ತರೀಕೆರೆ: ಲಿಂಗದಹಳ್ಳಿ ಹೋಬಳಿಯ ಬಳ್ಳಾವರ, ಗಂಗೂರು ಗ್ರಾಮಗಳ ಸುತ್ತಮುತ್ತ ಕಾಡಾನೆಗಳು ರೈತರ ತೋಟಗಳಿಗೆ ನುಗ್ಗಿ, ಫಸಲಿಗೆ ಬಂದಿದ್ದ ಮಾವು, ಅಡಿಕೆ, ತೆಂಗಿನ ಮರಗಳನ್ನು ತುಳಿದು ನಾಶ ಮಾಡಿವೆ. ಆದ್ದರಿಂದ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಜಮೀನಿಗೆ ಬಾರದಂತೆ ಕ್ರಮ ವಹಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಉಸ್ತುವಾರಿ ಪ್ರಾಧಿಕಾರದ ಉಪಾಧ್ಯಕ್ಷ ಸಮೀವುಲ್ಲಾ ಷರೀಫ್ ಒತ್ತಾಯಿಸಿದ್ದಾರೆ.

ಸಂಜೆ 6ಕ್ಕೆ ಬಳ್ಳಾವರ, ಗಂಗೂರು ಭಾಗದ ತೋಟಗಳಿಗೆ ಕಾಡಾನೆಗಳು ನುಗ್ಗಿ ಫಸಲಿಗೆ ಬಂದ ಮಾವು, ಅಡಿಕೆ, ತೆಂಗಿನ ಮರಗಳನ್ನು ಬುಡ ಸಹಿತ ಮುರಿದು ಹಾಕಿವೆ. ಅಲ್ಲದೆ ತೋಟದಲ್ಲಿ ಕೆಲಸ ಮಾಡುತ್ತಿದ್ದವರನ್ನು ಅಟ್ಟಿಸಿಕೊಂಡು ಬಂದಿವೆ. ತೋಟದಲ್ಲಿದ್ದ ಡ್ರಿಪ್, ಪೈಪ್ಗಳನ್ನು ಹಾಳುಮಾಡಿವೆ ಎಂದು ತಿಳಿಸಿದ್ದಾರೆ.

ಕಾಡಾನೆಗಳು ನಿರಂತರವಾಗಿ ತೋಟಗಳಿಗೆ ನುಗ್ಗಿ ಬೆಳೆ ನಾಶ ಪಡಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಗಂಗೂರು, ಬಳ್ಳಾವರ ಬಳಿ ಆನೆಗಳು ಬಾರದಂತೆ ಕಾಡಿನ ಅಂಚಿನಲ್ಲಿ ಕಂದಕ ತೋಡುವ ಕಾಮಗಾರಿ ಕಾರ್ಯ ಅರ್ಧಕ್ಕೆ ನಿಂತಿರುವುದರಿಂದ ಸಮೀಪದ ಕಾಡಿನಿಂದ ಬರುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ, ಆನೆಗಳು ಕಾಡಿನಿಂದ ದಾಟಿ ಬರದಂತೆ ದೊಡ್ಡ ಕಂದಕಗಳನ್ನು ತೋಡುವ ಕಾಮಗಾರಿ ಕೂಡಲೆ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-126-195912592

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.