ಚಿಕ್ಕಮಗಳೂರು: ತಾಲ್ಲೂಕಿನ ಕೆಸವಿನಮನೆ ಗ್ರಾಮದ ಕೋಳಿ ಫಾರಂನಲ್ಲಿ ಅಕ್ರಮವಾಗಿ ಯೂರಿಯಾ ಸಂಗ್ರಹ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಗುರುಶಾಂತಪ್ಪ ಒತ್ತಾಯಿಸಿದರು.

ರೈತರಿಗೆ ಸಬ್ಸಿಡಿ ದರದಲ್ಲಿ ಕೊಡಬೇ ಕಾದ 400 ಯೂರಿಯಾ ಚೀಲಗಳನ್ನು ಕೃಷಿ ಇಲಾಖೆ ವಶಪಡಿಸಿಕೊಂಡು ಎಫ್ಐಆರ್ ದಾಖಲು ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಸಗೊಬ್ಬರವನ್ನು ಅಷ್ಟೊಂದು ಪ್ರಮಾಣದಲ್ಲಿ ಸರಬರಾಜು ಮಾಡಿದ ಅಂಗಡಿ ಮಾಲೀಕರು ಯಾರು. ಈ ವ್ಯವಹಾರದಲ್ಲಿ ಯಾರು ಶಾಮಿಲಾಗಿದ್ದಾರೆ. ಐದಾರು ವರ್ಷಗಳಿಂದಲೂ ಈ ದಂಧೆ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ ಎಂದರು.

₹280ರಿಂದ ₹300 ತನಕ ಸಿಗುವ ಯೂರಿಯಾ ಗೊಬ್ಬರವನ್ನು ಮರು ಪ್ಯಾಕ್ ಮಾಡಿ ಮಾರಾಟ ಮಾಡಿದರೆ ಸಾವಿ ರಾರು ರೂಪಾಯಿ ಲಾಭ ಸಿಗಲಿದೆ. ಈ ಆಸೆ ಯಿಂದ ಕಾಳಸಂತೆಕೋರರುಯೂರಿಯಾ ದಾಸ್ತಾನು ಮಾಡಿರಬಹುದು. ಈ ದಂಧೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ಕೋಳಿ ಫಾರಂ ಮಾಲೀಕ ರಾಜೇಶ್ ಮೇಲೆ ಮಾತ್ರ ಎಫ್ಐಆರ್ ದಾಖಲಾಗಿದೆ. ಅವರಿಗೆ ಸರಬರಾಜು ಮಾಡಿದ ರಸಗೊಬ್ಬರ ಮಾರಾಟಗಾರರ ಮೇಲೂ ಎಫ್ಐಆರ್ ದಾಖಲಾಗಬೇಕು ಎಂದು ಒತ್ತಾಯಿಸಿದರು.

5ರಿಂದ 10 ಟನ್ ಯೂರಿಯಾ ಏಪ್ರಿಲ್ ತಿಂಗಳಲ್ಲಿ ಮಾರಾಟ ಮಾಡಿರುವ ಸಂಘಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಕಾಳಸಂತೆಯಲ್ಲಿ ಯೂರಿಯಾ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿದವರ ವಿರುದ್ಧ ಕ್ರಮ ಏನು ಎಂದು ಪ್ರಶ್ನಿಸಿದರು.

ಮುಗುಳವಳ್ಳಿ ಬಸವೇಶ್ವರ ಟ್ರೇಡರ್ಸ್ ರಸಗೊಬ್ಬರಗಳ ಮಾರಾಟಗಾರ ಒಂದೇ ತಿಂಗಳಲ್ಲಿ 256 ಟನ್ ಮಾರಾಟ ಮಾಡಿರುವುದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಅಂಗಡಿ ಜಪ್ತಿ ಮಾಡಿದ್ದಾರೆ. ಇದೇ ರೀತಿ ಬೇರೆ ಕಡೆ ಎಷ್ಟೆಷ್ಟು ಪ್ರಮಾಣದ ರಸಗೊಬ್ಬರಗಳ ಮಾರಾಟ ಮಾಡಿದ್ದಾರೆ. ಕಾಳಸಂತೆಯಲ್ಲಿ ಎಷ್ಟು ರಸಗೊಬ್ಬರ ಮಾರಾಟವಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ವಕ್ತಾರ ಶಿವಣ್ಣ, ಆನಂದ್ ಕುಮಾರ್, ಬಸವರಾಜ್, ಮಧುಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-126-595935499

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.