ಚಿಕ್ಕಮಗಳೂರು: ನಗರದ ಉಪ್ಪಳ್ಳಿ ಬಡಾವಣೆಯ ಮುಖ್ಯರಸ್ತೆ ಬದಿ ಕಸ ಬೀಳುವುದು ತಪ್ಪಿಲ್ಲ. ಕಸದ ರಾಶಿಯು ಇಡೀ ವಾರ್ಡ್ನ ಸೌಂದರ್ಯ ಹಾಳು ಮಾಡಿದೆ.

ನಗರದಿಂದ ಉಪ್ಪಹಳ್ಳಿ ಮಾರ್ಗದಲ್ಲಿ ಸಾಗಿದರೆ, ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸದ ರಾಶಿ ಕಾಣುತ್ತದೆ. ಹಿರೇಕೊಳಲೆ ಮಾರ್ಗದ ಶಾಂತಿನಗರ ಶನೇಶ್ವರ ದೇವಾಲಯ ಸಮೀಪದ ರಸ್ತೆಯ ಪಕ್ಕದಲೇ ದೊಡ್ಡ ಕಸದ ರಾಶಿ ಇದೆ.

ಮನೆ ತ್ಯಾಜ್ಯ, ಹಳೆಯ ಬಟ್ಟೆಗಳು, ಕಟ್ಟಡ ತ್ಯಾಜ್ಯ, ಹೋಟೆಲ್, ರೆಸ್ಟೋರೆಂಟ್ ತ್ಯಾಜ್ಯ ಹಾಗೂ ಮಾಂಸದ ಅಂಗಡಿಗಳ ತ್ಯಾಜ್ಯ ತಂದು ಸುರಿಯಲಾಗುತ್ತದೆ. ಇದರಿಂದ ಈ ಮಾರ್ಗದಲ್ಲಿ ಮೂಗು ಮುಚ್ಚಿಕೊಂಡು ಸಂಚಾರ ಮಾಡುವ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ.

ಮಲ್ಲಂದೂರು, ಮುತ್ತೋಡಿ, ಹಿರೇಕೊಳಲೆ ಕೆರೆ ಸೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದು. ಗಬ್ಬುನಾರುವ ಕಸದ ರಾಶಿಯಿಂದ ಈ ಮಾರ್ಗದಲ್ಲಿ ಸಂಚಾರ ಮಾಡುವುದೇ ಕಷ್ಟವಾಗಿದೆ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ.

ರಸ್ತೆ ಬದಿ ರಾಶಿ ಮಾಡಿರುವ ಕಸಕ್ಕೆ ಕೆಲವೆಡೆ ಬೆಂಕಿ ಹಚ್ಚಲಾಗಿದೆ. ಇದರಿಂದ ದಟ್ಟಹೊಗೆ ಆವರಿಸಿಕೊಂಡು ರಸ್ತೆಯಲ್ಲಿ ಓಡಾಡಲು ದಾರಿ ಕಾಣದ ಸ್ಥಿತಿ ಇದೆ. ಜೊತೆಗೆ ಪ್ಲಾಸ್ಟಿಕ್ ಕಸಕ್ಕೆ ಬೆಂಕಿ ಹಾಕುವ ಕಾರಣ ದುರ್ವಾಸನೆ ಮತ್ತು ಪರಿಸರದ ಮೇಲೂ ಪರಿಣಾಮ ಬೀರುತ್ತಿದೆ.

ಆಹಾರ ಅರಸಿ ಬರುವ ಬೀಡಾಡಿ ದನಗಳ ಹೊಟ್ಟೆಗೆ ಪ್ಲಾಸ್ಟಿಕ್ ಸೇರುತ್ತಿದೆ. ಆಹಾರ ಹುಡುಕುತ್ತಾ ಬರುವ ಬೀದಿ ನಾಯಿಗಳು ಅನೇಕ ಬಾರಿ ಬೈಕ್ ಸವಾರರನ್ನು ಬೆನ್ನಟ್ಟಿದ ಪರಿಣಾಮ ಅಪಘಾತ ಸಂಭವಿಸಿದ ಉದಾಹರಣೆಗಳೂ ಇವೆ.

ಉಪ್ಪಳ್ಳಿ– ಮಲ್ಲಂದೂರು ಮುಖ್ಯ ರಸ್ತೆಯಲ್ಲಿನ ಖಾಸಗಿ ಕಲ್ಯಾಣ ಮಂಟಪದ ಸಮೀಪದಲ್ಲೇ ದೊಡ್ಡ ಕಸದ ರಾಶಿ ಕಾಣುತ್ತದೆ. ಉಪ್ಪಳ್ಳಿ ಬಡಾವಣೆಯ ನಿವಾಸಿಗಳು ಕಸದ ಗಾಡಿಗೆ ಕಸ ನೀಡುತ್ತಿಲ್ಲ. ಯಾರೂ ಇಲ್ಲದ ವೇಳೆ ಅಥವಾ ರಾತ್ರಿ ವೇಳೆ ಕಸತಂದು ರಸ್ತೆ ಬದಿಯಲ್ಲಿ ಸುರಿದು ಹೋಗುತ್ತಾರೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-126-1485060905

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.