ತರೀಕೆರೆ: ಪಟ್ಟಣ ಸಮೀಪದ ಅತ್ತಿಗನಾಳು ಮತ್ತು ದ್ಯಾಂಪುರ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸುಮಾರು ಮೂರರಿಂದ ನಾಲ್ಕು ಕಾಡಾನೆಗಳು ದಾಳಿ ಮಾಡಿ ಅಡಿಕೆ, ತೆಂಗು, ಬಾಳೆ ಮತ್ತಿತರೆ ಬೆಳೆ ಮತ್ತು ತಂತಿ ಬೇಲಿಯನ್ನು ನಾಶ ಮಾಡಿವೆ.

ಭಾನುವಾರ ಸಂಜೆ 6.50ರ ಸುಮಾರಿಗೆ ಒಂದು ಮರಿ ಆನೆ ಮತ್ತು ಎರಡು ದೊಡ್ಡ ಆನೆಗಳು ಜಮೀನಿನಲ್ಲಿ ತಿರುಗಾಡುತ್ತಿರುವುದು ಅತ್ತಿಗನಾಳು ಗ್ರಾಮದ ರಂಗಸ್ವಾಮಿ ಅವರ ಜಮೀನಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅತ್ತಿಗನಾಳು ಅರಣ್ಯ ಭಾಗದಿಂದ ಬಂದ ಈ ಆನೆಗಳು ಅತ್ತಿಗನಾಳು ಮತ್ತು ದ್ಯಾಂಪುರ ಭಾಗದ ಹಲವು ರೈತರ ತೋಟಗಳಿಗೆ ಹಾಕಿರುವ ಸೋಲಾರ್ ಬೇಲಿಯನ್ನು ತುಳಿದು ಹಾಳು ಮಾಡಿವೆ ಎಂದು ರೈತರು ತಿಳಿಸಿದ್ದಾರೆ.

ಈ ಭಾಗದ ರೈತರು ಕಾಡಾನೆಗಳ ಉಪಟಳದಿಂದ ಪ್ರತಿ ವರ್ಷ ಲಕ್ಷಾಂತರ ಮೌಲ್ಯದ ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಜತೆಗೆ ತೋಟದ ಕೊಳವೆ ಬಾವಿಗಳಿಗೆ ಅಳವಡಿಸಿರುವ ಮೋಟಾರ್ ಮತ್ತು ಪೈಪ್ಗಳನ್ನು ಕಿತ್ತು ಹಾಕಿ ಹಾಳು ಮಾಡುತ್ತಿವೆ. ಈ ಭಾಗದಲ್ಲಿ ಶೀಘ್ರ ಇಪಿಟಿ ಟ್ರಂಚ್ ತೆಗೆದು ಆನೆಗಳು ಜಮೀನುಗಳತ್ತ ಬರುವುದನ್ನು ನಿಯಂತ್ರಿಸಬೇಕು ರೈತರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-126-140087677

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.