ಚಿಕ್ಕಮಗಳೂರು: ಬಿರು ಬಿಸಿಲಿನ ನಡುವೆ ಜಿಲ್ಲೆಯ ಕೆರೆಗಳು ಬಹುತೇಕ ತಳ ಮಟ್ಟಕ್ಕೆ ಸೇರಿದ್ದು, ಅಂತರ್ಜಲ ಮಟ್ಟವೂ ಪಾತಾಳ ಸೇರಿದೆ. ಮಳೆಯಾಗದಿದ್ದರೆ ಮುಂದಿನ ದಿನಗಳಲ್ಲಿ ನೀರಿನ ತೊಂದರೆ ಎದುರಿಸುವ ಭಯದಲ್ಲಿ ಗ್ರಾಮೀಣ ಜನರಿದ್ದಾರೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 124 ಕೆರೆಗಳಿವೆ. ಏಪ್ರಿಲ್ ತಿಂಗಳ ಅಂತ್ಯಕ್ಕೆ ಬಹುತೇಕ ಕೆರೆಗಳಲ್ಲಿ ನೀರಿದ್ದರೂ ತಳ ಮಟ್ಟದಲ್ಲಿವೆ. ಇನ್ನು ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಹುತೇಕ ಕೆರೆಗಳು ಖಾಲಿಯಾಗಿವೆ. ಮಲೆನಾಡಿನ ಕೆರೆಗಳಲ್ಲಿ ನೀರಿನ ಸಂಗ್ರಹ ಇದ್ದರೆ, ಬಯಲು ಸೀಮೆಯಲ್ಲಿ ಕೆರೆಗಳು ಬಹುತೇಕ ಖಾಲಿಯಾಗಿವೆ.

ಕಡೂರು ತಾಲ್ಲೂಕಿನ ಪ್ರಮುಖ ಕೆರೆಯಾಗಿರುವ ಅಯ್ಯನಕೆರೆಯಲ್ಲಿ ನೀರು ತಳ ಸೇರಿದೆ. 420 ಎಂಸಿಎಫ್ಟಿ (ಮಿಲಿಯನ್ ಕ್ಯುಬಿಕ್ ಮೀಟರ್) ಸಾಮರ್ಥ್ಯ ಹೊಂದಿರುವ ಅಯ್ಯನಕೆರೆ ಮಳೆಗಾಲ ಆರಂಭಕ್ಕೂ ಮೊದಲೇ ಬಳಕೆಗೆ ಯೋಗ್ಯ ಮಟ್ಟಕ್ಕಿಂತ ಕಡಿಮೆ ಮಟ್ಟದಲ್ಲಿವೆ. ಈ ಕೆರೆಯಿಂದ 550 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲಾಗುತ್ತದೆ.

ಕೆರೆಯಲ್ಲಿ ಈಗ ಶೇ 35ರಷ್ಟು ಮಾತ್ರ ನೀರು ಬಾಕಿ ಇದೆ. ತೂಬುಗಳ ಮೂಲಕ ನೀರು ಹರಿಸಲು ಸಾಧ್ಯವಿಲ್ಲದ ಸ್ಥಿತಿ ಇದೆ. ಕೆರೆಯ ಕೋಡಿ ಸಮೀಪವಿರುವ ತೂಬಿನ ಗೇಟ್ ಸಮಸ್ಯೆಯಾಗಿದ್ದು, ದುರಸ್ತಿ ಅಗತ್ಯವಿದೆ.

ತೂಬಿನ ಲಿಂಕಿಂಗ್ ರಾಡ್ ಸಮಸ್ಯೆ ಸರಿಪಡಿಸಲು 3 ರಿಂದ 4 ಅಡಿ ಹೆಚ್ಚಿಗೆ ನೀರನ್ನು ಕಾಲುವೆಗಳ ಮೂಲಕ ಅಚ್ಚುಕಟ್ಟು ಪ್ರದೇಶಗಳಿಗೆ ಹರಿಸಿದ ಕಾರಣ ಈಗ ಕೆರೆಯಲ್ಲಿ ನಾಲ್ಕರಿಂದ ಐದು ಅಡಿ ನೀರು ಕಡಿಮೆಯಾಗಿದೆ. ಮಳೆಗಾಲ ಆರಂಭಕ್ಕೂ ಮೊದಲು ತೂಬಿನ ಗೇಟ್ ರಿಪೇರಿ ಮಾಡಬೇಕು. ಇಲ್ಲದಿದ್ದರೆ ಮತ್ತೆ ಮುಂದಿನ ವರ್ಷ ಸಮಸ್ಯೆಯಾಗಲಿದೆ. ಈ ಬಾರಿ ಹಿಂದಿನ ವರ್ಷಗಳಿಗಿಂತ ಬಿಸಿಲು ಹೆಚ್ಚು ಇದೆ. ಮುಂಗಾರು ಪೂರ್ವ ಮಳೆ ಬಾರದಿದ್ದರೆ ಸಮಸ್ಯೆ ಹೆಚ್ಚಾಗಲಿದೆ ಎಂಬ ಆತಂಕ ರೈತರಲ್ಲಿದೆ.

ಮುಂಗಾರು ಪೂರ್ವ ಮಳೆ ಅಲ್ಲಲ್ಲಿ ಸುರಿದಿದೆ. ಆದರೆ, ಕೆರೆಗಳಲ್ಲಿ ನೀರಿಲ್ಲದಿರುವುದರಿಂದ ಅಂತರ್ಜಲ ಸಂಪೂರ್ಣ ಕುಸಿದಿದ್ದು, ಇದು ಜನ–ಜಾನುವಾರುಗಳ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ ಎಂಬುದು ರೈತರ ಅಭಿಪ್ರಾಯ.

ಪ್ರಜಾವಾಣಿ ತಂಡ: ಕೆ.ನಾಗರಾಜ್, ಕೆ.ವಿ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಎನ್.ಸೋಮಶೇಖರ್

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-126-1202149534

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.