್ಲಾ ಅಭ್ಯರ್ಥಿಗಳ ಪರವಾಗಿ ಇದ್ದ ಎಣಿಕೆ ಏಜೆಂಟರ ಸಮ್ಮುಖದಲ್ಲಿ ಅಂಚೆ ಮತಗಳನ್ನು ಎಣಿಸಲಾಗಿದೆ. ಟಿ.ಡಿ. ರಾಜೇಗೌಡ ಅವರ ಪರವಾಗಿ ಸಿಂಧುವಾಗಿದ್ದ 255 ಮತಗಳು 3 ವರ್ಷದ ಬಳಿಕ ಅಸಿಂಧುವಾಗಿವೆ ಎಂದರೆ ನಂಬಲು ಅಸಾಧ್ಯ. ಅಂಚೆ ಮತಗಳನ್ನು ಬಹುತೇಕ ಸರ್ಕಾರಿ ನೌಕರರೇ ಹಾಕಿದ್ದಾರೆ. ಅವರು ಇಬ್ಬರಿಗೂ ಮತ ಹಾಕುವಂತಹ ಕೆಲಸ ಮಾಡಿರುವುದಿಲ್ಲ. ಮತಪತ್ರಗಳನ್ನು ತಿದ್ದಿರುವುದರಲ್ಲಿ ಸಂಶಯ ಇಲ್ಲ ಎಂದರು.

ಒಂದೇ ಕಟ್ಟಿನಲ್ಲಿ ಇದ್ದ 170 ಮತಗಳನ್ನು ಉದ್ದೇಶಪೂರ್ವಕವಾಗಿ ತಿದ್ದುಪಡಿ ಮಾಡಲಾಗಿದೆ. ಅವುಗಳಲ್ಲಿ ಎರಡೆರಡು ಗೆರೆ ಎಳೆದವರು ಯಾರು, ಸ್ಟ್ರಾಂಗ್ ರೂಮಿನಲ್ಲಿದ್ದ ಪೆಟ್ಟಿಗೆಗಳ ಸೀಲ್ ತೆಗೆದು ಅಕ್ರಮ ಎಸಗಿದವರು ಯಾರು, ನಾಪತ್ತೆಯಾಗಿದ್ದ ಮತಗಳು ಎಲ್ಲಿ ಹೋದವು ಎಂಬ ಸತ್ಯ ಹೊರಗೆ ಬರಬೇಕಾಗಿದೆ. ಹೀಗಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಅಥವಾ ಎಸ್ಐಟಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಚುನಾವಣಾಧಿಕಾರಿಗೆ ವಕೀಲರು ಹಾಗೂ ಚುನಾವಣಾ ಆಯೋಗದ ಮೂಲಕ ಒತ್ತಡ ಹೇರಲಾಗಿದೆ. ಈ ಪ್ರಕರಣದಲ್ಲಿ ಅಕ್ರಮ ನಡೆದಿರುವ ಬಗ್ಗೆ ಆಯೋಗಕ್ಕೆ ಜಿಲ್ಲಾಧಿಕಾರಿ ದೂರು ಸಲ್ಲಿಸಬೇಕು ಎಂದರು.

ಜೀವರಾಜ್ ಪ್ರಕರಣದಲ್ಲಿ ಇಷ್ಟೊಂದು ತುರ್ತಾಗಿ ತೀರ್ಮಾನ ತೆಗೆದುಕೊಂಡಿರುವ ನ್ಯಾಯಾಲಯ, ಗಾಯತ್ರಿ ಶಾಂತೇಗೌಡ ಅವರ ಪ್ರಕರಣದಲ್ಲಿ ಮೀನಮೇಷ ಎಣಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ರಾಮಚಂದ್ರ, ಶಾಂತಕುಮಾರ್, ಕುಸುಮಾ ಭರತ್, ಸಿಡಿಎ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಎಂ.ಡಿ.ರಮೇಶ್, ಶಾದಬ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-126-1152450733

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.