ತರೀಕೆರೆ: ತಾಲ್ಲೂಕಿನ ತಿಮ್ಮನಬೈಲು ಗ್ರಾಮ ದೇವತೆ ಶ್ರೀಚೌಡೇಶ್ವರಿ ದೇವಿಯ ಹಳೆಯ ದೇವಾಲಯ ಶಿಥಿಲಗೊಂಡಿದ್ದ ಹಿನ್ನೆಲೆ ತಿಮ್ಮನ ಬೈಲು ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರು, ದಾನಿಗಳ ಸಹಕಾರದಿಂದ ಶ್ರೀದೇವಿಯ ನೂತನ ದೇವಾಲಯವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ ಎಂದು ದೇವಾಲಯ ಸಮಿತಿಯ ಪದಾಧಿಕಾರಿ ಅಚ್ಚಣ್ಣಸ್ವಾಮಿ ತಿಳಿಸಿದರು.

ದೇವಾಲಯದ ಉದ್ಘಾಟನೆಯ ಸಂದರ್ಭದಲ್ಲಿ ಶ್ರೀ ದೇವಿಯ ಮೂರ್ತಿಯ ಪುನರ್ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನೆರವೇರಿಸಿ ಮಾತನಾಡಿದ ಅವರು, ಶ್ರೀಚೌಡೇಶ್ವರಿ ದೇವಿ ತಿಮ್ಮನಬೈಲು ಗ್ರಾಮಸ್ಥರಿಗಷ್ಟೇ ಅಲ್ಲದೇ ಸುತ್ತಮುತ್ತಲ ಗ್ರಾಮಗಳಾದ ತಣಿಗೆಬೈಲು, ಜಯಪುರ, ನಂದಿಬಟ್ಟಲು, ವರ್ತೆಗುಂಡಿ, ರೂಪ್ಲೈನ್, ದೂಪದಕಾನು ಗ್ರಾಮಸ್ಥರಿಗೂ ಆರಾಧ್ಯ ದೇವತೆ’ ಎಂದು ಹೇಳಿದರು.

ದೇವಸ್ಥಾನ ನಿರ್ಮಾಣಕ್ಕಾಗಿ ತನು, ಮನ, ಧನ ಸಹಾಯ ನೀಡಿದ ಸಮಸ್ತರಿಗೂ ದೇವಾಲಯ ಸಮಿತಿಯ ವತಿಯಿಂದ ಧನ್ಯವಾದ ತಿಳಿಸಿದರು.

ವಿವಿಧ ಗ್ರಾಮಗಳ ಮುಖಂಡರಾದ ಎಸ್. ಮುತ್ತುರಾಜ್, ಎಸ್. ಶಿವರಾಜ್, ಬಿ. ತಿಪ್ಪೇಶಣ್ಣ, ಭಾಷಾ ಸಾಹೇಬ್, ಆರ್. ರಾಜೇಶ್, ಪುಷ್ಪಾಧರ್ ದೇವಿಯ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ, ದೇವಿಯ ಕೃಪೆಗೆ ಪಾತ್ರರಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-126-2124864386

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.